ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ಈಗಾಗಲೇ ತೀರ್ಮಾನಿಸಿದ್ದಾರೆ – ಗೆಹೋಟ್

ಹುಬ್ಬಳ್ಳಿ: ಚುನಾವಣೆ ಹೊತ್ತಿನಲ್ಲಿ ಇಷ್ಟೊಂದು ಓಡಾಡುವ ಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಯಾಕೆ ಬಂದಿದೆ? ಇಬ್ಬರು ರಾಷ್ಟ್ರೀಯ ನಾಯಕರು ಯಾಕೆ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ? ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜಸ್ಥಾನ ಸಿಎಂ ಅಶೋಕ್ ಗೆಹೋಟ್ ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳಿರುವ ರಾಜ್ಯಗಳನ್ನು ಹೋಲಿಸಿ ನೋಡಿ. ಯಾವ ರಾಜ್ಯದಲ್ಲಿ ಉತ್ತಮ ಆಡಳಿತವಿದೆ ಎಂದು ಮೋದಿ ಗಮನಿಸಲಿ. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಈ ನಡುವೆ ಧರ್ಮಗಳ ನಡುವೆ ಒಡುಕು ಹುಟ್ಟಿಸಲಾಗುತ್ತಿದೆ. ಆದರೆ ಧರ್ಮ ಮತ್ತು ಜಾತಿ ಹೆಸರಲ್ಲಿ ರಾಜಕೀಯ ಬಹಳದಿನ ನಡೆಯಲ್ಲ. ಹಿಟ್ಲರ್ ಕೂಡ ಧರ್ಮದ ಹೆಸರು ಹೇಳಿಕೊಂಡು ಬಹಳ ಜನಪ್ರಿಯವಾಗಿದ್ದ. ಆ ನಂತರ ಹಿಟ್ಲರ್ ಜರ್ಮನಿಯನ್ನು ಹಾಳು ಮಾಡಿದ ಎಂದು ಗೆಹೋಟ್ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಈಗಾಗಲೇ ತೀರ್ಮಾನಿಸಿದ್ದಾರೆ. ಪ್ರಮುಖ ಪಕ್ಷಗಳ ನಾಯಕರ ಬಗ್ಗೆ ಭ್ರಷ್ಟರ ಗುಂಪು ಎಂದು ಪಿಎಮ್ ಕರೆಯುತ್ತಾರೆ. ಆರ್‌ಎಸ್ಎಸ್ ಮೋದಿಯವರ ಬಾಯಿ ಮುಚ್ಚಿಸಿದೆ. ಬಿಜೆಪಿಗೆ ಕಡಿಮೆ ಸೀಟ್ ಬಂದರೆ ಕುದುರೆ ವ್ಯಾಪಾರ ಮಾಡುವುದೇ ಕೆಲಸವಾಗಿದೆ. ದೇಶದಲ್ಲಿ ಒಂದೇ ಸರ್ಕಾರವಿರಲಿ ಅನ್ನೋ ಹುನ್ನಾರ ಮಾಡುತ್ತಿದ್ದಾರೆ. ಎಲ್ಲಾ ವಿರೋಧ ಪಕ್ಷಗಳ ಮೇಲೆ ಐಟಿ, ಇಡಿ, ಸಿಬಿಐ ರೇಡ್ ಮಾಡಿಸ್ತಾರೆ.

ರಾಜಸ್ತಾನದ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲ ಕೊಟ್ಟಿದ್ದೇವೆ. ಫ್ರೀ ಕೊಟ್ಟರೆ ದಿವಾಳಿ ಆಗುವುದಾದರೆ ನಮ್ಮ ರಾಜ್ಯ ದೇಶದಲ್ಲಿ ಯಾಕೆ ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿದೆ. ಸಾಮಾಜಿಕ ಸಾಮರಸ್ಯ ಹದಗೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಹೇಳಿದೆ. ಭಜರಂಗದಳ ನಿಷೇಧ ವಿಚಾರದಲ್ಲಿ ಕೋರ್ಟ್ ನಿಲುವೇ ನಮ್ಮ ನಿಲುವು ಎಂದು ಅಶೋಕ್ ಗೆಹೋಟ್ ಹೇಳಿದರು.

Ashika S

Recent Posts

ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು

ರಾಯ್ ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ.

6 mins ago

ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಪ್ರಜ್ವಲ್‌ ರೇವಣ್ಣ ಆಗಮನ

ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಇಂದು ಭಾರತಕ್ಕೆ ಬರಲಿದ್ದು, ದುಬೈನಿಂದ…

19 mins ago

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯಿಂದ ಕುಸ್ತಿಪಟು ಭಜರಂಗ್ ಪುನಿಯಾ ಅಮಾನತು

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆಯಿಂದ ಕುಸ್ತಿಪಟು ಭಜರಂಗ್ ಪುನಿಯಾ ಅವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.

28 mins ago

ಲಕ್ಷ ಮೌಲ್ಯದ ಆಭರಣ ಮತ್ತು ನಗದು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿಗಳ ಮೌಲ್ಯದ, ಚಿನ್ನ-ಬೆಳ್ಳಿಯ ಒಡವೆ ಹಾಗೂ ನಗದು ಹಣವನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ,…

34 mins ago

ನಾಳೆ ರಾತ್ರಿಯಿಂದ ಆಂಬ್ಯುಲೆನ್ಸ್ ಸೇವೆ ಬಂದ್: ಸಿಬ್ಬಂದಿಗಳಿಂದ ಮುಷ್ಕರ

108 ಆಂಬ್ಯುಲೆನ್ಸ್‌ ಸಿಬ್ಬಂದಿಗೆ ಮೂರು ತಿಂಗಳ ವೇತನ ಪಾವತಿಯಾಗದ ಕಾರಣಕ್ಕೆ ನಾಳೆ ಮೇ.6ರ ರಾತ್ರಿ 8 ಗಂಟೆಯಿಂದ ರಾಜ್ಯ ವ್ಯಾಪ್ತಿ…

46 mins ago

ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್ ಖಂಡಿಸಿ ಆರ್‌ಆರ್‌ಡಿ ವಕ್ತಾರ ರಾಜೀನಾಮೆ

ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣ ಎದುರಿಸುತ್ತಿದ್ದರೂ, ಅವರ ಪುತ್ರನಿಗೆ…

46 mins ago