News Karnataka Kannada
Tuesday, May 07 2024
ಉತ್ತರಕನ್ನಡ

ಬನವಾಸಿ ಅರಣ್ಯ ವಲಯ ವ್ಯಾಪ್ತಿಯ ಬಿಸಲಕೊಪ್ಪದಲ್ಲಿ ಕಾಡಾನೆಗಳ ಹಿಂಡು ಸುತ್ತಾಟ!

Elephant
Photo Credit :

ಬನವಾಸಿ:  ಬನವಾಸಿ ಅರಣ್ಯ ವಲಯ ವ್ಯಾಪ್ತಿಯ ಬಿಸಲಕೊಪ್ಪ ಗ್ರಾಮ ಪಂಚಾಯತಿಯ ಬಿಸಲಕೊಪ್ಪ ಮತ್ತು ಎಕ್ಕಂಬಿಯಲ್ಲಿ ಆನೆಗಳ ಹಿಂಡು ಕಂಡುಬಂದಿದ್ದು ಇಲ್ಲಿನ ಅರಣ್ಯ ಪ್ರದೇಶ ಮತ್ತು ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸುತ್ತಾಟ ನಡೆಸುತ್ತಿದೆ.

ನಾಲ್ಕು ಆನೆಗಳಲ್ಲಿ ಒಂದು ಗಂಡು, ಎರಡು ಹೆಣ್ಣು ಮತ್ತು ಒಂದು ಮರಿಯಾನೆಗಳಿವೆ. ಡಿಸಿಎಫ್ ಎಸ್.ಜಿ ಹೆಗಡೆ ಹಾಗೂ ಎಸಿಎಫ್ ಅಶೋಕ ಅಲಗೂರ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಉಷಾ ಕಬ್ಬೇರ ಹಾಗೂ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದು ರೈತರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

ಆನೆಗಳಿಂದ ಯಾವುದೇ ಕೃಷಿ ಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ. ಆದರೂ ಆನೆಗಳ ಸುತ್ತಾಟದಿಂದ ಸಾರ್ಜನಕರು, ರೈತರಲ್ಲಿ ಆತಂಕ ಮನೆಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು