News Karnataka Kannada
Saturday, April 27 2024
ಉಡುಪಿ

ಜಾಗತಿಕ ಮಟ್ಟದ ವಿಜ್ಞಾನಿಗಳ ಶ್ರೇಯಾಂಕದಲ್ಲಿ “ಮಾಹೆ”ಯ ಪ್ರಾಧ್ಯಾಪಕರು

Mahe Vv
Photo Credit : News Kannada

ಮಣಿಪಾಲ: ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯವು ಅತ್ಯಂತ ಹೆಚ್ಚು ಉಲ್ಲೇಖಕ್ಕೆ ಒಳಗಾಗುವ ವಿಜ್ಞಾನದ ಲೇಖಕರ ಡಾಡಾಬೇಸ್‌ನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಸಾರ್ವಜನಿಕವಾಗಿ ಲಭ್ಯವಿರುವ ಈ ದತ್ತಸಂಚಯದಲ್ಲಿ ಜಗತ್ತಿನ ಅಗ್ರಪಂಕ್ತಿಯ 2 % ವಿಜ್ಞಾನಿಗಳ ಪಟ್ಟಿ ಇದ್ದು, ಇದರಲ್ಲಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ಗೆ ಸೇರಿದ ಶಿಕ್ಷಣ ಸಂಸ್ಥೆಗಳ 20 ಮಂದಿ ಪ್ರಾಧ್ಯಾಪಕರು ಇದ್ದಾರೆ. ಈ ದತ್ತ ಸಂಚಯವು ಎಚ್‌-ಇಂಡೆಕ್ಸ್‌ನ ಉಲ್ಲೇಖಗಳು [ಸೈಟೇಶನ್ಸ್‌ ಎಚ್‌-ಇಂಡೆಕ್ಸ್‌]. ಎಚ್‌ಎಂ-ಇಂಡೆಕ್ಸ್‌ನ ಸಹ-ಲೇಖಕ ಹೊಂದಾಣಿಕೆ [ಕೋಆಥರ್‌ಶಿಪ್‌ ಎಡ್ಜಸ್ಟೆಡ್‌ ಎಚ್‌ಎಂ-ಇಂಡೆಕ್ಸ್‌), ವಿಭಿನ್ನ ಕೃತಿಸ್ವಾಮ್ಯ ಸ್ಥಾನಗಳನ್ನು ಹೊಂದಿರುವ ಉಲ್ಲೇಖಗಳು ಮತ್ತು ಸಂಯುಕ್ತ ಸೂಚಕ [ಸಿ- ಸ್ಕೋರ್‌] ಗಳಿಗೆ ಸಂಬಂಧಿಸಿ ಈ ದತ್ತ ಸಂಚಯವು ಗುಣಮಟ್ಟದ ಮಾಹಿತಿಯನ್ನು ಒದಗಿಸುತ್ತದೆ..

ಇದರಲ್ಲಿ ಮಂಗಳೂರು ಕೆಎಂಸಿಯ 7 ಮಂದಿ, ಮಣಿಪಾಲ್ ಕೆಎಂಸಿಯ ಇಬ್ಬರು, ಎಂಐಟಿಯ 6 ಮಂದಿ ಮತ್ತು ಮಾಹೆಯ ಅನ್ಯ ಸಂಸ್ಥೆಗಳಿಗೆ ಸೇರಿದ 5 ಮಂದಿ ಪ್ರಾಧ್ಯಾಪಕರು ಈ ಪಟ್ಟಿಯಲ್ಲಿ ಸೇರಿದ್ದು, ಅವರ ಶಿಕ್ಷಣ ಮತ್ತು ಸಂಶೋಧನ ಕ್ಷೇತ್ರದ ಕೆಲಸಗಳಿಗಾಗಿ ಈ ಮನ್ನಣೆ ದೊರೆತಿದೆ. ವಿಜ್ಞಾನವ್ಯಾಪ್ತಿಯ, ಅತ್ಯಂತ ಹೆಚ್ಚು ಪ್ರಮಾಣಿತ [ಸ್ಟ್ಯಾಂಡರ್ಡೈಸ್ಟ್] ಉಲ್ಲೇಖಕ್ಕೆ ಒಳಗಾಗಿರುವ ಲೇಖಕರ ಪರಿಷ್ಕೃತ ದತ್ತಸಂಚಯವನ್ನು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿ-ಪ್ರೊಫೆಸರ್ ಜಾನ್ ಪಿ. ಎ. ಲೋನಿಡೈಸ್ ಸಿದ್ಧಪಡಿಸಿದ್ದಾರೆ.

ಡಾ. ಬಿ. ಉನ್ನಿಕೃಷ್ಣನ್‌, ಡೀನ್‌, ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮಂಗಳೂರು ಅವರು ಸತತ ಎರಡನೆಯ ಬಾರಿಗೆ ಈ ಪಟ್ಟಿಯಲ್ಲಿ ಸೇರಿದ್ದಾರೆ. ಕಮ್ಯುನಿಟಿ ಮೆಡಿಸಿನ್‌ ವಿಭಾಗದ ಸಹಪ್ರಾಧ್ಯಾಪಕರಾದ ರಮೇಶ ಹೊಳ್ಳ, ನಿತಿನ್‌ ಕುಮಾರ್‌ ಹೆಚ್ಚುವರಿ ಪ್ರಾಧ್ಯಾಪಕರಾದ ಪ್ರಸನ್ನ ಮಿತ್ರ ಮತ್ತು ಫೋರೆನ್ಸಿಕ್‌ ಮೆಡಿಸಿನ್‌ ವಿಭಾಗದ ಪ್ರತೀಕ್‌ ರಾಸ್ತೋಗಿ ಮತ್ತು ಸಹಪ್ರಾಧ್ಯಾಪಕ ಜಗದೀಶ ರಾವ್‌ ಪ್ರಥಮ ಬಾರಿಗೆ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

ಕೆಎಂಸಿ ಮಣಿಪಾಲದ ಫೋರೆನ್ಸಿಕ್‌ ಮೆಡಿಸಿನ್‌ ವಿಭಾಗದ ಪ್ರಾಧ್ಯಾಪಕ ಡಾ. ವಿನೋದ್‌ ಚಂದ್ರಕಾಂತ ನಾಯಕ್‌ ಮತ್ತು ಹೆಚ್ಚುವರಿ ಪ್ರಾಧ್ಯಾಪಕರಾದ ಡಾ. ಚೈತ್ರಾ ಕೆ. ರಾವ್‌ ಅವರು ಕೂಡ ಈ ಪಟ್ಟಿಗೆ ಸೇರ್ಪಡೆಗೊಳ್ಳುವ ಮೂಲಕ ಈ ಮನ್ನಣೆಗೆ ಪಾತ್ರರಾಗಿದ್ದಾರೆ.
ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ [ಎಂಐಟಿ]ಯ ಕೆಮಿಕಲ್‌ ಇಂಜಿನಿಯರಿಂಗ್‌ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ. ರಾಜಾ ಸೆಲ್ವರಾಜ್‌, ಇನ್‌ಸ್ಟ್ರುಮೆಂಟೇಶನ್‌ ಮತ್ತು ಕಂಟ್ರೋಲ್‌ ಇಂಜಿನಿಯರಿಂಗ್‌ ವಿಭಾಗದ ಸಹಪ್ರಾಧ್ಯಾಪಕ ಡಾ. ರಾಘವೇಂದ್ರ ಯು., ಮೆಕ್ಯಾನಿಕಲ್‌ & ಇಂಡಸ್ಟ್ರಿಯಲ್‌ ಇಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಶಿವಕುಮಾರ್‌, ಸಹ ಪ್ರಾಧ್ಯಾಪಕ ನಿತೇಶ್‌ ನಾಯಕ್‌ ಮತ್ತು ಇಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಶನ್‌ ಇಂಜಿನಿಯರಿಂಗ್‌ ವಿಭಾಗದ ಸಹಪ್ರಾಧ್ಯಾಪಕ ತನ್ವೀರ್‌ ಆಲಿ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ .
ಔಷಧ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಶ್ರೀನಿವಾಸ್‌ ಮುತಾಲಿಕ್‌ ಮತ್ತು ಪ್ರಾಧ್ಯಾಪಕರಾದ ಡಾ. ಉಷಾ ವೈ. ನಾಯಕ್‌, ಮಣಿಪಾಲ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಶಶಿಧರ ಆಚಾರ್ಯ, ಬೇಸಿಕ್‌ ಮೆಡಿಕಲ್‌ ಸೈನ್ಸಸ್ ನ ಡಾ. ಸತೀಶ ಬಿ. ನಾಯಕ್‌ ಮತ್ತು ಮಣಿಪಾಲ್‌ ಸ್ಕೂಲ್ ಆಫ್‌ ಹೆಲ್ತ್‌ ಸೈನ್ಸಸ್ ನ ಜೀವಭೌತವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ. ನಿರ್ಮಲ್‌ ಮಂಜುಮ್‌ದಾರ್‌ ಅವರ ಹೆಸರು ಈ ಪಟ್ಟಿಯಲ್ಲಿ ಇರುವುದು ಅಭಿಮಾನದ ಸಂಗತಿಯಾಗಿದೆ.

ಮಾಹೆಯ ಪ್ರಾಧ್ಯಾಪಕರ ಈ ಗಣನೀಯ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್‌ ಅವರು ‘ಜಾಗತಿಕ ಮಟ್ಟದ 2% ವಿಶಿಷ್ಟ ಸಂಶೋಧಕರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳುವಂಥ ಸಾಧನೆಯನ್ನು ಮಾಹೆಯ ಪ್ರಾಧ್ಯಾಪಕರು ಮಾಡಿದ್ದಾರೆ. ಅವರ ಸಮರ್ಪಣ ಭಾವ, ವಿಷಯ ತಜ್ಞತೆ, ಸಂಶೋಧನೆ ಮೇಲಿರುವ ಆಸಕ್ತಿ ಮಾಹೆಯ ಸಂಶೋಧನ ಗುಣಮಟ್ಟವನ್ನು ಎತ್ತಿಹಿಡಿದದ್ದಲ್ಲದೆ ಇತರ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಕವಾಗಲಿದೆ.ಮಾಹೆಯ ಬೋಧಕರು ಮತ್ತು ಸಂಶೋದಕರ ಅಸಾಧಾರಣ ಸಾಧನೆಗೆ ಇದು ಸಾಕ್ಷಿಯಾಗಿದ್ದು ಇದು ಸಂಸ್ಥೆಯ ಪಾಲಿಗೆ ಅಭಿಮಾನದ ಸಂಗತಿಯಾಗಿದೆ. ನಮ್ಮ ಈ ಯಾನವು ಜಗತ್ತಿನ ಒಳಿತಿಗೆ ಪೂರಕವಾಗುವ ಮತ್ತು ಶೈ ಕ್ಷಣಿಕ ಸಂಶೋಧನೆಯ ಭವಿಷ್ಯವನ್ನು ರೂಪಿಸುವ ಹೊಸ ಜ್ಞಾನವನ್ನು ರೂಪಿಸಲಿ ಎಂದು ಹಾರೈಸುತ್ತೇನೆ’ ಎಂದರು.

ಈ ದತ್ತಸಂಚಯವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಪ್ರಮಾಣಿತ ವಿಜ್ಞಾನ-ಮೆಟ್ರಿಕ್ಸ್ ವರ್ಗೀಕರಣದ ಪ್ರಕಾರ ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಮತ್ತು 174 ಉಪಕ್ಷೇತ್ರಗಳಾಗಿ ವಿಭಾಗೀಕರಿಸಲಾಗಿತ್ತು. ಎಲ್ಲಾ ವಿಜ್ಞಾನಿಗಳಿಗೆ ಕ್ಷೇತ್ರ ಮತ್ತು ಉಪಕ್ಷೇತ್ರಗಳ ಶೇಕಡಾವಾರುಗಳನ್ನು ಕನಿಷ್ಠ 5 ಪೇಪರ್‌ಗಳೊಂದಿಗೆ ಒದಗಿಸಲಾಗಿತ್ತು. 2022ರ ವೃತ್ತಿಜೀವನದ ಅವಧಿಯಲ್ಲಿ ಅತ್ಯಂತ ಹೆಚ್ಚು ಉಲ್ಲೇಖಿತಗೊಳ್ಳುವ ಡೇಟಾವನ್ನು ಪರಿಗಣಿಸಲಾದ ಈ ಪ್ರಕ್ರಿಯೆಯಲ್ಲಿ ಅಗ್ರಪಂಕ್ತಿಯ 100,000 ವಿಜ್ಞಾನಿಗಳು ಪಾಲ್ಕೊಂಡಿದ್ದರು. 2022 ರಲ್ಲಿ ವಿಜ್ಞಾನಿಗಳ ಲೇಖನಗಳು ಎಷ್ಟು ಬಾರಿ ಉಲ್ಲೇಖಗೊಂಡಿದೆ [ಸ್ವತಃ ತಾವೇ ಉಲ್ಲೇಖಿಸದ್ದು ಮತ್ತು ಇತರರು ಉಲ್ಲೇಖಿಸಿದ್ದು ಸೇರಿ] ಅಥವಾ ಉಪಕ್ಷೇತ್ರಗಳಲ್ಲಿ ಉಲ್ಲೇಖದ ಶ್ರೇಯಾಂಕ 2% ಅಥವಾ ಅದಕ್ಕಿಂತ ಅಧಿಕವಿದೆ- ಇದರ ಆಧಾರದಲ್ಲಿ ಈ ದತ್ತಸಂಚಯವನ್ನು ತಯಾರಿಸಲಾಗಿದೆ. ದತ್ತಸಂಚಯದ ಈ ಆವೃತ್ತಿ [6]ಯು ಉಲ್ಲೇಖ [ಸ್ಕೋಪಸ್‌]ಗಳಿಂದ ಚಿತ್ರಗಳ ಬಳಕೆಯವರೆಗೆ, 2022 ರ ಅಂತ್ಯದವರೆಗೆ ಇದ್ದು ಇದನ್ನು ಅಕ್ಟೋಬರ್ 1, 2023ರಂದು ಬಿಡುಗಡೆಮಾಡಲಾಗಿದೆ.

ಈ ಕಾರ್ಯವು ಐ ಸಿ ಎಸ್ ಆರ್ (ICSR) ಲ್ಯಾಬ್ ಮೂಲಕ ಎಲ್ಸೆವಿಯರ್ ಒದಗಿಸಿದ ಸ್ಕೋಪಸ್ ಡೇಟಾವನ್ನು ಬಳಸುತ್ತದೆ. ಅಕ್ಟೋಬರ್ 1, 2023 ರಂತೆ ಎಲ್ಲಾ ಸ್ಕೋಪಸ್ ಲೇಖಕರ ಪ್ರೊಫೈಲ್‌ಗಳನ್ನು ಬಳಸಿಕೊಂಡು ಲೆಕ್ಕಾಚಾರಗಳನ್ನು ನಡೆಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು