Categories: ಉಡುಪಿ

ಉಡುಪಿ: ತಾಕತ್ತಿದ್ದರೆ ಬಜರಂಗದಳ ನಿಷೇಧಿಸಿ – ಯಶ್ ಪಾಲ್ ಸುವರ್ಣ ಆಕ್ರೋಶ

ಉಡುಪಿ: ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಾಕತ್ತಿದ್ದರೆ ಬಜರಂಗದಳವನ್ನು ನಿಷೇಧಿಸಿ ಎಂದು ಉಡುಪಿ ಜಿಲ್ಲಾ ಬಜರಂಗದಳದ ಮಾಜಿ ಸಂಚಾಲಕ, ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುತ್ವದ ವಿಚಾರಧಾರೆಯೊಂದಿಗೆ ರಾಷ್ಟ್ರ ವಿರೋಧಿಗಳಿಗೆ ಸಿಂಹ ಸ್ವಪ್ನ ಸಂಘಟನೆಯಾಗಿ, ಗೋ ಕಳ್ಳರ ಹಾಗೂ ಲವ್ ಜಿಹಾದಿಗಳ ವಿರುಧ್ದ ಕಠಿಣ ನಿಲುವು ತಾಳಿದ ದೇಶ ಭಕ್ತ ಹಿಂದೂ ಸಂಘಟನೆಯನ್ನು ದಮನಿಸುವ ಯತ್ನದ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತರ ಓಲೈಕೆಗೆ ಮುಂದಾಗಿದೆ.

ಈ ಹಿಂದೆ ಸದಾ ಹಿಂದೂ ವಿರೋಧಿ ನಿಲುವಿನ ಸರಕಾರ ನಡೆಸಿದ ಸಿದ್ದರಾಮಯ್ಯ ಈಗಾಗಲೇ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಹ್ತಿರದಿಂದ ಹಿಂಪಡೆಯುವ ಬಗ್ಗೆ ಹಾಗೂ ಟಿಪ್ಪು ಜಯಂತಿ ಆಚರಣೆಗೆ ಮುಂದಾಗುವ ಮೂಲಕ ಹಿಂದೂ ಸಂಘಟನೆಯ ಕಾರ್ಯಕರ್ತರ ತಾಳ್ಮೆ ಪರೀಕ್ಷೆಗೆ ಮುಂದಾಗಿದ್ದಾರೆ.

ಕೇಸರಿ ಶಾಲು ಧರಿಸಿ ಮನೆ ಮನೆ ಭೇಟಿ ನೀಡಿ ನಕಲಿ ಹಿಂದುತ್ವದ ಮುಖವಾಡ ಧರಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಬಜರಂಗದಳ ನಿಷೇಧದ ಬಗ್ಗೆ ತಮ್ಮ ನಿಲುವು ಸ್ಪಷ್ಟ ಪಡಿಸಲಿ. ಕಾಂಗ್ರೆಸ್ ಪಕ್ಷದ ಈ ಹಿಂದೂ ವಿರೋಧಿ ಮನಸ್ಥಿತಿಗೆ ಸಮಸ್ತ ಹಿಂದೂ ಸಮಾಜ ತಕ್ಕ ಉತ್ತರ ಮುಂದಿನ ಚುನಾವಣೆಯಲ್ಲಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ashika S

Recent Posts

ಗಬ್ಬೆದ್ದು ನಾರುತ್ತಿರುವ ಚರಂಡಿ: ಅಂಬೇಡ್ಕರ್ ನಾಮಫಲಕದ ಬಳಿಯೇ ದುರ್ನಾತ

ಗಬ್ಬೆದ್ದು ನಾರುತ್ತಿರುವ ಚರಂಡಿಯ ಅವ್ಯವಸ್ಥೆಯಿಂದಾಗಿ ಗ್ರಾಮಸ್ಥರು ಮೂಗು, ಬಾಯಿ ಮುಚ್ಚಿಕೊಂಡೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ…

8 mins ago

ಪ್ರಜ್ವಲ್ ರೇವಣ್ಣ ಸಹ ಅರೆಸ್ಟ್ ಆಗಲೇಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಪ್ರಜ್ವಲ್ ರೇವಣ್ಣ ಅವರ ಪೆನ್‍ಡ್ರೈವ್ ಪ್ರಕರಣ ಹಾಗೂ ರೇವಣ್ಣ ಬಂಧನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,…

17 mins ago

ಮಳೆರಾಯನಿಗಾಗಿ ದೇವರ ಮೊರೆ ಹೋದ ತುಮಕೂರು ಜನತೆ

ಬಿಸಿಲ ತಾಪಕ್ಕೆ ಜನ ಜೀವನ ತತ್ತರಿಸಿ ಹೋಗಿದ್ದು, ಇದೀಗ ಮಳೆರಾಯನ ಕಣ್ಣಾಮುಚ್ಚಾಲೆ ಆಟ ನಿಲ್ಲಿಸಲೆಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ…

18 mins ago

ಕರ್ನಾಟಕದ ಮಾನ-ಮರ್ಯಾದೆ ರಸ್ತೆಗಳಲ್ಲಿ ಪೆನ್‌ಡ್ರೈವ್ ಮೂಲಕ ಹರಾಜಾಗುತ್ತಿದೆ

ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ  ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದೆ. ಪ್ರಜ್ವಲ್ ದೇಶ ಬಿಟ್ಟು ಹೋಗಲು ಕೇಂದ್ರದ ಸಪೋರ್ಟ್ ಇದೆ ಎಂದು ಯುವ…

35 mins ago

ಪ್ರಜ್ವಲ್ ವಿಡಿಯೋದಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಹೈ ಟೆನ್ಷನ್!

ಹಾಸನದಲ್ಲಿ ವೈರಲ್ ಆದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಇವತ್ತು ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ…

38 mins ago

ಮುಸ್ಲಿಮರಿಗೆ ನೀಡಿರುವ ಶೇ.4ರಷ್ಟು ಮೀಸಲಾತಿಯನ್ನು ಮುಂದುವರೆಸುತ್ತೇವೆ ಎಂದ ಟಿಡಿಪಿ

ಚುನಾವಣೆಯಲ್ಲಿ ಗೆದ್ದರೆ ಮುಸ್ಲಿಮರಿಗೆ ನೀಡಲಾಗಿರುವ ಶೇ.4ರಷ್ಟು ಮೀಸಲಾತಿಯನ್ನು ಮುಂದುವರೆಸುತ್ತೇವೆ ಎಂದು ತೆಲುಗು ದೇಶಂ ಪಕ್ಷದ(ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು…

42 mins ago