Categories: ಉಡುಪಿ

ರಾಷ್ಟ್ರೀಯ ಹೆದ್ದಾರಿ-169 : ವಾಹನ ಚಾಲಕರಿಗೆ ಸವಾಲಾದ ರಾಷ್ಟ್ರೀಯ ಹೆದ್ದಾರಿ

ಕಾರ್ಕಳ: ಮೂಡುಬಿದಿರೆ- ಕಾರ್ಕಳ ನಡುವೆ ಹಾದೂ ಹೋಗಿರುವ ರಾಷ್ಟ್ರೀಯ ಹೆದ್ದಾರಿ -169ಯ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರಿಂದ ವಾಹನ ಚಾಲಕ-ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ಸಾಣೂರು ಗ್ರಾಮದ ಮುರತಂಗಡಿ ಪರಿಸರದಲ್ಲಿ ಪ್ರಶಾಂತ್ ಕಾಮತ್ ರವರ ಮನೆಯ ಎದುರಿನ ಸರ್ವಿಸ್ ರೋಡಿನಿಂದ ಇರುವತ್ತೂರು ರೋಡಿಗೆ ಮಾಡಿರುವ ತಾತ್ಕಾಲಿಕ ರಸ್ತೆ ವ್ಯವಸ್ಥೆ ಅಗಲ ಕಿರಿದಾಗಿದ್ದು… ಇದರಿಂದ ವಾಹನ ಚಲಾಸಲು ಕಷ್ಟಕರವಾಗಿದೆ. ಎದುರು ಬದುರಾಗಿ ಘನವಾಹಗಳು ಸಿಕ್ಕಾಗ ಕೆಲ ಕಾಲ ರಸ್ತೆ ಸಂಚಾರ ಮೊಟಕುಗೊಳ್ಲುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಅಳವಡಿಸಲಾಗಿದ್ಹಾದ ಒಂದು ಸಣ್ಣ ಮೋರಿ ಪೈಪ್ ಮುರಿದುಹೋಗಿದ್ದು .. ಈಗಾಗಲೇ ಬೈಕ್ ಚಾಲಕರು ಹಾಗೂ ಇತರ ವಾಹನ ಚಾಲಕರು ಬಹಳ ಕಷ್ಟಪಟ್ಟು ಅಪಾಯಕಾರಿ ರೀತಿಯಲ್ಲಿ ರಸ್ತೆಯ ಮೇಲೆ ಸಂಚರಿಸುತ್ತಿದ್ದಾರೆ.

ಕೂಡಲೇ ಈ ತಾತ್ಕಾಲಿಕ ರಸ್ತೆಯ ಅಡಿಯ ಮೋರಿಯನ್ನು ಇನ್ನಷ್ಟು ಭದ್ರಪಡಿಸಿ ರಸ್ತೆಯನ್ನು ಅಗಲ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ದಿಲೀಪ್ ಬಿಲ್ಡ್ ಕಾನ್ ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇಲಾಖಾಧಿಕಾರಿಗಳು ಹಾಗೂ ಕಂಟ್ರಾಕ್ಟರ್ ದಾರರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಇನ್ನಷ್ಟು ದೊಡ್ಡ ಅಪಾಯ ಸಂಭವಿಸಬಹುದೆಂಬ ಭೀತಿಯನ್ನು ಸ್ಥಳೀಯರು ಹಾಗೂ ವಾಹನ ಚಾಲಕರು,ಸವಾರರು ವ್ಯಕ್ತಪಡಿಸುತ್ತಾರೆ.

ಮತ್ತೊಂದೆಡೆಯಲ್ಲಿ ಸಾಣೂರು ಯುವಕ *ಮಂಡಲದ ಮೈದಾನದ ಎದುರು ಭಾಗದಲ್ಲಿ ಕೂಡಲೇ ತಡೆಗೋಡೆ ನಿರ್ಮಿಸುವ ಅಗತ್ಸಯವೂ ಇದೆ. ಇಲ್ದಿಲದಿದ್ದಲ್ಲಿ ಮಣ್ಣು ಜರಿದು, ರಸ್ತೆಗೆ ಬಿದ್ದು, ವಾಹನ ಸಂಚಾರ ಮತ್ತು ರಸ್ತೆಯಲ್ಲಿ ನಡೆದಾಡುವವರಿಗೆ ಅಪಾಯವನ್ನು ತಂದೊಡ್ಡಬಹುದು .

… ಈಗಾಗಲೇ ಮಳೆ ಪ್ರಾರಂಭವಾಗಿದ್ದು.. ರಸ್ತೆ ಸುರಕ್ಷತೆಯ ಬಗ್ಗೆ ಎಚ್ಚರಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ.
ಇಲಾಖೆ ಹಾಗೂ ಕಂಟ್ರಾಕ್ಟರ್ ದಾರರು ಕುರುಡು ನೀತಿ ತಳೆದರೆ ಸಾಣೂರು ಗ್ರಾಮಸ್ಥರಿಂದ ಪ್ರತಿಭಟನೆಗೆ ಎದುರಿಸಲು ಸಿದ್ದರಾಗಬೇಕಾದಿತ್ತೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸದಸ್ಯ ಸಾಣೂರು ನರಸಿಂಹ ಕಾಮತ್ ಪ್ರಕಟಣೆಯಲ್ಲಿ ಮೂಲಕ ತಿಳಿಸಿರುತ್ತಾರೆ.

Sneha Gowda

Recent Posts

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

4 mins ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

16 mins ago

ಲಕ್ನೋ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 10 ವಿಕೆಟ್​ಗಳ ಭರ್ಜರಿ ಜಯ

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್‌ ತಂಡ…

52 mins ago

ಇಂದು ಕೊಡಗು,ಚಿಕ್ಕಮಗಳೂರು ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ರಾಜ್ಯದ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮೇ 9ರಂದು ಬಿರುಗಾಳಿಯೊಂದಿಗೆ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ…

1 hour ago

ಇಂದಿನ ರಾಶಿ ಫಲ : ಯಾರಿಗೆ ಶುಭ , ಯಾರಿಗೆ ಅಶುಭ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 09 ಮೇ​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ…

1 hour ago

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

9 hours ago