ಮಣಿಪಾಲ: ಕೋತಿರಾಜ್ ಖ್ಯಾತಿಯ ಜ್ಯೋತಿರಾಜ್ ಉಡುಪಿ ಜಿಲ್ಲೆಯ ಅತೀ ಎತ್ತರದ ಕಟ್ಟಡ ಮಣಿಪಾಲದಲ್ಲಿರುವ 32ಅಂತಸ್ತಿನ ರಾಯಲ್ ಎಂಬಸ್ಸಿ ಅನ್ನು ಬರಿಗೈಯಲ್ಲಿ ಯಶಸ್ವಿಯಾಗಿ ಹತ್ತುವ ಮೂಲಕ ಸಾಹಸ ಮೆರೆದಿದ್ದಾರೆ. ಆ ಮೂಲಕ ಜೀವಮಾನದಲ್ಲೇ ಅತ್ಯಂತ ಎತ್ತರದ ಕಟ್ಟಡವನ್ನು ಏರಿದರು.
ಸುಮಾರು 350 ಅಡಿ ಎತ್ತರದ ಈ ಕಟ್ಟಡವನ್ನು ಹತ್ತಿ ಕನ್ನಡದ ಬಾವುಟ ಹಾರಿಸಿದರು. ಕಟ್ಟಡದ ಕೆಳಗೆ ನೆರೆದಿದ್ದ ನೂರಾರು ಸಂಖ್ಯೆಯ ಮಂದಿ ಚಪ್ಪಾಳೆ, ಶಿಳ್ಯೆ ಹಾಕುವ ಮೂಲಕ ಕೋತಿರಾಜ್ ಅವರಿಗೆ ಹುರುದಂಬಿಸಿದರು.
ಕೆಳಗಿಳಿದ ಬಳಿಕ ಕಟ್ಟಡದ ಮಾಲೀಕ ಪ್ರಮೋದ್ ಮಧ್ವರಾಜ್ ಜ್ಯೋತಿರಾಜ್ ಹಾಗೂ ತಂಡದವರನ್ನು ಅಭಿನಂದಿಸಿದರು.
ಅಡ್ವೆಂಚರ್ ಮಂಕಿ ಕ್ಲಬ್ ಫೌಂಡೇಶನ್ ಸ್ಥಾಪನೆಗಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಕೋತಿರಾಜ್ ತನ್ನ ತಂಡದೊಂದಿಗೆ ಇಡೀ ರಾಜ್ಯಾದ್ಯಂತ ಸಂಚರಿಸಿ ಸಾಹಸ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.