News Karnataka Kannada
Sunday, April 28 2024
ಉಡುಪಿ

ಪಂಚ ಕರ್ಮಗಳಿಗೆ ಅಧಿಪತಿ ವಿಶ್ವಕರ್ಮ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Vishwakarma is the lord of five karmas: MLA Gurme Suresh Shetty
Photo Credit : News Kannada

ಉಡುಪಿ: ಕಾಪು ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮವನ್ನು ಕಾಪು ಕಾಳಿಕಾಂಬ ದೇವಸ್ಥಾನದಲ್ಲಿ ಇಂದು ಆಯೋಜಿಸಲಾಯಿತು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಮಾತನಾಡಿ, ಪಂಚ ಕರ್ಮಗಳಿಗೆ ಅಧಿಪತಿ ವಿಶ್ವಕರ್ಮ. ವಿಶ್ವಕರ್ಮ ಸಮಾಜದವರು ಸಾತ್ವಿಕ ಪರಂಪರೆಯ ಸಮಾಜವಾದವರು. ಪ್ರಧಾನಿ ನರೇಂದ್ರ ಮೋದಿ ಅವರು ಪಿ.ಎಂ ವಿಶ್ವಕರ್ಮ ಯೋಜನೆಯನ್ನು ಇಂದಿನಿಂದ ಜಾರಿಗೊಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಪು ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶೇಖರ್ ಆಚಾರ್ಯ, ಕಟಪಾಡಿ ವೇಣುಗಿರಿ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ನವೀನ್ ಆಚಾರ್ಯ ಪಡುಬಿದ್ರಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟ (ರಿ.) ಅಧ್ಯಕ್ಷರಾದ ಮುಲ್ಕಿ ಮಧು ಆಚಾರ್ಯ, ಕಾಪು ವಿಶ್ವ ಬ್ರಾಹ್ಮಣ ಯುವ ಸಂಘಟನೆ ಅಧ್ಯಕ್ಷರಾದ ಬಿಳಿಯಾರು ಸುಧಾಕರ ಆಚಾರ್ಯ, ಮುರುಡೇಶ್ವರ ಆರ್.ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರಾದ ಚೇಂಪಿ ದಿನೇಶ್ ಆಚಾರ್ಯ, ಕಾಪು ತಹಶೀಲ್ದಾರರಾದ ನಾಗರಾಜ್ ನಾಯ್ಕಡ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು