Categories: ಉಡುಪಿ

ಕಾರ್ಕಳ: ಮುಡಾರು ಗ್ರಾಮದ ಕ್ಯಾಶ್ಯೂ ಫ್ಯಾಕ್ಟರಿ ಬಳಿ ಲಾರಿ ಚಾಲಕನ ಕೊಲೆ

ಕಾರ್ಕಳ: ಲಾರಿ ಚಾಲಕನನ್ನು ಕೊಲೆಗೈದ ಘಟನೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿ ಇರುವ ಕ್ಯಾಶ್ಯೂ ಫ್ಯಾಕ್ಟರಿ ಬಳಿ ಸಂಭವಿಸಿದೆ. ಮಣಿ ತಮಿಳುನಾಡು (36) ಕೊಲೆಯಾದವ.

ಮುಡ್ರಾಲುನಲ್ಲಿ ಇರುವ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಅವರುಗಳು ಲಾರಿಯಲ್ಲಿ ಅನ್‌ಲೋಡ್ ಮಾಡಿ ಹೋಗುತ್ತಿದ್ದರು.

ಅದರಂತೆ ಜ.30ರಂದು ಸಂಜೆ 4:00 ಗಂಟೆಗೆ ಗೇರುಬೀಜದ ಲೋಡ್ ಇರುವ ಲಾರಿಗಳು ಬಂದಿದ್ದು ಅವರುಗಳು ಅನ್ ಲೋಡ್ ಮಾಡಿ ಹೋಗಿದ್ದು ಇನ್ನೆರಡು ಲಾರಿಗಳು ಸಂಜೆ 05:30 ಗಂಟೆಗೆ ಬಂದಿದ್ದು ತಡವಾದ್ದರಿಂದ ಲಾರಿಯು ಅನ್‌ಲೋಡ್ ಆಗದೇ ಫ್ಯಾಕ್ಟರಿಯ ಬಳಿ ನಿಂತುಕೊಂಡಿತ್ತು.

ಲಾರಿಗಳ ಚಾಲಕ ಹಾಗೂ ಬದಲಿ ಚಾಲಕರುಗಳು ಕೂಡಾ ಅಲ್ಲಿಯೇ ಇದ್ದು ರಾತ್ರಿ 8:30 ಗಂಟೆಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರೋರ್ವರಿಗೆ ಫ್ಯಾಕ್ಟರಿಯ ಮೇಲ್ಗಡೆ ಕೆಲಸ ಮಾಡುತ್ತಿರುವಾಗ ಲಾರಿ ನಿಲ್ಲಿಸಿದ ಸ್ಥಳದಿಂದ ಜೋರಾಗಿ ಬೊಬ್ಬೆ ಕೇಳಿಸಿದ್ದು, ಅಲ್ಲಿಗೆ ಹೋಗಿ ನೋಡಿದಾಗ ಲಾರಿಯ ಚಾಲಕ ಮಣಿ ತಮಿಳುನಾಡು (36) ಎಂಬಾತನನ್ನು ಲಾರಿಯ ಎದುರುಗಡೆ ಆತನ ಕುತ್ತಿಗೆಗೆ ಶಾಲ್ ಬಿಗಿದು ಯಾವುದೋ ಆಯುಧದಿಂದ ಇರಿದು ಕೊಲೆ ಮಾಡಿರುವುದು ಕಂಡುಬಂದಿದೆ.

ಲಾರಿಯ ಇನ್ನೋರ್ವ ಚಾಲಕ ವೀರಬಾಹು ಹಾಗೂ ಮೃತ ಮಣಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಯಾವುದೋ ಕಾರಣದಿಂದ ಲಾರಿಯ ಇನ್ನೋರ್ವ ಚಾಲಕ ವೀರಬಾಹು ಮಣಿಯನ್ನು ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sneha Gowda

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

13 mins ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

26 mins ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

39 mins ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

55 mins ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

1 hour ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

1 hour ago