News Karnataka Kannada
Saturday, April 27 2024
ಉಡುಪಿ

ರಾಜೀವನಗರದಲ್ಲಿ ಕಾಂಗ್ರೆಸ್ ಬ್ಯಾನರ್ ಹರಿದುಹಾಕಿದ ಕಿಡಿಗೇಡಿಗಳು, ಕೃತ್ಯ ಸಿಸಿಟಿವಿಯಲ್ಲಿ ಸೆರೆ

Miscreants tear congress banner in Rajivnagar, act caught on CCTV
Photo Credit : News Kannada

ಬಡಗುಬೆಟ್ಟು: ಕಾಂಗ್ರೆಸ್ ವತಿಯಿಂದ 80 ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ಅಳವಡಿಸಿರುವ “ಕಾಪುವಿಗಾಗಿ ಕಾಂಗ್ರೆಸ್” ಕಾರ್ಯಕ್ರಮದ ಬ್ಯಾನರ್ ನ್ನು ಯಾರೋ‌ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಮಾ.10ರಂದು ಮಧ್ಯರಾತ್ರಿ ನಡೆದಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಉಚಿತ ವಿದ್ಯುತ್ ಯೋಜನೆಯ ಜೊತೆಗೆ ಕಾಪುವಿಗಾಗಿ ಕಾಂಗ್ರೆಸ್ ಎಂಬ ಕಾರ್ಯಕ್ರಮದ ಬ್ಯಾನರ್ ನ್ನು ರಾಜೀವನಗರದ ಬಸ್ ನಿಲ್ದಾಣ ಬಳಿ ಅಳವಡಿಸಲಾಗಿತ್ತು. ಈ ಬ್ಯಾನರ್ ಅನ್ನು ಯಾರೋ ದುಷ್ಕರ್ಮಿಗಳು ಹರಿದು ಹಾಕಿದ್ದಾರೆ.

ಕಿಡಿಗೇಡಿಗಳು ಬ್ಯಾನರ್ ಹರಿಯುವ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ಅದು ಅಸ್ಪಷ್ಟವಾಗಿರುವುದರಿಂದ ಕಿಡಿಗೇಡಿಗಳ ಗುರುತು ಪತ್ತೆಯಾಗಿಲ್ಲ‌. ಈ ಘಟನೆಯ ಬಗ್ಗೆ ಸ್ಥಳೀಯ‌ ಕಾಂಗ್ರೆಸ್ ಮುಖಂಡರು‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು