ಉಡುಪಿ

ಚುನಾವಣೆ ಬಹಿಷ್ಕರಿಸಲು ಮರವಂತೆ ಮೀನುಗಾರರ ನಿರ್ಧಾರ

ಕುಂದಾಪುರ: ಮರವಂತೆ  ಹೊರ ಬಂದರು ಕಾಮಗಾರಿ ಅಪೂರ್ಣ ಮತ್ತು ತೌಕ್ತೆ ಚಂಡ ಮಾರುತದಿಂದ ಹಾನಿಗೊಳಗಾದ ಮರವಂತೆ ಕರಾವಳಿ ಭಾಗದ ಮೀನುಗಾರಿಕಾ ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ ಹಾಗೂ ಮೀನುಗಾರರಿಗೆ ಬಹುಮುಖ್ಯವಾಗಿ ಬೇಕಾಗಿರುವ ಸೀಮೆ ಎಣ್ಣೆಯನ್ನು ಸರಕಾರ ಸಮರ್ಪಕವಾದ ರೀತಿಯಲ್ಲಿ ವಿತರಣೆ ಮಾಡದೆ ಇರುವುದರಿಂದ ಬೇಸತ್ತ ಸಮಸ್ತ ಮೀನುಗಾರರು ಮೇ.10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡದೆ ಇರಲು ನಿರ್ಧರಿಸಿದ್ದೇವೆ ಎಂದು ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ತಿಳಿಸಿದ್ದಾರೆ.

ಮರವಂತೆ ಹೊರ ಬಂದರು ಪ್ರದೇಶದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೀನುಗಾರರ ಸಂಕಷ್ಟದ ಬಗ್ಗೆ ಮಾಹಿತಿಯನ್ನು ನೀಡಿದರು.

ಮರವಂತೆ ಪ್ರದೇಶಕ್ಕೆ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು,ಅಧಿಕಾರಿ ವರ್ಗದವರು ಭೇಟಿ ನೀಡಿ ಮೀನುಗಾರರ ಕಷ್ಟವನ್ನು ಕಣ್ಣಾರೆ ನೋಡಿ ಹೋಗಿದ್ದರು ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿ ತನಕ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸರಕಾರದ ವಿರುದ್ಧ ಅಸಾಮಾಧಾನವನ್ನು ತೊಡಿಕೊಂಡ ಮೀನುಗಾರರ ಸಮಿತಿ ಅಧ್ಯಕ್ಷರು ಚುನಾವಣೆ ಮುನ್ನ ಕೆಲಸ ಆರಂಭಿಸದೆ ಹೋದರೆ ಮರವಂತೆ ಭಾಗದ ಮೀನುಗಾರಿಕಾ ಕುಟುಂಬದವರು ಚುನಾವಣೆಯಲ್ಲಿ ಮತದಾನ ಮಾಡದೆ ಇರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ತೌಕ್ತೆ ಚಂಡಮಾರುತದಿಂದ ಮರವಂತೆ ಕಡಲ ತೀರಿ ಪ್ರದೇಶ ಭಾಗಶಃ ಹಾನಿಯಾಗಿದೆ 50ಕ್ಕೂ ಹೆಚ್ಚಿನ ಮೀನುಗಾರಿಕಾ ಶೆಡ್ಡುಗಳು,300ಕ್ಕೂ ಅಧಿಕ ತೆಂಗಿನ ಮರಗಳು ನಾಶವಾಗಿದ್ದು,ಮೀನುಗಾರಿಕಾ ರಸ್ತೆ ಸಂಪೂರ್ಣ ಹಾಳಾಗಿದೆ.ಮಳೆಗಾಲ ಹತ್ತಿರವಾಗುತ್ತಿದ್ದು ಕಡಲ ತೀರ ರಕ್ಷಣೆಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ.ಜೂನ್ ತಿಂಗಳ ಆರಂಭದಲ್ಲಿ ಮೊದಲ ತೂಫಾನ್‍ಗೆ ಮರವಂತೆ ಮೀನುಗಾರಿಕಾ ಬಂದರನ್ನು ಕಡಲು ಅಪೋಷಣೆ ಗೈಯಲಿದೆ ಬಂದರು ನಾಶವಾದರೆ ಮೀನುಗಾರರ ಬದುಕಿಗೆ ಕಂಟಕವಾಗಲಿದೆ ಎಂದು ಮೀನುಗಾರರು ತಮ್ಮ ಆತಂಕವನ್ನು ಹೊರ ಹಾಕಿದರು.

ಸರಕಾರದ ನಿರ್ಲಕ್ಷ್ಯದ ಧೋರಣೆ ಒಳಗಾದ ಮರವಂತೆ ಬಂದರಿನ ದುರಸ್ಥಿಗೆ ಮೀನುಗಾರರ ಸೇವಾ ಸಮಿತಿ ವತಿಯಿಂದ ವರ್ಷಕ್ಕೆ 30 ರಿಂದ 40 ಲಕ್ಷ.ರೂ ಹಣವನ್ನು ವ್ಯಹಿಸಲಾಗುತ್ತಿದೆ.ಹೊಟ್ಟೆ ಪಾಡಿಗಾಗಿ ದುಡಿದು ತಿನ್ನುತ್ತಿರುವ ನಾವು ದುಡಿಮೆಯ ಮೂಕ್ಕಾಲು ಪರ್ಸೆಂಟ್ ಹಣವನ್ನು ಬಂದರಿಗೆ ವ್ಯಯಿಸುತ್ತಿದ್ದೇವೆ ಎಂದು ಮಾಧ್ಯಮದವರ ಎದುರು ತಮ್ಮ ನೋವನ್ನು ತೊಡಿಕೊಂಡರು.

ಮರವಂತೆ ಬಂದರಿನ ಒಂದನೇ ಹಂತದ ಕಾಮಗಾರಿಗೆ ಚಾಲನೆ ನೀಡಿ 10 ವರ್ಷ ಕಳೆದಿದೆ 3 ವರ್ಷದೊಳಗೆ ಪೂರ್ಣ ಗೊಳಿಸಬೇಕ್ಕೆನ್ನುವ ಕಾನೂನು ಇದ್ದರೂ ಪೂರ್ಣಗೊಂಡಿಲ್ಲ.ಬದಲಾಗಿ 85.ಕೋಟಿ.ರೂ ವೆಚ್ಚದಲ್ಲಿ 2ನೇ ಹಂತದದ ಕಾಮಗಾರಿ ನಿರ್ಮಿಸಲು ಉದ್ಘಾಟನೆ ಮಾಡಲಾಗಿದೆ,ಯಾವುದೋ ಒಂದು ಸಣ್ಣ ಕಾರಣದಿಂದ 2ನೇ ಹಂತದದ ಕಾಮಗಾರಿಗೂ ಇನ್ನೂ ಚಾಲನೆ ನೀಡದಿರುವುದು ದುರಂತವಾಗಿದೆ ಎಂದು ಮೀನುಗಾರರು ಹೇಳಿದರು.

ಮರವಂತೆ ಬಂದರು ಮತ್ತು ಕಡಲ ತೀತರದ ಅವ್ಯವಸ್ಥೆಯಿಂದ 5000 ರಿಂದ 6000 ಸಾವಿರ ಜನರ ಉದ್ಯೋಗಕ್ಕೆ ದೊಡ್ಡ ಹೊಡೆತ ಬಿದ್ದಿದೆ.ನಾವೂ ಬದುಕಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ಎದುರಾಗಿದ್ದು ನಮ್ಮ ಅಳಲನ್ನು ಕೇಳುವವರು ಯಾರು ಇಲ್ಲದಂತ್ತಾಗಿದೆ ಎಂದು ಮೀನುಗಾರರ ಮಾರ್ಕೇಟ್ ಸಮಿತಿ ಅಧ್ಯಕ್ಷ ಶಂಕರ ಖಾರ್ವಿ ದೂರಿದರು.

ಇಂದಿನ ಮತ್ತು ಹಿಂದಿನ ಸರಕಾರಗಳು ಆಶ್ವಾಸನೆ ಮೂಲಕ ದಿನಗಳನ್ನು ಕಳೆದಿದ್ದಾರೆ ಯಾರಿಗೂ ಮೀನುಗಾರರ ಬಗ್ಗೆ ಕಾಳಜಿಯೇ ಇಲ್ಲಾ,ಮರವಂತೆ ಮೀನುಗಾರರನ್ನು ಸರಕಾರಗಳು ಸಂಪೂರ್ಣವಾಗಿ ನಿರ್ಲಕ್ಷ್ಯದಿಂದ ನೋಡಿದ್ದರ ಫಲದಿಂದ ಚುನಾವಣೆ ಬಹಿಷ್ಕಾರದಂತ ಧೃಡ ನಿರ್ಧಾರಕ್ಕೆ ಮೀನುಗಾರರು ಬಂದಿದ್ದಾರೆ ಎಂದು ಮಾಜಿ ಅಧ್ಯಕ್ಷ ಮೋಹನ್ ಖಾರ್ವಿ ಹೇಳಿದರು.

ನಾಡದೋಣಿ ಮೀನುಗಾರರಿಗೆ ಬಹುಮುಖ್ಯವಾಗಿ ಬೇಕಾಗಿರುವ ಸೀಮೆ ಎಣ್ಣೆಯನ್ನು ನೀಡಲು ಸರಕಾರಕ್ಕೆ ಮನಸ್ಸಿಲ ಎನ್ನುವಂತೆ ವರ್ತಿಸುತ್ತಿದೆ.ಎಂಟು ತಿಂಗಳ ಅವಧಿಯಲ್ಲಿ ಒಟ್ಟು ಮೂರು ಬಾರಿ ಮಾತ್ರ ಸೀಮೆ ಎಣ್ಣೆಯನ್ನು ನೀಡಿದ್ದಾರೆ ಎಂದು ಮೀನುಗಾರರು ಸರಕಾರದ ವಿರುದ್ಧ ದೂರಿದರು.

ನಾಡದೋಣಿ ಒಕ್ಕೂಟದ ವತಿಯಿಂದ ಸಚಿವರು,ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಯಾವುದೇ ರೀತಿಯಾ ಪ್ರಯೋಜನೆ ಆಗಿಲ್ಲ.ಮೀನುಗಾರರ ಮುಗ್ಧತೆ ಮೀನುಗಾರರಿಗೆ ಮುಳುವಾಗಿದೆ ಎಂದು ಮೀನುಗಾರರು ತಮ್ಮ ಅಸಮಾದಾನವನ್ನು ತೊಡಿಕೊಂಡರು.ಈ ಸಂದರ್ಭದಲ್ಲಿ ಮೋಹನ್ ಖಾರ್ವಿ,ಚಂದ್ರಖಾರ್ವಿ,ವೆಂಕಟರಮಣ ಖಾರ್ವಿ,ಸೋಮಯ್ಯ ಖಾರ್ವಿ,ಉಪಾಧ್ಯಕ್ಷ ಶಂಕರ ಖಾರ್ವಿ ಹಾಗೂ ಶ್ರೀರಾಮ ಮಂದಿರ ಮರವಂತೆ ಮೀನುರಾರರ ಸೇವಾ ಸಮಿತಿ ಸದಸ್ಯರು,ಮೀನುಗಾರರು ಉಪಸ್ಥಿತರಿದ್ದರು.

Umesha HS

Recent Posts

ಕೆಸರು ಗದ್ದೆಯಾದ ತಾಲೂಕು ಆಡಳಿತ ಸೌಧ: ಕೆಲಸಕ್ಕಾಗಿ ಬಂದ ಸಾರ್ವಜನಿಕರ ಪರದಾಟ

ಅಫಜಲಪುರ ತಾಲೂಕು ಆಡಳಿತ ಸೌಧ ಅಕ್ಷರಶಃ ಕೆಸರು ಗದ್ದೆಯಾಗಿದೆ. ದಿನಾಲು ಸಾವಿರಾರು ಜನರು ತಹಶೀಲ್ದಾರ ಕಚೇರಿಗೆ ತಮ್ಮ ಕೆಲಸಗಳಿಗೆ ಬಂದು…

1 min ago

ಮರಾಠಿ ಭಾಷೆಯಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಅನಾವರಣ

ಯಕ್ಷಗಾನದ ಹಿರಿಮೆ ಇದೀಗ ಗಡಿದಾಟಿ ಮಹಾರಾಷ್ಟ್ರದಲ್ಲೂ ಸದ್ದು ಮಾಡಿದೆ. ಸಂಪೂರ್ಣ ಮರಾಠಿ ಭಾಷೆಯಲ್ಲಿ ನಡೆದ ಅಪರೂಪದ ಯಕ್ಷಗಾನ ಮಹಾರಾಷ್ಟ್ರ ಪ್ರೇಕ್ಷಕರ…

15 mins ago

ಪುಟಾಣಿ ಕಲಾವಿದೆಯ ಕಲಾಸಿರಿಯ ಅನಾವರಣ: ಬಾಲಕಿಯ ಅದ್ಭುತ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ

ಪುಟಾಣಿ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರ್ ಬಳಗದ ವಯೋಲಿನ್ ವಾದನ ಕಛೇರಿ ಕಾರ್ಯಕ್ರಮ ಉಡುಪಿಯ ಶ್ರೀ ಕೃಷ್ಣಮಠದ…

18 mins ago

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಘೋಷಣೆ: ಸಿಎಂಗೆ ಕೆಯುಡಬ್ಲ್ಯುಜೆ ವತಿಯಿಂದ ಅಭಿನಂದನೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ…

30 mins ago

ರಾಹುಲ್ ಗಾಂಧಿಗೆ 1000 ರೂ. ದಂಡ ವಿಧಿಸಿದ ಜಾರ್ಖಂಡ್ ಹೈಕೋರ್ಟ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ…

32 mins ago

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ

“ಅಧ್ಯಾಪಕರುಗಳ ಪ್ರೋತ್ಸಾಹ ಮತ್ತು ಬೆಂಬಲವೇ ಇವತ್ತಿನ ಈ ದಿನದ ಯಶಸ್ಸು ಮತ್ತು ಇಲ್ಲಿಯ ಕಾರ್ಯಕ್ರಮಗಳೇ ಈ ಕಾಲೇಜಿನ ಮಹತ್ವವನ್ನು ಸಾರುತ್ತಿದೆ…

36 mins ago