News Karnataka Kannada
Saturday, May 11 2024
ಉತ್ತರಕನ್ನಡ

ಮಾಜಾಳಿ ಕಡಲತೀರದಲ್ಲಿ ಟೈಗರ್ ಶಾರ್ಕ್ ಕಳೇಬರ ಪತ್ತೆ

New Project 2021 09 22t140221.253
Photo Credit :

ಕಾರವಾರ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವ ಟೈಗರ್ ಶಾರ್ಕ್ ನ ಕಳೇಬರ ಮಾಜಾಳಿ ಸಮುದ್ರದ ತೀರದಲ್ಲಿ ಪತ್ತೆಯಾಗಿದೆ. ಟೈಗರ್ ಶಾರ್ಕ್ ಸದ್ಯದ ಪರಿಸ್ಥಿತಿಯಲ್ಲಿ ವಿನಾಶದ ಅಂಚಿನಲ್ಲಿರುವ ಮೀನು. ಶಾರ್ಕ್  ಮೀನಿನ ಬೇರೆ  ಪ್ರಭೇದದ ಮೀನನನ್ನು ಸ್ಥಳೀಯವಾಗಿ ಆಹಾರಕ್ಕಾಗಿ ಬಳಕೆ ಮಾಡಲಾಗುತ್ತದೆ. ಆದರೆ ಟೈಗರ್ ಶಾರ್ಕ್ ತಿನ್ನಲು ರುಚಿ ಇರುವುದಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯರು, ಇಲ್ಲಿನ ಮೀನುಗಾರರು ಇದನ್ನು ತಿನ್ನಲು ಇಷ್ಟ ಪಡುವುದಿಲ್ಲ. ಮಾಜಾಳಿ ಕಡಲ ತೀರದಲ್ಲಿ ಪತ್ತೆಯಾಗಿರುವ ಹೆಣ್ಣು ಟೈಗರ್ ಶಾರ್ಕ್ ಸುಮಾರು 2 ಮೀಟರ್  ಉದ್ದವಿದ್ದು ಸುಮಾರು 30 ಕೆ.ಜಿ. ತೂಕ ಹೊಂದಿದೆ. ಈ ಮೀನನ್ನು ಇಲ್ಲಿನ ಜನರು ಇಷ್ಟಪಡದ ಕಾರಣ ಕಡಲತೀರದಲ್ಲಿ ಹಾಗೇ ಬಿಡಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೈಗರ್ ಶಾರ್ಕ್ ಗೆ  ಭಾರೀ ಬೇಡಿಕೆ ಇದ್ದು ಇದರ ಸೂಪ್ ಮಾಡಿ ಅಲ್ಲಿನ ಜನರು ಸೇವನೆ ಮಾಡುತ್ತಾರೆ ಎಂದು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಹರಗಿ ಅವರು ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ಟೈಗರ್ ಶಾರ್ಕ್ 600 ಕೆ.ಜಿ. ಹಾಗೂ ಆರು ಮೀಟರ್ ವರೆಗೂ ಬೆಳೆಯುತ್ತದೆ. ಇವುಗಳು 30 ರಿಂದ 40 ವರ್ಷದ ವರೆಗೆ ಜೀವಿಸುವ ಇವು, ಸಮುದ್ರದ ಬಲಿಷ್ಠ ಮೀನುಗಳಲ್ಲಿ ಒಂದಾಗಿದೆ. ತಿಮಿಂಗಲ, ಮನುಷ್ಯರು ಸೇರಿದಂತೆ ಇನ್ನಿತರ ಸಮುದ್ಯ ಜೀವಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಟೈಗರ್  ಶಾರ್ಕ್ ಈಗ ಅಳಿವಿನ ಅಂಚಿನಲ್ಲಿರುವ ಮೀನು ಎಂದು ಕೆಂಪು ಪುಸ್ತಕದಲ್ಲಿ ದಾಖಲಿದೆ ಎಂದು ಡಾ. ಹರಗಿ ಅವರು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು