News Karnataka Kannada
Friday, May 03 2024
ಉಡುಪಿ

ಕುಂದಾಪುರ: ಬಸ್ರೂರು ಅಶೋಕ ಪಾರ್ಕ್ ನಲ್ಲಿ ಪ್ರಾಚೀನ ಕಾಲದ ಲಿಂಗ ಮುದ್ರೆ ಕಲ್ಲು ಪತ್ತೆ

An ancient linga mudra stone has been found at Ashoka Park in Basrur.
Photo Credit : By Author

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕ್ ನಲ್ಲಿ 400 ವರ್ಷಗಳ ಕಾಲದ ಪ್ರಾಚೀನ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿದೆ.

ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದಲ್ಲಿರುವ ಅಶೋಕ ಪಾರ್ಕ್ ನವೀಕರಣಕ್ಕಾಗಿ ಜಾಗ ಸಮತಟ್ಟು ಮಾಡುವ ಸಂದರ್ಭದಲ್ಲಿ ಅಂದಾಜು 400 ವರ್ಷಗಳಷ್ಟು ಪ್ರಾಚೀನ ಕಾಲದ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿದೆ. ಅತ್ಯಂತ ಹಳೆಯ ಕಾಲದ ಲಿಂಗ ಮುದ್ರೆ ಕಲ್ಲು ಬಸ್ರೂರುನಲ್ಲಿ ಪತ್ತೆಯಾಗಿರುವುದರಿಂದ ಸಂಶೋಧಕರ ಮನದಲ್ಲಿ ಕೂತುಹಲ ಮೂಡಿಸಿದೆ.

ಕಲ್ಲಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕರಾದ ಪ್ರದೀಪ‌ ಕುಮಾರ್ ಬಸ್ರೂರು ಅವರ ಗಮನಕ್ಕೆ ತಂದಿದ್ದು ವಿಶೇಷ ಐತಿಹ್ಯವೂಳ್ಳ ಕಲ್ಲನ್ನು ರಕ್ಷಣೆ ಮಾಡಲಾಗಿದೆ.

ಲಿಂಗ ಮೂದ್ರ ಕಲ್ಲಿನಲ್ಲಿ ಸೂಯ೯,ಚಂದ್ರ,ಶಿವಲಿಂಗ,ನಂದಿ ವಿಗ್ರಹ ಇರುವುದು ಕಂಡು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು