News Karnataka Kannada
Sunday, April 28 2024
ಉಡುಪಿ

ಕಾರ್ಕಳ: ಪರಶುರಾಮ ಥೀಂ ಪಾರ್ಕ್ ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ ಯೋಗ್ಯ ಶೌಚಾಲಯ ಅಳವಡಿಕೆ

: India's first eco-friendly toilet to be installed at Parshuram Theme Park
Photo Credit : News Kannada

ಕಾರ್ಕಳ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ಸ್ವಚ್ಚ ಭಾರತ ಕಲ್ಪನೆಗೆ ಅನುಗುಣವಾಗಿ ಕರ್ನಾಟಕದ ಇಂಧನ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರ ಪರಿಕಲ್ಪನೆಯಂತೆ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ ಯೋಗ್ಯ ಶೌಚಾಲಯವನ್ನು ಅಳವಡಿಸಲಾಗಿದೆ.

ಭಾರತದ ರಕ್ಷಣಾ ಇಲಾಖೆಯಲ್ಲಿ (ಡಿ.ಆರ್.ಡಿ.ಓ) ಸುಮಾರು ಐವತ್ತು ವರ್ಷಗಳಿಂದ ಸಹಯೋಗ ಹೊಂದಿರುವ ತಮಿಳುನಾಡಿನ ಕೊಯಮುತ್ತೂರು  ಮೂಲದ ಮ್ಯಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಪ್ರಥಮ ಬಾರಿಗೆ (ಸ್ಮಾರ್ಟ್ ಇ ಟಾಯ್ಲೆಟ್)ಪರಿಸರ ಯೋಗ್ಯ ಶೌಚಾಲಯವನ್ನು ನಿರ್ಮಾಣ ಮಾಡಿದೆ. ಇದನ್ನು ಮೊಡಿನ್ನೊ ಇನ್ನೋವೇಷನ್ ಇಂಡಿಯಾ ಪ್ರೈವೇಟ್ ಲಿ.ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮೊದಲ ಶೌಚಾಲಯವನ್ನು ಉಡುಪಿ ಜಿಲ್ಲೆಯ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಅಳವಡಿಸಲಿದೆ.

ಸ್ವಚ್ಚ ಭಾರತ ಕಲ್ಪನೆಗೆ ಹೊಸ ಮುನ್ನುಡಿ. ಈ ಕಲ್ಪನೆ ಸಮಾಜದಲ್ಲಿ ಹೊಸ ಬದಲಾವಣೆಗೆ ಮುನ್ನುಡಿಯಾಗುವ ಜೊತೆಗೆ ನೀರಿನ ಸಂರಕ್ಷಣೆ ಯೊಂದಿಗೆ ಭೂಮಿ ತಾಯಿಯನ್ನು ಸಂಪೂರ್ಣವಾಗಿ ಸ್ವಚ್ಚವಾಗಿಡುವುದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಕಲ್ಪನೆಗೆ ಸಂಪೂರ್ಣ ಸಹಕಾರವಾಗಲಿದೆ.

ಇದರ ವಿಶೇಷತೆಯೆಂದರೆ ಶೌಚಾಲಯದಲ್ಲಿ ಬಳಸಿದ ನೀರು ಮಾನವ ತ್ಯಾಜ್ಯದೊಂದಿಗೆ ಮ್ಯಾಕ್ ಬಯೋ ಡೈಜೆಸ್ಟರ್ ಮೂಲಕ ಯಾವುದೇ ರೀತಿಯ ವಿದ್ಯುತ್ ಅಥವಾ ಇಂಧನದ ಸಹಾಯವಿಲ್ಲದೆ ಮಾಲಿನ್ಯ ಸಂಸ್ಥೆ ನಿರೀಕ್ಷಿಸಿದ ಮಟ್ಟಕ್ಕೂ ಹೆಚ್ಚಿನ ರೀತಿಯಲ್ಲಿ ಶುದ್ದೀಕರಣಗೊಂಡು ಪುನಃ ಸೋಲಾರ್ ಪಂಪಿನ ಮೂಲಕ ಶೌಚಾಲಯದ ಮೇಲಿನ ಟ್ಯಾಂಕಿಗೆ ವರ್ಗಾವಣೆಯಾಗುತ್ತದೆ.ಇದರಿಂದ ಬಳಸಿದ ನೀರನ್ನು ಪುನಃ ಸಂರಕ್ಷಿಸಿದಂತಾಗುತ್ತದೆ.

*ಈ ಶೌಚಾಲಯವು ಕೇವಲ ೨೦ ದಿನಗಳಲ್ಲಿ ನಿರ್ಮಾಣ ಮಾಡಬಹುದಾಗಿದ್ದು ೩೦ ವರ್ಷಕ್ಕೂ ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ.
*ಶೌಚಾಲಯದ ಒಳಗಡೆಯ ವಿನ್ಯಾಸ ಪಂಚತಾರಾ ಹೋಟೆಲ್ಗಳಲ್ಲಿರುವ ಶೌಚಾಲಯದಂತೆ ನೈರ್ಮಲ್ಯದಿಂದ ಕೂಡಿದೆ.ಇದನ್ನು ಗ್ರಾಮದ     ವಿದ್ಯುತ್ ಸಂಪರ್ಕ ಇಲ್ಲದ ಯಾವುದೇ ಕೂಡ ನಿರ್ಮಾಣ ಮಾಡಬಹುವುದಾಗಿದೆ.
* ಒಂದು ಸಾವಿರ ಲೀಟರ್ ಓವರ್ಹೆಡ್ ಟ್ಯಾಂಕ್ ಹೊಂದಿದೆ.
*ಅತ್ಯಾಧುನಿಕ ತಾಂತ್ರಕ ವ್ಯವಸ್ಥೆ ಬೆಳಕಿನ ವಿನ್ಯಾಸ ಹೊಂದಿದೆ.
*ಸ್ವಯಂ ಚಾಲಿತ ಶೌಚಲಯ ನೀರು,ಪ್ರಾಕ್ರತಿಕ ಗಾಳಿಬೆಳಕು ಸೌಕರ್ಯ ಸೇರಿದಂತೆ ಸಂಪೂರ್ಣ ಪರಿಸರ ಸ್ನೇಹಿ ಕಲ್ಪನೆಯಲ್ಲಿ ಮೂಡಿಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು