News Karnataka Kannada
Friday, May 10 2024
ಉಡುಪಿ

ಕುಂದಾಪುರ: ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡ ಮೀನುಗಾರರು

Kundapur: Fishermen rebuild link road
Photo Credit : News Kannada

ಕುಂದಾಪುರ: ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದ ಕಡಲಬ್ಬರ ಉಂಟಾಗಿ ಬೈಂದೂರು ತಾಲೂಕಿನ ಮರವಂತೆ ಕರಾವಳಿ ಭಾಗದ ಫಿಶರೀಷ್ ರಸ್ತೆ ಬಿರುಕು ಬಿಟ್ಟು ಸಂಪರ್ಕ ಕಡಿತವಾಗಿದ್ದರೂ ಸರಕಾರ ಮತ್ತು ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಯಾವುದೇ ರೀತಿ ಕ್ರಮಗಳನ್ನು ಕೈಗೊಳ್ಳದೆ ಇದ್ದಿದ್ದರಿಂದ ಬೇಸತ್ತ ಮೀನುಗಾರರು ರಸ್ತೆ ಸಂಪರ್ಕ ವ್ಯವಸ್ಥೆಗಾಗಿ ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ವತಿಯಿಂದ ಸುಮಾರು 10.ಲಕ್ಷ.ರೂ ವ್ಯಯಿಸಿ ಕಡಲ ದಂಡೆಗೆ ಕಲ್ಲುಗಳನ್ನು ಹಾಕಿ ಸುಮಾರು 100.ಮೀಟರ್ ವರೆಗಿನ ಸಂಪರ್ಕ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಕೊಂಡಿದ್ದಾರೆ.

ಮರವಂತೆ ಕಡಲ ತಡಿಯ ನಿವಾಸಿಗಳಾದ ಮೀನುಗಾರರಿಗೆ ಫಿಶರೀಷ್ ರಸ್ತೆ ಪ್ರಮುಖ ರಸ್ತೆ ಆಗಿದೆ. ಕಳೆದ ವರ್ಷ ಕಾಣಿಸಿಕೊಂಡಿದ್ದ ತೌಕ್ತೆ ಚಂಡ ಮಾರುತದ ಹೊಡೆತಕ್ಕೆ ಮೀನುಗಾರಿಕಾ ರಸ್ತೆ ಸಂಪೂರ್ಣ ಹಾನಿಯಾಗಿತ್ತು. ಕಡಲ ದಂಡೆ ಸಮುದ್ರ ಪಾಲಾಗಿ ಮೀನುಗಾರರ ಮೂಲಭೂತ ಸೌಕರ್ಯಗಳು ನಾಶವಾಗಿದ್ದರೂ ಸರಕಾರ ಯಾವುದೇ ರೀತಿ ಕ್ರಮಗಳನ್ನು ಕೈಗೊಳ್ಳದೆ ಪರಿಹಾರ ನೀಡದೆ ಅಸಡ್ಡೆಯನ್ನು ತೋರಿದೆ.

ಈ ಬಾರಿ ಕಾಣಿಸಿಕೊಂಡಿದ್ದ ಬಿಪರ್ ಜಾಯ್ ಚಂಡ ಮಾರುತದಿಂದ ಮತ್ತೆ ಮರವಂತೆ ಫಿಶರೀಷ್ ರಸ್ತೆಗೆ ಹಾನಿಯಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ರೀತಿ ಕ್ರಮಗಳನ್ನು ಕೈಗೊಂಡಿರಲಿಲ್ಲ. ಚಂಡಮಾರುತದ ಪ್ರಭಾವದಿಂದ ಕರಾವಳಿ ಭಾಗದ ಮರವಂತೆಯಲ್ಲಿ ಹಾನಿಯಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವರು ಇತ್ತ ಕಡೆ ದೃಷ್ಟಿಯನ್ನು ಹಾಯಿಸದೆ ತಮಗೂ ಕಡಲ್ಕೊರೆತಕ್ಕೂ ಯಾವುದೆ ರೀತಿ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು