Categories: ಮಂಗಳೂರು

ಬೆಳ್ತಂಗಡಿ: ಅಕ್ರಮವಾಗಿ ಬೆಳೆಬಾಳುವ ಮರ ಸಾಗಾಟ, ಅರಣ್ಯಧಿಕಾರಿಗಳಿಂದ ಕ್ಷಿಪ್ರ ಕಾರ್ಯಾಚರಣೆ

ಬೆಳ್ತಂಗಡಿ: ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿಂದ ರಾತ್ರಿ ವೇಳೆ ಬೆಳೆಬಾಳುವ ಮರ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಧಿಕಾರಿಗಳು ದಾಳಿ ನಡೆಸಿ ಮರದ ದಿಮ್ಮಿ ಸಹಿತ ಆರೋಪಿಗಳನ್ನು ಜ.30 ರಂದು ವಶಕ್ಕೆ ಪಡೆದಿದ್ದಾರೆ.

ಬಂದಾರು ಶಾಖಾ ಉಪ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬಂದಿಗಳು ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿ ಮುರ ಗ್ರಾಮದ ಮುಗೇರಡ್ಕ ಎಂಬಲ್ಲಿ ಜ.30 ರಂದು ರಾತ್ರಿ ಸುಮಾರು 2.30 ರ ಸಮಯಕ್ಕೆ ಮುಗೇರಡ್ಕ ಎಂಬಲ್ಲಿ ಅಕ್ರಮವಾಗಿ ಹೆಬ್ಬಲಸು, ಮಾವು ಹಾಗೂ ಕಾಡು ಜಾತಿಯ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಲಾರಿಯನ್ನು ಪತ್ತೆ ಹಚ್ಚಿದ್ದರು.

ಲಾರಿಗೆ ಬೆಂಗಾವಲಾಗಿ ಸಂಚರಿಸುತ್ತಿದ್ದ ಪಾಣೆ ಮಂಗಳೂರಿನ ಅಬ್ಬಾಸ್, ಕಡಬ ಮರ್ದಾಳದ
ಇರ್ಫಾನ್, ಇಳಂತಿಲ ಗ್ರಾಮದ ಅಂಡೆತ್ತಡ್ಕ ನಿವಾಸಿಗಳಾದ ಅಶ್ರಫ್, ರಹಿಮಾನ್ ಮರ ಕಡಿದ ಸ್ಥಳದ ವಾರೀಸುದಾರ ಮುರ ಗ್ರಾಮದ ಕೃಷ್ಣಪ್ಪ ಕ್ಷೌರಿಕ ಹಾಗೂ ಲಾರಿ ಚಾಲಕ ಬಂಟ್ವಾಳದ ಬೋಗೋಡಿ ನಿವಾಸಿ ಅಶ್ರಫ್ ಅಂಬೋನು ಅವರ ವಿರುದ್ಧ ಅರಣ್ಯ ಸಂರಕ್ಷಣೆ ಕಾಯ್ದೆಯಂತೆ ದೂರು ದಾಖಲಿಸಲಾಗಿದೆ.

ಲಾರಿ ಸಂಖ್ಯೆ ಕೆಎ-13, ಎ-2102 ಹಾಗೂ ಬೆಂಗಾವಲು ವಾಹನ ಕೆಎ-21 ಇಬಿ- 7581ಹಾಗೂ ಮೂರು ಮೋಟ‌ ಸೈಕಲ್, ಕೆಎ21 ವೈ 6102,ಕೆಎ21 ವೈ 2658 ಹಾಗೂ ಕೆಎ-21 ವೈ-0537 ಮತ್ತು ಲಾರಿಯಲ್ಲಿದ್ದ 26 ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ.

ಪಾಣೆಮಂಗಳೂರಿನ ಅಬ್ಬಾಸ್, ಮರ್ದಾಳ ನಿವಾಸಿ
ಇರ್ಫಾನ್, ಮೊಗ್ರು ನಿವಾಸಿ ಕೃಷ್ಣಪ್ಪ ಕ್ಷೌರಿಕನನ್ನು ಬಂಧಿಸಲಾಗಿದ್ದು ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ವಶ ಪಡಿಸಿದ ಮರಗಳ ಸೊತ್ತುಗಳ ಮೌಲ್ಯ 2.7ಲಕ್ಷ ರೂ. ವಾಹನಗಳ ಅಂದಾಜು ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ಜಯಪ್ರಕಾಶ ಕೆ.ಕೆ., ಮಾರ್ಗದರ್ಶನದಂತೆ ಬಂದಾರು ಶಾಖಾ ಉಪ ವಲಯ ಅರಣ್ಯಾಧಿಕಾಲ ಜೆರಾಲ್ಡ್ ಡಿಸೋಜ, ಹಾಗೂ ಗಸ್ತು ಅರಣ್ಯ ಪಾಲಕರಾದ ಜಗದೀಶ ಕೆ.ಎನ್., ಪ್ರಶಾಂತ್ ಮಾಳಗಿ, ಎಂ.ಎಂ. ಜಗದೀಶ, ಅರಣ್ಯ ವೀಕ್ಷಕರಾದ ರವಿ ಮತ್ತು ಸೇಸಪ್ಪ ಗೌಡ ವಾಹನ ಚಾಲಕರಾದ ಕಿಶೋರ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

 

Sneha Gowda

Recent Posts

ಆಮ್ ಆದ್ಮಿ ಪಕ್ಷಕ್ಕೆ 7 ಕೋಟಿ ರೂ ವಿದೇಶಿ ಫಂಡಿಂಗ್: ತನಿಖೆ ಕೋರಿ ಗೃಹ ಸಚಿವಾಲಯಕ್ಕೆ ಇಡಿ ಪತ್ರ

ಆಮ್ ಆದ್ಮಿ ಪಕ್ಷಕ್ಕೆ  ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್‌ಸಿಆರ್‌ಎ ತನಿಖೆಯನ್ನು ಕೋರಿ…

2 hours ago

ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…

2 hours ago

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

2 hours ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

3 hours ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

3 hours ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

3 hours ago