Categories: ಉಡುಪಿ

ಉಡುಪಿಯಲ್ಲಿ ರಾಯಲ್‌ಓಕ್‌ನ ಮೊದಲ ಫರ್ನಿಚರ್ ಸಿಗ್ನಚರ್ ಮಳಿಗೆ ಉದ್ಘಾಟನೆ

ಉಡುಪಿ: ಭಾರತದ ಎಲ್ಲೆಡೆ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಯ ಭಾಗವಾಗಿ ರಾಯಲ್‌ಓಕ್ ಫರ್ನಿಚರ್ ನ ನೂತನ ಪ್ರಮುಖ ಮಳಿಗೆ ಉಡುಪಿಯಲ್ಲಿ ಶುಭಾರಂಭಗೊಂಡಿದೆ.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿದರು.

ರಾಯಲ್‌ಓಕ್ ಫರ್ನಿಚರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮದನ್ ಸುಬ್ರಮಣಿಯಂ, ಉದ್ಯಮಿಗಳಾದ ಡಾ. ಜೆರಿ ವಿನ್ಸೆಂಟ್ ಡಯಾಸ್, ಪುರಷೋತ್ತಮ್ ಶೆಟ್ಟಿ, ಇಂಜಿನಿಯರ್ ಗೋಪಾಲ ಭಟ್, ವೆರೋನಿಕಾ ಕರ್ನೆಲಿಯೋ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯು “7 ಕಂಟ್ರಿ ಕಲೆಕ್ಷನ್’ (ಏಳು ದೇಶ ಸಂಗ್ರಹ) ಹೊಂದಿದ್ದು, ಇದರಲ್ಲಿ ಅಮೇರಿಕಾ, ಇಟಲಿ, ವಿಯಾಟ್ನಾಂ, ಟರ್ಕಿ, ಜರ್ಮನಿ, ಮಲೇಷಿಯಾ ಮತ್ತು ಭಾರತ ದೇಶಗಳ ಅತ್ಯುತ್ತಮ ಮತ್ತು ಅತ್ಯಂತ ಅನನ್ಯವಾದ ಪೀಠೋಪಕರಣಗಳು ಮಳಿಗೆಯಲ್ಲಿ ಲಭ್ಯವಿರುತ್ತವೆ.

ಸೋಫಾಗಳು, ರಿಕ್ರೈನರ್‌ಗಳು, ಡೈನಿಂಗ್ ಮ್ಯಾಟ್ರಿಸ್‌ಗಳು, ಹಾಸಿಗೆಗಳು, ಅಲಂಕಾರಿಕ ವಸ್ತುಗಳು ಮತ್ತು ಸಮಗ್ರ ಶ್ರೇಣಿಯ ಕಚೇರಿ ಮತ್ತು ಹೊರಾಂಗಣ ಪೀಠೋಪಕರಣಗಳು ಸೇರಿದಂತೆ ವಿಸ್ತಾರವಾದ ಶ್ರೇಣಿಯನ್ನು ಇದು ಸಾದರಪಡಿಸುತ್ತದೆ.

ದೇಶದ ಎಲ್ಲೆಡೆ 139 ಪ್ರಯೋಗಾತ್ಮಕ ಮಳಿಗೆಗಳನ್ನು ಹೊಂದಿರುವ ರಾಯಲ್‌ಓಕ್ ಪ್ರಸ್ತುತ 150ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಹೆಜ್ಜೆ ಗುರುತು ಹೊಂದಿದೆ. 2010ರಲ್ಲಿ ಬೆಂಗಳೂರಿನಲ್ಲಿ ಆರಂಭಿಸಿದಾಗಿನಿಂದ ಬ್ರಾಂಡ್ ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಆಯ್ದ ಮೆಟ್ರೋ ನಗರಗಳು ಮತ್ತು ಮೊದಲನೇ ಹಾಗೂ 2ನೇ ಹಂತದ ನಗರಗಳಲ್ಲಿ ಅದರ ಪ್ರಮುಖ ಹಾಜರಿಯಿಂದ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

ರಾಯಲ್‌ಓಕ್ ಇಂಕ್, ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮದನ್ ಸುಬ್ರಮಣಿಯಂ ಅವರು ಮಾತನಾಡಿ, “ಪ್ರತಿದಿನ ನಮ್ಮ ಗ್ರಾಹಕರಿಗೆ ಹೆಚ್ಚು ಉತ್ತಮವಾಗಿ ಸೇವೆ ಸಲ್ಲಿಸಲು ನಾವು ಸತತವಾಗಿ ಶ್ರಮಿಸುತ್ತಿದ್ದೇವೆ. ಉಡುಪಿಯಲ್ಲಿನ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ನೀಡಲು ನಮ್ಮ ಮೊದಲ ಪ್ರಮುಖ ಮಳಿಗೆ ಅವರಿಗೆ ಪ್ರತ್ಯೇಕವಾದ 7 ದೇಶಗಳ ಸಂಗ್ರಹ’ವನ್ನು ಸಾದರಪಡಿಸುತ್ತಿದೆ. ಗ್ರಾಹಕರನ್ನು ತೊಡಗಿಸಿಕೊಳ್ಳುವುದರ ಪ್ರಾಮುಖ್ಯತೆಯನ್ನು ಹಾಗೂ ಗ್ರಾಹಕ ತೃಪ್ತಿಯ ಪ್ರಾಮುಖ್ಯತೆಯನ್ನು ರಾಯಲ್‌ಓಕ್‌ನಲ್ಲಿ ನಾವು ಅರ್ಥ ಮಾಡಿಕೊಂಡಿದ್ದೇವೆ. ಆದ್ದರಿಂದ ನಮ್ಮ ಗ್ರಾಹಕರಿಗೆ ಅತ್ಯುತ್ತಮವಾದುದ್ದನ್ನು ನೀಡಲು ಈ ಪ್ರಮುಖ ಮಳಿಗೆಗಳನ್ನು ನಾವು ಸ್ಥಾಪಿಸಿದ್ದೇವೆ. ಪೀಠೋಪಕರಣಗಳನ್ನು ಖರೀದಿಸುವ ಮುನ್ನ ಅವುಗಳನ್ನು ಸ್ಪರ್ಶಿಸುವ ಅನುಭವವನ್ನು ಅದು ನೀಡುತ್ತದೆ. ಇದರಿಂದ ಅವರು ಉತ್ತಮವಾಗಿ ಯೋಚಿಸಿ ಖರೀದಿಸಲು ಮತ್ತು ಹೂಡಿಕೆಯ ಬಗ್ಗೆ ಹೆಚ್ಚು ಉತ್ತಮ ಭಾವನೆಯೊಂದಿಗೆ ಖರೀದಿಸುವ ಖಾತ್ರಿ ಮಾಡಿಕೊಡುತ್ತದೆ” ಎಂದರು.

ಬ್ರಾಂಡ್ ಇತ್ತೀಚೆಗೆ ಉಡುಪಿಯಲ್ಲಿ ಮಳಿಗೆಯನ್ನು ಆರಂಭಿಸಿದ್ದು, ಡಿಸೆಂಬರ್ 2023ರ ಹೊತ್ತಿಗೆ 5 ಮಳಿಗೆಗಳಲ್ಲಿ ಹಾಜರಿ ಹೊಂದಿರುವ ಗುರಿ ಹೊಂದಿದೆ. ನವೀನತೆ, ಅನುಭವ ಮತ್ತು ದೃಷ್ಟಿಕೋನಗಳನ್ನು ತನ್ನ ಆಧುನಿಕ ವಿಲಾಸಿ ಹಾಗೂ ಉತ್ತಮ ಕಾರ್ಯಕ್ಷಮತೆಯ ಪೀಠೋಪಕರಣಗಳೊಂದಿಗೆ ಮಿಶ್ರಣ ಮಾಡುವುದರೊಂದಿಗೆ ಐಷಾರಾಮಿ ಜೀವನದ ಮಟ್ಟವನ್ನು ಹೆಚ್ಚಿಸುವ ದೃಷ್ಟಿಕೋನವನ್ನು ರಾಯಲ್‌ಓಕ್ ಫರ್ನಿಚರ್ ಹೊಂದಿದೆ.

Sneha Gowda

Recent Posts

ಪ್ರಕಟಣೆಯಾದ ಸಂಶೋಧನಾ ಬರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ: ಡಾ. ಸುಧಾಕರ್ ವೈ.ಎನ್

ವಿದ್ಯಾರ್ಥಿಗಳು ಪ್ರಕಟಿಸುವ ಸಂಶೋಧನಾ ಬರಹಗಳು ಉನ್ನತ ವೇತನ ಶ್ರೇಣಿಯ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಉಪಯುಕ್ತವಾಗುತ್ತವೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್…

58 seconds ago

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ

ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಪಲಿತಾಂಶ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು…

12 mins ago

ಮಲ್ಲಮ್ಮ ಜಯಂತಿ ಆಚರಣೆಯ ದಿನ ಅಗೌರವ ತೋರಿದ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯ ದಿನದಂದು ಬೇಜವಾಬ್ದಾರಿತನದಿಂದ ವರ್ತಿಸಿ…

16 mins ago

ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವು

ಬನಹಟ್ಟಿ ಪಟ್ಟಣದಲ್ಲಿ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

50 mins ago

ಮುಂಗಾರು: ಭೂಮಿ ಹದ ಮಾಡಲು ಮುಂದಾದ ರೈತರು

ಹಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ರೈತರು ಭೂಮಿ ಹದ ಮಾಡುವ ಕೆಲಸಕ್ಕೆ ಮುಂದಡಿ ಇಟ್ಟಿದ್ದಾರೆ.

1 hour ago

ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವು !

ಇಲ್ಲಿನ ಕವರ್ಧಾದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.

1 hour ago