ಮಲ್ಪೆ: ಆಳಸಮುದ್ರ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಗೋಲ್ಡನ್ ಅಂಜಲ್ ಸಿಕ್ಕಿದೆ. ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಈ ಬೃಹತ್ ಗಾತ್ರದ ಮೀನು ಬಿದ್ದಿದೆ.
ಸ್ಥಳೀಯ ಭಾಷೆಯಲ್ಲಿ ಗೋಲ್ಡನ್ ಅಂಜಲ್ ಎಂದು ಕರೆಯುತ್ತಾರೆ. ಸುಮಾರು 20ರಿಂದ 25 ಕೆಜಿ ತೂಕದ ಈ ಮೀನು, ದುಬಾರಿ ಬೆಲೆಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ.