ಕುಂದಾಪುರ: ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 178 ನೇ ವಾರದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಕೋಡಿ ಬೀಚ್ ನಲ್ಲಿ ಭಾನುವಾರ ನಡೆಯಿತು.
ಕಡಲ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್,ಬಾಟಲಿ ಇನ್ನಿತರ ನಿರೂಪಯುಕ್ತ ಕಸವನ್ನು ಹೆಕ್ಕಿ ಕ್ಲೀನ್ ಮಾಡಲಾಯಿತು.ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡ ಸ್ವಯಂ ಸೇವೆ ನೆಲೆಯಲ್ಲಿ ಕಳೆದ 178 ವಾರಗಳಿಂದ ಕಡಲ ತೀರವನ್ನು ಸ್ವಚ್ಚತೆ ಮಾಡುವುದರ ಮುಖೇನ ಕಡಲಿನ ಸ್ವಚ್ಚತೆ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ.ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡದವರ ಪರಿಸರ ಕಾಳಜಿ ಹಲವಾರು ಸಂಘ ಸಂಸ್ಥೆಗಳಿಗೆ ಪ್ರೇರಣೆಯನ್ನು ನೀಡಿದೆ.