News Karnataka Kannada
Thursday, May 02 2024
ಉಡುಪಿ

ಡ್ರೋನ್‌ಗಳನ್ನು ಬಳಸಿಕೊಂಡು ಆರೋಗ್ಯ ವಿತರಣಾ ವ್ಯವಸ್ಥೆ ಉದ್ಘಾಟನೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ), ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ ಸಿ ಎಂ ಆರ್ ) ಡ್ರೋನ್ ಮೂಲಕ ಬಹು ಅಗತ್ಯ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ವ್ಯವಸ್ಥೆಯ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಲಾಯಿತು . ಕರ್ನಾಟಕದ ಪೆರಿಫೆರಲ್ ಮತ್ತು ಟರ್ಷಿಯರಿ ಕೇರ್ ಆಸ್ಪತ್ರೆಗಳ ನಡುವೆ ಆಂಕೊಪಾಥೋಲಾಜಿಕಲ್ ಮಾದರಿ (ಸ್ಯಾಂಪಲ್‌)ಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆಯು ಹೊಂದಿದೆ.
Photo Credit : NewsKarnataka

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ), ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ ಸಿ ಎಂ ಆರ್ ) ಡ್ರೋನ್ ಮೂಲಕ ಬಹು ಅಗತ್ಯ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ವ್ಯವಸ್ಥೆಯ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಲಾಯಿತು . ಕರ್ನಾಟಕದ ಪೆರಿಫೆರಲ್ ಮತ್ತು ಟರ್ಷಿಯರಿ ಕೇರ್ ಆಸ್ಪತ್ರೆಗಳ ನಡುವೆ ಆಂಕೊಪಾಥೋಲಾಜಿಕಲ್ ಮಾದರಿ (ಸ್ಯಾಂಪಲ್‌)ಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆಯು ಹೊಂದಿದೆ.

ಇಂದು ಮೊದಲ ಮಾದರಿ (ಸ್ಯಾಂಪಲ್) ಅನ್ನು ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ರವಾನಿಸಲಾಯಿತು.

ಈ ಉಪಕ್ರಮದ ಮುಖ್ಯ ಉದ್ದೇಶವು ಫ್ರೋಜನ್ ಮಾದರಿ (ಸ್ಯಾಂಪಲ್) ಗಳಂತಹ ವಸ್ತುಗಳನ್ನು ದೂರದ ಸ್ಥಳಗಳ ಬಾಹ್ಯ ಆಸ್ಪತ್ರೆಗಳಿಂದ ಟರ್ಷಿಯರಿ ಕೇರ್ ಆಸ್ಪತ್ರೆಗಳಿಗೆ ವೈಮಾನಿಕ ವಿಧಾನಗಳನ್ನು ಬಳಸಿಕೊಂಡು ವರ್ಗಾಯಿಸುವ ಕಾರ್ಯಸಾಧ್ಯತೆಯನ್ನು ನಿರ್ಣಯಿಸುವುದು. ಈ ಪ್ರಯತ್ನವು ಶಸ್ತ್ರಚಿಕಿತ್ಸಕರು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಮಾದರಿಗಳನ್ನು ಪರೀಕ್ಸಿಸಿ ಅಗತ್ಯವಿರುವ ಕಾರ್ಯವಿಧಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ನಿರೀಕ್ಷಿಸಲಾಗಿದೆ.

ಮಾನವರಹಿತ ವೈಮಾನಿಕ ವಾಹನಗಳು (UAVs), ಸಾಮಾನ್ಯವಾಗಿ ಡ್ರೋನ್‌ಗಳು ಎಂದು ಕರೆಯಲ್ಪಡುತ್ತವೆ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಭಾರತದಲ್ಲಿ, ಗ್ರಾಮೀಣ ಪ್ರದೇಶಗಳಿಂದ ಇಂಟ್ರಾಆಪರೇಟಿವ್ ಮಾದರಿ (ಸ್ಯಾಂಪಲ್ ) ಸಾರಿಗೆಯ ಕೊರತೆಯನ್ನು ಇವುಗಳು ನೀಗಿಸುತ್ತವೆ. ಈ ಯೋಜನೆಯು ತ್ವರಿತ ಸಾರಿಗೆ ಉದ್ದೇಶಕ್ಕಾಗಿ ಡ್ರೋನ್‌ಗಳನ್ನು ಬಳಸಿಕೊಳ್ಳುವ ಕಾರ್ಯಸಾಧ್ಯತೆ, ಉಪಯುಕ್ತತೆ ಮತ್ತು ವೆಚ್ಚ-ಪರಿಣಾಮಕಾರಿತ್ವವನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ.

ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಮಾದರಿಗಳನ್ನು ತ್ವರಿತವಾಗಿ ಸಾಗಿಸಬಹುದು, ಶಸ್ತ್ರಚಿಕಿತ್ಸಾ ವಿಧಾನಗಳ ಸಮಯದಲ್ಲಿ ಫ್ರೋಜನ್ ಮಾದರಿಗಳ ಪರೀಕ್ಷೆ ಮೂಲಕ ಸುಧಾರಿತ ರೋಗನಿರ್ಣಯಗಳಿಗೆ ತಕ್ಷಣದ ಪ್ರವೇಶವನ್ನು ಒದಗಿಸುತ್ತದೆ. ಈ ಯೋಜನೆಯು ಯಶಸ್ವಿಯಾದರೆ, ಈ ಸಂಶೋಧನೆಯು ಗ್ರಾಮೀಣ ಆಸ್ಪತ್ರೆಗಳು ಮತ್ತು ಪ್ರಯೋಗಾಲಯ ಸೌಲಭ್ಯಗಳ ನಡುವೆ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಆರೋಗ್ಯ ವಿತರಣೆಯಲ್ಲಿ ಕ್ರಾಂತಿಗೊಳಿಸಬಹುದು, ಇದರಿಂದಾಗಿ ಭೌಗೋಳಿಕವಾಗಿ ಪ್ರವೇಶಿಸಲಾಗದ ಪ್ರದೇಶಗಳಲ್ಲಿ ರೋಗಿಗಳಿಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸುಗಮಗೊಳಿಸುತ್ತದೆ.

ಡಾ . ರಾಜೀವ್ ಬಹ್ಲ್, ಕಾರ್ಯದರ್ಶಿ, ಆರೋಗ್ಯ ಸಂಶೋಧನಾ ವಿಭಾಗ, ಭಾರತ ಸರ್ಕಾರ ಮತ್ತು ಡೈರೆಕ್ಟರ್ ಜನರಲ್ ಐ ಸಿ ಎಂ ಆರ್ ಹಾಗೂ ಡಾ ಅತುಲ್ ಗೋಯೆಲ್, ಆರೋಗ್ಯ ಸೇವೆಗಳ ಮಹಾನಿರ್ದೇಶಕರು, DGHS, MoHFW ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು . ಡಾ. ಸಂಘಮಿತ್ರ ಪತಿ, ಹೆಚ್ಚುವರಿ ಮಹಾನಿರ್ದೇಶಕರು (ADG),ಐ ಸಿ ಎಂ ಆರ್ ಮತ್ತು ನಿರ್ದೇಶಕರು, ICMR-RMRC, ಭುವನೇಶ್ವರ್, ಶ್ರೀಮತಿ ಅನು ನಗರ್ , ಜಂಟಿ ಕಾರ್ಯದರ್ಶಿ, ಆರೋಗ್ಯ ಸಂಶೋಧನಾ ಇಲಾಖೆ, ಭಾರತ ಸರ್ಕಾರ. ಡಾ. ಕಾಮಿನಿ ವಾಲಿಯಾ, ವಿವರಣಾತ್ಮಕ ಸಂಶೋಧನೆ ವಿಭಾಗ, ಐಸಿಎಂಆರ್-ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ಕುಲಪತಿಗಳು ಮಾಹೆ ಮಣಿಪಾಲ , ಡಾ ಶರತ್ ಕೆ ರಾವ್, ಸಹ ಕುಲಪತಿ (ಆರೋಗ್ಯ ವಿಜ್ಞಾನ) ಮಾಹೆ, ಮಣಿಪಾಲ ಗೌರವ ಅತಿಥಿಗಳಾಗಿದ್ದು, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ ಎಚ್ ಎಸ್ ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡ್ರೋನ್ ಯೋಜನೆಯನ್ನು ಉದ್ಘಾಟಿಸಿದ ಡಾ. ರಾಜೀವ್ ಬಹ್ಲ್, ಅವರು ಆರೋಗ್ಯ ರಕ್ಷಣೆಯ ವಿತರಣಾ ಉಪಕ್ರಮದ ನವೀನ ವಿಧಾನವನ್ನು ಶ್ಲಾಘಿಸಿದರು, ವಿಶೇಷವಾಗಿ ಕಡಿಮೆ ಸಾರಿಗೆ ವ್ಯವಸ್ಥೆಯುಳ್ಳ ಗ್ರಾಮೀಣ ಪ್ರದೇಶಗಳಲ್ಲಿ ಮಾದರಿ( ಸ್ಯಾಂಪಲ್) ಗಳನ್ನು ಸಾಗಿಸಲು ಇರುವ ಸಾರಿಗೆ ತೊಡಕುಗಳು ಮತ್ತು ಈ ಯೋಜನೆಯ ಮೂಲಕ ರೋಗನಿರ್ಣಯ ಸೇವೆಗಳನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು.

ಈ ಸಂದರ್ಭದಲ್ಲಿ, ಡಾ. ಕಾಮಿನಿ ವಾಲಿಯಾ ಅವರು ಡ್ರೋನ್ ಯೋಜನೆಯ ಮಹತ್ವವ ಕುರಿತು ಮಾತನಾಡಿದರು , ಆರೋಗ್ಯದ ಲಭ್ಯತೆಯ ಮೇಲೆ ಅದರ ಸಂಭಾವ್ಯ ಪರಿಣಾಮವನ್ನು ಒತ್ತಿಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನು ನಾಗರ್ ಅವರು ಡ್ರೋನ್ ಯೋಜನೆಯ ಪರಿವರ್ತಕ ಸಾಮರ್ಥ್ಯವನ್ನು ಒತ್ತಿಹೇಳಿದರು, ಇದು ಆರೋಗ್ಯ ರಕ್ಷಣೆಯ ಸೇತುವೆಯಾಗಿ ಕೆಲಸ ಮಾಡಲಿದೆ ಮತ್ತು ಕರ್ನಾಟಕದಾದ್ಯಂತ ವೈದ್ಯಕೀಯ ಸೇವೆಗಳಿಗೆ ಸಮಾನವಾದ ಪ್ರವೇಶವನ್ನು ಖಾತ್ರಿಪಡಿಸುವ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.

ಡಾ. ಸಂಘಮಿತ್ರ ಪತಿ ಅವರು ಆರೋಗ್ಯ ರಕ್ಷಣೆಯ ಸವಾಲುಗಳನ್ನು ಎದುರಿಸುವಲ್ಲಿ ಸಹಕಾರಿ ಸಂಶೋಧನಾ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ರೋಗನಿರ್ಣಯದ ಸಾಮರ್ಥ್ಯಗಳನ್ನು ಹೆಚ್ಚಿಸುವ ಮತ್ತು ರೋಗಿಗಳ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆಯ ಸಾಮರ್ಥ್ಯದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು.

ಡಾ. ಅತುಲ್ ಗೋಯೆಲ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಅಸಮಾನತೆಗಳನ್ನು ಮತ್ತು ವೈದ್ಯಕೀಯ ಸೇವೆಗಳನ್ನು ಹೆಚ್ಚಿಸುವಲ್ಲಿ ಡ್ರೋನ್ ಯೋಜನೆಯ ಮಹತ್ವವನ್ನು ಒತ್ತಿ ಹೇಳಿದರು.

ಲೆಫ್ಟಿನೆಂಟ್ ಜನರಲ್ (ಡಾ) ವೆಂಕಟೇಶ್ ಅವರು ಈ ಪ್ರವರ್ತಕ ಉಪಕ್ರಮವನ್ನು ತೆಗೆದುಕೊಂಡಿರುವ ಐಸಿಎಂಆರ್ ಅನ್ನು ಅಭಿನಂದಿಸಿದರು, ಆರೋಗ್ಯದ ಅಸಮಾನತೆಗಳನ್ನು ಪರಿಹರಿಸಲು ಮತ್ತು ಎಲ್ಲಾ ಸಮುದಾಯಗಳಿಗೆ ಆರೋಗ್ಯ ಪ್ರವೇಶವನ್ನು ಸುಧಾರಿಸಲು ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಡಾ. ಹೆಚ್.ಎಸ್. ಬಲ್ಲಾಳ್ ಅವರು ಐ ಸಿ ಎಂ ಆರ್ ನ ಈ ಡ್ರೋನ್ ಯೋಜನೆಯ ಹಿಂದಿನ ಸಹಕಾರಿ ಮನೋಭಾವವನ್ನು ಶ್ಲಾಘಿಸಿದರು ಮತ್ತು ಆರೋಗ್ಯ ರಕ್ಷಣೆಯಲ್ಲಿ ನಾವೀನ್ಯತೆಯ ಮಹತ್ವವನ್ನು ಒತ್ತಿ ಹೇಳುತ್ತಾ . ಮಾಹೆ ಮಣಿಪಾಲವು ಇಂತಹ ನಾವಿನ್ಯ ಕಾರ್ಯದಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ” ಎಂದು ಹೇಳಿದರು.

ಕಾರ್ಯಕ್ರಮವು ಐಸಿಎಂಆರ್‌ನ ವಿಜ್ಞಾನಿ ಮತ್ತು ಕಾರ್ಯಕ್ರಮ ಅಧಿಕಾರಿ ಡಾ. ಸುನಿಲ್ ಅಗರ್ವಾಲ್ ಅವರ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ ಅವರು ಡ್ರೋನ್ ಯೋಜನೆಗೆ ಅವಿರತ ಬೆಂಬಲ ನೀಡಿದ ಮತ್ತು ಎಲ್ಲಾ ಭಾಗವಹಿಸಿದವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

ಡಾ ನಾರಾಯಣ ಸಭಾಹಿತ್, ಸಹ ಕುಲಪತಿ (ತಂತ್ರಜ್ಞಾನ ಮತ್ತು ವಿಜ್ಞಾನ), ಡಾ.ಗಿರಿಧರ್ ಕಿಣಿ, ಕುಲಸಚಿವ ಮಾಹೆ ಮಣಿಪಾಲ , ಡಾ. ಪದ್ಮರಾಜ್ ಹೆಗ್ಡೆ, ಡೀನ್-ಕೆಎಂಸಿ, ಡಾ. ಆನಂದ್ ವೇಣುಗೋಪಾಲ್, ಸಿಒಒ-ಬೋಧನಾ ಆಸ್ಪತ್ರೆ, ಮಾಹೆ, ಮಣಿಪಾಲ, ಡಾ ಅರುಣ್ ಮಯ್ಯ ಡೀನ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ , ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮತ್ತು ಡಾ ಕುಲದೀಪ್ ನಿಗಮ್ , ಐ ಸಿ ಎಂ ಆರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು