News Karnataka Kannada
Wednesday, May 01 2024
ಉಡುಪಿ

ಕುಕ್ಕುಂದೂರು: ಬಾವಿಗೆ ಬಿದ್ದು ವೃದ್ಧ ಮೃತ್ಯು

Elderly man dies after falling into well
Photo Credit : News Kannada

ಕುಕ್ಕುಂದೂರು: ನೀರು ತರಲು ಹೋದ ವೃದ್ಧರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಮೇಲ್ಜಡ್ಡು ಎಂಬಲ್ಲಿ ಡಿ.6ರಂದು ಸಂಜೆ ನಡೆದಿದೆ.

ಕುಕ್ಕುಂದೂರು ಗ್ರಾಮದ ಮೇಲ್ಜಡ್ಡು ನಿವಾಸಿ 65 ವರ್ಷದ ಚುಕುಡ ಎಂದು ಗುರುತಿಸಲಾಗಿದೆ. ಇವರು ಪ್ರತಿದಿನ ಸಂಜೆ ಬಾವಿಯಿಂದ ನೀರು ತೆಗೆದು ತೋಟಕ್ಕೆ ಹಾಕುತ್ತಿದ್ದರು. ಅದರಂತೆ ನಿನ್ನೆ ಸಂಜೆ ಕೊಡಪಾನ ಹಿಡಿದುಕೊಂಡು ತೋಟದಲ್ಲಿರುವ ಬಾವಿಗೆ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು