ಕುಂದಾಪುರ: ನಾವು ಶರೀರವನ್ನು ತ್ಯಜಿಸಿ ಹೋಗುವಾಗ ನಮ್ಮ ಜತೆಯಲ್ಲಿರುವ ಸಂಪತ್ತು ನಮ್ಮ ಜತೆ ಬರುವುದಿಲ್ಲ,ಧಾರ್ಮಿಕವಾದ ಜೀವನದಲ್ಲಿ ಸಾಧನೆ ಮಾಡಿದಂತಹ ಪ್ರಗತಿ ಎನ್ನುವುದು ಮಾತ್ರ ಉಳಿಯುತ್ತದೆ ಎಂದು ಶ್ರೀ ಶೃಂಗೇರಿ ಶಾರದಾಪೀಠಾದೀಶ್ವರರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಬೈಂದೂರು ತಾಲೂಕಿನ ನಾವುಂದ-ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ವೇ.ಮೂ.ಲೋಕೇಶ್ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೇ.ಮೂ.ಲೋಕೇಶ್ ಅಡಿಗ ನಿರೂಪಿಸಿ,ವಂದಿಸಿದರು.