ಉಡುಪಿ: ಗ್ಯಾಸ್ ಟ್ಯಾಂಕರ್ ಮತ್ತು ಕಾರು ಮಧ್ಯೆ ಅಪಘಾತ ನಡೆದ ಘಟನೆ ನಿಟ್ಟೂರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಟ್ಯಾಂಕರ್ ಚಾಲಕನು ಮಂಗಳೂರಿನಲ್ಲಿ ಎಲ್ ಪಿಜಿ ಗ್ಯಾಸ್ ಲೋಡ್ ಮಾಡಿಕೊಂಡು ಗೋವಾ ಕಡೆಗೆ ಸಾಗುತ್ತಿದ್ದನು. ಪುತ್ತೂರು ಗ್ರಾಮದ ನಿಟ್ಟೂರು ಜಂಕ್ಷನ್ ಬಳಿ ಸಮೀಪಿಸುತ್ತಿದ್ದಂತೆ ಅದೇ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರು ಒಂದು ಸುತ್ತು ಹೊಡೆದು ಟ್ಯಾಂಕರ್ ಮುಂಭಾಗಕ್ಕೆ ಬಂದು ನಿಂತಿದ್ದು, ಅತೀ ವೇಗವಾಗಿದ್ದ ಟ್ಯಾಂಕರ್ ಕಾರನ್ನು ಗುದ್ದಿಗೊಂಡೆ ಡಿವೈಡರ್ ಮೇಲೇರಿದೆ.
ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅಪಘಾತದ ಭೀಕರ ದೃಶ್ಯ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.