ಉಡುಪಿ

ಕಾರ್ಕಳ: ಡಾ. ಸುರೇಶ್ ಕುಡ್ವರವರಿಗೆ ಅತ್ಯುತ್ತಮ ರಾಜ್ಯಾಧ್ಯಕ್ಷ ಪ್ರಶಸ್ತಿ

ಕಾರ್ಕಳ: ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ೨೦೨೧ – ೨೦೨೨ ಸಾಲಿನ ರಾಜ್ಯಾಧ್ಯಕ್ಷರಾಗಿದ್ದ ಕಾರ್ಕಳದ ಡಾ. ಸುರೇಶ್ ಕುಡ್ವರವರಿಗೆ ೨೦೨೧ – ೨೨ ನೇ ಸಾಲಿನ ರಾಷ್ಟ್ರದ ಅತ್ಯುತ್ತಮ ರಾಜ್ಯಾಧ್ಯಕ್ಷರೆಂದು ಪ್ರಶಸ್ತಿಯನ್ನು ಐಎಂಎ ರಾಷ್ಟ್ರಾಧ್ಯಕ್ಷ ಡಾ. ಸಹಜಾನಂದ ಪ್ರಸಾದ ಸಿಂಗ್ ರವರು ಪ್ರಯಾಗ್ ರಾಜನಲ್ಲಿ ಜರುಗಿದ ರಾಷ್ಟ್ರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಕಟೀಲಿನಲ್ಲಿ ಜನಿಸಿ, ಶ್ರೀ ದುರ್ಗಾ ಪರಮೇಶ್ವರಿ ದೇವಳ ವಿದ್ಯಾ ಸಂಸ್ಥೆಗಳಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ ಪಡೆದ ಅವರು ಪಿಯುಸಿ ವ್ಯಾಸಂಗ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಮುಗಿಸಿದರು. ಇವರು ಎಂಬಿಬಿಎಸ್ ಪದವಿ ಮಣಿಪಾಲದ ಕೆಎಂಸಿ ಯಲ್ಲಿ ೨ ನೇ ರ‍್ಯಾಂಕ್ ನೊಂದಿಗೆ ಹಾಗೂ ಎಚಿಡಿ (ಪದವಿ) ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದರು.

ಕಳೆದ ೪೦ ವರ್ಷಗಳಿಂದ ಕಾರ್ಕಳದಲ್ಲಿ ಮಕ್ಕಳ ತಜ್ಞರಾಗಿ ಜನಪ್ರಿಯರಾದ ಇವರು ಜೇಸಿ, ರೊಟರಿ ಹಾಗೂ ರೆಡ್ ಕ್ರಾಸ್ ಹಾಗೂ ಐಎಂಎ ಯ ಸ್ಥಾಪಕ ಕಾರ್ಯದರ್ಶಿಗಳಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ೧೯೮೮ ರಲ್ಲಿ ಅಂತರಾಷ್ಟ್ರೀಯ ರೊಟರಿ ಗವರ್ನರ್ ಪ್ರಶಸ್ತಿ, ೧೯೯೮ರಲ್ಲಿ ಅತ್ಯುತ್ತಮ ಜೇಸಿ ಪ್ರಶಸ್ತಿ, ಐಎಂಎಯಲ್ಲಿ ೧೯೯೧ರಲ್ಲಿ ರಾಷ್ಟ್ರದಲ್ಲಿಯೇ ಉತ್ತಮ ಘಟಕ ಪ್ರಶಸ್ತಿ, ೨೦೦೪ರಿಂದ ೨೦೦೭ರವರಿಗೆ ಪ್ರತೀವರ್ಷ ರಾಜ್ಯಾಧ್ಯಕ್ಷರ ಪ್ರಶಸ್ತಿ, ೨೦೧೯ ರಲ್ಲಿ ಡಾಕ್ಟರ್ ಬಿ.ಸಿ. ರಾಯ್ ರಾಜ್ಯ ಪ್ರಶಸ್ತಿ, ೨೦೦೮ರಲ್ಲಿ ಐಎಂಎ ದೆಹಲಿ ಅತ್ಯುತ್ತಮ ವೈದ್ಯ ಪ್ರಶಸ್ತಿ, ಪಡೆದಿದ್ದರು. ಡಾ.ಟಿಎಂಎ ಪೈಯವರ ನಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ೨ ನೇ ಕರ್ನಾಟಕ ರಾಜ್ಯದ ಐಎಂಎ ಅಧ್ಯಕ್ಷರಾದ ಇವರ ಮುಂದಾಳತ್ವದಲ್ಲಿ ಇತ್ತೀಚೆಗೆ ಅಕ್ಟೋಬರ್ ೨೮,೨೯ ರಂದು ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ಸಭಾಭವನದಲ್ಲಿ ಐಎಂಎ ರಾಜ್ಯ ಸಮ್ಮೇಳನ ಅಭೂತಪೂರ್ವವಾಗಿ ನೇರವೇರಿಸಿ ಎಲ್ಲರ ಶ್ಲಾಘನೆ ಪಡೆದಿದ್ದರು.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

6 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

7 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

7 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

7 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

8 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

8 hours ago