ಉಡುಪಿ: ಜಿಲ್ಲೆಯ ಕೋಡಿ ಬೇಂಗ್ರೆಯಲ್ಲಿ ಸಮುದ್ರಕ್ಕೆ ಕೈರಂಪಣಿ ಬಲೆ ಹಾಕಿದ ಮೀನುಗಾರಿಗೆ ಬಂಪರ್ ಮೀನು ಸಿಕ್ಕಿದೆ. ಸ್ಥಳೀಯ ಮೀನುಗಾರರು ಬೀಸಿದ ಕೈರಂಪಣಿ ಬಲೆಗೆ ಬೂತಾಯಿ, ಬುಂಗುಡೆ ಸಹಿತ ರಾಶಿ ರಾಶಿ ಮೀನುಗಳು ಸಿಕ್ಕಿವೆ. ಭರ್ಜರಿ ಮತ್ಸ್ಯ ಬೇಟೆಯಿಂದ ಮೀನುಗಾರರು ಪುಲ್ ಖುಷ್ ಆದರು.
ರಾಶಿ ರಾಶಿ ಮೀನುಗಳನ್ನು ನೋಡಲು ಕಡಲ ತಡಿಯ ನಿವಾಸಿಗಳು ಕಡಲಿನತ್ತ ಧಾವಿಸಿ ಬಂದರು. ಮಾತ್ರವಲ್ಲ ಸಮುದ್ರ ಬದಿ ಬಿದ್ದ ಮೀನುಗಳನ್ನು ಜನ ಪ್ಲಾಸ್ಟಿಕ್ ಕವರ್ ಗಳಲ್ಲಿ ತುಂಬಿಕೊಂಡು ಹೋದರು.