ಉತ್ತರಕನ್ನಡ

ಜೊಯಿಡಾದಲ್ಲಿ ಗಮನ ಸೆಳೆದ ಗೆಡ್ಡೆ ಗೆಣಸು ಮೇಳ

ಜೊಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಗುಡ್ಡಗಾಡುಗಳಲ್ಲಿ ಬೆಳೆಯುವ ಗೆಡ್ಡೆ ಗೆಣಸುಗಳ ಪ್ರದರ್ಶನ ಬುಧವಾರ ನಡೆಯಿತು. ಇಲ್ಲಿ ವಾಸಿಸುವವರಿಗೆ ಗೆಡ್ಡೆ ಗೆಣಸುಗಳೇ ಪ್ರಮುಖ ಆಹಾರವಾಗಿದ್ದು ಜೋಯಿಡಾದಲ್ಲಿ ಆಯೋಜಿಸಿದ್ದ ಗೆಣಸು ಮೇಳ ಎಲ್ಲರ ಗಮನ ಸೆಳೆದಿದ್ದು, ಮೇಳದಲ್ಲಿ 50 ಕ್ಕೂ ಹೆಚ್ಚು ಗೆಡ್ಡೆ ಗೆಣಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

ಜೊಯಿಡಾದ ಕುಣುಬಿ ಜನಾಂಗದವರು ಕಾಡು ಹಾಗೂ ಮನೆಯ ಹಿತ್ತಲಿನಲ್ಲಿ ಬೆಳೆದ ಅಪರೂಪದ ಗಡ್ಡೆಗೆಣಸುಗಳನ್ನು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಕಳೆದ ಐದು ವರ್ಷಗಳಿಂದ ಜೊಯಿಡಾದಲ್ಲಿ ನಡೆಸುತ್ತಿರುವ ಗಡ್ಡೆ ಗೆಣಸು ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಕಷ್ಟು ಹೆಸರು ಪಡೆದಿದೆ. ಮೇಳದಲ್ಲಿ 140ಕ್ಕೂ ಅಧಿಕ ಕೃಷಿಕರು 54 ಬಗೆಯ ಗೆಣಸುಗಳನ್ನು ಮೇಳದಲ್ಲಿ ಮಾರಾಟ ಮಾಡಿದರು.
ಅಪರೂಪದಲ್ಲಿಯೇ ಅಪರೂಪವಾದ ಗೆಡ್ಡೆ- ಗೆಣಸು ಈ ಮೇಳದಲ್ಲಿ ಸಿಗುವುದರಿಂದ ಬೇರೆ ಬೇರೆ ಭಾಗಗಳಿಂದ ನೂರಾರು ಜನರು ಖರೀದಿಗಾಗಿ ಆಗಮಿಸಿದ್ದಾರೆ. ಗಡ್ಡೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸುವುದೇ ರೈತರಿಗೆ ದೊಡ್ಡ ಕೆಲಸ. ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳನ್ನು ಮಾರುಕಟ್ಟೆ ವ್ಯವಸ್ಥೆಗೆ ತರಲು ಪ್ರತಿ ವರ್ಷ ಜೊಯಿಡಾದಲ್ಲಿ ನಡೆಯುವ ಗಡ್ಡೆ ಗೆಣಸಿನ ಮೇಳ ವೇದಿಕೆ ಕಲ್ಪಿಸಿದೆ‌ ಎನ್ನುವುದು ಇಲ್ಲಿಯ ಸ್ಥಳೀಯರ ಅಭಿಪ್ರಾಯವಾಗಿದೆ.
ಮೇಳದಲ್ಲಿ ಗೆಣಸುಗಳು ಮಾತ್ರವಲ್ಲದೇ ಬೆತ್ತದಿಂದ ತಯಾರಿಸಲಾದ ಮೊರ, ಚಾಪೆ, ಜೇನುತುಪ್ಪ, ವಾಟೆಹುಳಿ, ಶುಂಠಿ, ಅರಶಿನ ಕೊಂಬು, ಮೊಗೆಕಾಯಿ, ಈರುಳ್ಳಿ, ಕೆಂಪು ಗೆಣಸು, ಬಿಳಿ ಗೆಣಸು, ಮುಳ್ಳಿ, ಕೋನ್, ಜಾಡ ಕಣಗ, ಕಾಟೇ ಗಣಗ, ಕಾಸರಾಳು, ರಳದ್, ಮುಡ್ಲಿ, ಸವತೆ, ತೇರೋ, ಆನೆಬಾಳೆ, ಥೈಪಳ್, ಕರಂದೆ, ಕಣಗೆ, ಅಂಬಾಡಿ, ಕೆಸು, ಅಪ್ಪೆಮಿಡಿ, ಕೆಂಪು ಹರಿವೆ ಬೀಜ, ಮುಳ್ಳುಕೋನ, ಚಿಕ್ಕು, ಮೌವಳಿ, ಹಲಸು, ಎಲಕ್ಕಿ, ಮುರುಗಲು, ಬೆಟ್ಟದ ನೆಲ್ಲಿಕಾಯಿಗಳನ್ನು ತಂದು ಮಹಿಳೆಯರು ಮಾರಾಟ ಮಾಡಿದರು. ವಿಶೇಷ ಅಂದ್ರೆ ಮೇಳದಲ್ಲಿ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ‌. ಅಲ್ಲದೆ ಗೆಡ್ಡೆ ಗೆಣಸುಗಳ ಮೇಳ ಸಾರ್ವಜನಿಕರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.
Swathi MG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

8 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

10 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

10 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

10 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

10 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

11 hours ago