News Karnataka Kannada
Saturday, April 27 2024
ಉಡುಪಿ

ಉಡುಪಿ: ಅನೈತಿಕ ದಂಧೆ ನಡೆಸುತ್ತಿದ್ದ ಮಂಗಳಮುಖಿಯರ ವಿರುದ್ಧ ದಿಢೀರ್ ಕಾರ್ಯಾಚರಣೆ!

Udupi
Photo Credit : News Kannada

ಉಡುಪಿ:  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಹಾಕೆ ಅವರು ಸ್ವತಃ ತಾವೇ ದಿಢೀರ್ ಕಾರ್ಯಾಚರಣೆ ನಡೆಸಿ ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಮಂಗಳ ಮುಖಿಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಇಬ್ಬರು‌ ಪಿಂಪ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪ ಮಂಗಳ ಮುಖಿಯರು ಅನೈತಿಕ ದಂಧೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ಈ‌ ಹಿನ್ನೆಲೆಯಲ್ಲಿ ಡಿ.16ರಂದು ತಡರಾತ್ರಿ ಎಸ್ಪಿ ಕಾರ್ಯಾಚರಣೆ ನಡೆಸಿದ್ದರು.

ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಸರ್ವಿಸ್ ನಿಲ್ದಾಣದ ಸಮೀಪ ಮಂಗಳಮುಖಿಯರ ಅಟ್ಟಹಾಸ ಜೋರಾಗಿದ್ದು, ವಾಹನಗಳನ್ನು ಅಡ್ಡಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ. ದಾರಿದೀಪವನ್ನು ಒಡೆದು ಹಾಕಿದ್ದಾರೆ ಮತ್ತು ಜನರಿಂದ ಹಣ ವಸೂಲಿ ಮಾಡುತ್ತಾರೆಂದು ದೂರುಗಳು ಬಂದಿದ್ದವು.

ಸ್ವತಃ ಕಾರ್ಯಾಚರಣೆ ಇಳಿದ ಎಸ್ಪಿ, ಮಂಗಳಮುಖಿಯರನ್ನು ಅಲ್ಲಿಂದ ತೆರವು ಗೊಳಿಸಲು ಮುಂದಾದರು. ಈ‌ ಸಂದರ್ಭದಲ್ಲಿ ಎಸ್ಪಿ ಎಂಬುದನ್ನು ತಿಳಿಯದ ಕೆಲವು ಮಂಗಳ ಮುಖಿಯರು ಎಸ್ಪಿ ಜೊತೆ ವಾಗ್ವಾದಕ್ಕೆ ಇಳಿದು ಅವಾಚ್ಯ ಶಬ್ದಗಳಿಂದ ಬೈದರೆನ್ನಲಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಚದುರಿಸಿದರು. ಈ ವೇಳೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು