News Karnataka Kannada
Monday, April 29 2024
ಉಡುಪಿ

ಸಾಸ್ತಾನ ಚರ್ಚಿನಲ್ಲಿ ಪ್ರಥಮ ಬಾರಿಗೆ ಸ್ತ್ರೀ ಸಂಘಟನೆಯಿಂದ ಪುರುಷರ ದಿನಾಚರಣೆ

Men's Day celebrated for the first time by women's organisation at Sastana Church
Photo Credit : News Kannada

ಉಡುಪಿ: ಕುಟುಂಬದ ಏಳಿಗೆಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಪ್ರತಿಯೊಬ್ಬ ಪುರುಷರ ಕಾರ್ಯವನ್ನು ವರ್ಣಿಸಲು ಅಸಾಧ್ಯ ಎಂದು ಸಾಸ್ತಾನ ಸಂತ ಅಂತೋನಿ ದೇವಾಲಯದ ಧರ್ಮಗುರು ಸುನೀಲ್ ಡಿ’ಸಿಲ್ವಾ ಹೇಳಿದರು.

ಸಾಸ್ತಾನ ಸಂತ ಅಂತೋನಿ ಚರ್ಚಿನ ಸ್ತ್ರೀ ಸಂಘಟನೆ ಹಾಗೂ ಪ್ರಗತಿ ಸ್ವಸಹಾಯ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಪುರುಷರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಂದು ಮನೆಯ ಪುರುಷರು ತನ್ನ ಕುಟುಂಬಕ್ಕಾಗಿ ದುಡಿದ ರೀತಿಯನ್ನು ನೆನೆದು ಅವರಿಗಾಗಿ ಪುರುಷರ ದಿನವನ್ನಾಗಿ ಆಚರಿಸಿ ಅವರ ಸೇವೆಯನ್ನು ನೆನೆಯುವುದು ಶ್ಲಾಘನಾರ್ಹ ಸಂಗತಿಯಾಗಿದೆ. ಇದರೊಂದಿಗೆ ಅದೇ ಪ್ರೀತಿಯಿಂದ ಇನ್ನಷ್ಟು ಕುಟುಂಬವನ್ನು ಸಲಹಲಿ ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯದ ಸಂಪದ ಸಂಸ್ಥೆಯ ಪ್ರತಿನಿಧಿ ಜುಡಿತ್ ಡಿ’ಸೋಜಾ ಮಾತನಾಡಿ, ಕುಟುಂಬದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪುರಷರ ಪಾತ್ರ ಪ್ರಮುಖವಾಗಿದೆ. ಅವರು ತನ್ನ ಸಂತೋಷವನ್ನು ಬದಿಗೊತ್ತಿ ಕುಟುಂಬ ನಿರ್ವಹಣೆಗಾಗಿ ಸರ್ವರೀತಿಯಲ್ಲಿ ಹಗಲು ರಾತ್ರಿ ಎನ್ನದೆ ದುಡಿಯುವರಿಂದಾಗಿ ಕುಟುಂಬಗಳು ಸಂತೋಷದಿಂದ ಇರಲು ಸಾಧ್ಯವಿದೆ. ಅವರ ಸೇವೆಯನ್ನು ಎಂದೂ ಕೂಡ ಕಡೆಗಣಿಸದರೆ ಪುರುಷರಿಗೆ ಗೌರವ ನೀಡುವ ಕಾರ್ಯ ಸದಾ ಜರುಗಬೇಕು ಎಂದರು.

ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಇಂತಹ ಕಾರ್ಯಕ್ರಮದಲ್ಲಿ ಪುರಷರಿಗಾಗಿ ವಿವಿಧ ರೀತಿಯ ಮನೋರಂಜನಾತ್ಮಕ ಸ್ಪರ್ಧೆ, ನೃತ್ಯವನ್ನು ಆಯೋಜಿಸಿದ್ದು ಪ್ರತಿಯೊಬ್ಬರು ವಿಶೇಷ ಆಸಕ್ತಿಯಿಂದ ಭಾಗವಹಿಸಿ ಸಂತೋಷಟ್ಟರು. ಕಾರ್ಯಕ್ರಮವನ್ನು ಚರ್ಚಿನ ಹಿರಿಯ ಸದಸ್ಯ ಜೆರೋಮ್ ಡಿ’ಸೋಜಾ ಅವರು ಕೇಕ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಚರ್ಚಿನ ಜೀಜಸ್ ಮೇರಿ ಕಾನ್ವೆಂಟ್ ನ ಮುಖ್ಯಸ್ಥೆ ಸಿಸ್ಟರ್ ಗೊರೆಟ್ಟಿ ಹಾಗೂ ಮಿಶನರಿ ಸಿಸ್ಟರ್ಸ್ ಆಫ್ ಆಜ್ಮೀರ್ ಕಾನ್ವೇಂಟ್ ನ ಮುಖ್ಯಸ್ಥರಾದ ಸಿಸ್ಟರ್ ವೆರೋನಿಕಾ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಐವನ್ ಡಿ ಆಲ್ಮೇಡಾ, 20 ಆಯೋಗಗಳ ಸಂಚಾಲಕಿ ಜೀನ್ ಮೇರಿ ಲೂವಿಸ್ ಉಪಸ್ಥಿತರಿದ್ದರು.

ಸಂಘಟನೆಯ ಅಧ್ಯಕ್ಷೆ ಸಿಂತಿಯಾ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ವೀರಾ ಪಿಂಟೊ ನಡೆಸಿಕೊಟ್ಟರು. ಕಾರ್ಯದರ್ಶಿ ಜೊಸ್ಲೀನ್ ಪಿಂಟೊ ವಂದಿಸಿ, ಮಾಲಾ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು