ಉಡುಪಿ

ಕುಂದಾಪುರ: ಕುರುಡಿ ಮೀನು ಮರಿ ಸಮುದ್ರಕ್ಕೆ ಬಿಡುಗಡೆ

ಕುಂದಾಪುರ: ಸಣ್ಣ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಗಂಗೊಳ್ಳಿ ಅಳಿವೆ ಬಾಗಿಲಿನ ಸಮುದ್ರ ತೀರದಲ್ಲಿ ಸುಮಾರು 4,000 ಕುರುಡಿ ಮೀನಿನ ಮರಿಗಳನ್ನು ಮಂಗಳವಾರ ಬಿಡಲಾಯಿತು.

ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಸಮುದ್ರ ತೀರದಲ್ಲಿ ಕುರುಡಿ ಮೀನಿನ ಮರಿಗಳನ್ನು ನೀರಿಗೆ ಬಿಟ್ಟು ಮಾತನಾಡಿ ಪ್ರತಿಕೂಲ ಹವಾಮಾನ ಮತ್ತು ಬದಲಾದ ವ್ಯವಸ್ಥೆಯಲ್ಲಿ ಇತ್ತಿಚಿನ ದಿನಗಳಲ್ಲಿ ಸಮುದ್ರದಲ್ಲಿ ಮೀನಿನ ಸಂತತಿ ನಾಶವಾಗುತ್ತಿದೆ.ಮೀನುಗಾರರ ಹಿತ ದೃಷ್ಟಿಯಿಂದ ಸಂತಾನಭಿವೃದ್ಧಿಯೊಂದಿಗೆ ದ್ವಿಗುಣಗೊಳ್ಳುವ ಕುರುಡಿ ಮೀನಿನ ಮರಿಗಳನ್ನು ಸಮುದ್ರಕ್ಕೆ ಬೀಡಲಾಗಿದೆ ಇದು ಸಣ್ಣ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದರು.

ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ,ಸದಸ್ಯರಾದ ನಾಗರಾಜ ಖಾರ್ವಿ,ಬಸವ ಖಾರ್ವಿ,ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ,ಹಿರಿಯ ಮೀನುಗಾರರಾದ ರಾಮಪ್ಪ ಖಾರ್ವಿ,ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್,ಉಪ ನಿರ್ದೇಶಕ ಶಿವಕುಮಾರ್,ಬಂದರು ನಿರ್ದೇಶಕ ಕುಮಾರ ಸ್ವಾಮಿ,ಎಡಿಎಫ್ ಸುಮಲತಾ ಹಾಗೂ ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕಿನ ಗಂಗೊಳ್ಳಿ ಸೇರಿದಂತೆ ಬೈಂದೂರು ತಾಲೂಕಿನ ಕೊಡೇರಿ ಕಡಲ ತೀರದಲ್ಲಿ 4000, ಪಡುವರಿ ಅಳಿವೆಕೋಡಿಯಲ್ಲಿ 4000 ಹಾಗೂ ಶಿರೂರು ಅಳ್ವಿಗದ್ದೆಯಲ್ಲಿ 4,000 ಒಟ್ಟು 16,800 ಕುರುಡಿ ಮೀನಿನ ಮರಿಗಳನ್ನು ಕಡಲ ತೀರಕ್ಕೆ ಬಿಡಲಾಗಿದೆ.ಸಮುದ್ರ ನೀರಿಗೆ ಒಗ್ಗಿಕೊಂಡು ಮೀನಿನ ಮರಿ ಬೆಳವಣಿಗೊಂಡು ಸಂತಾಭಿವೃದ್ಧಿಯಲ್ಲಿ ತೊಡಗಿಕೊಂಡರೆ ಮೀನಿನ ಸಂತತಿ ವೃದ್ಧಿಯಾಗುವ ನಿರೀಕ್ಷೆ ಇದೆ.

Gayathri SG

Recent Posts

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು…

18 mins ago

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

41 mins ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

57 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

1 hour ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

2 hours ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

2 hours ago