Categories: ಉಡುಪಿ

ಡಬಲ್ ಇಂಜಿನ್ ಸರಕಾರದಿಂದ ಅಭಿವೃದ್ಧಿ- ಜೆ.ಪಿ ನಡ್ಡಾ

ಕುಂದಾಪುರ: ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳಾದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ,ಆಯುಷ್ಮಾನ್ ಯೋಜನೆ,ಕಿಸಾನ್ ಸನ್ಮಾನ್ ಯೋಜನೆಯನ್ನು ಕರ್ನಾಟಕದ ಜನರಿಗೆ ತಲುಪಿಸಲು ಆಗಿನ ಜೆಡಿಎಸ್ ಮತ್ತು ಕಾಂಗ್ರೆಸ್ ಸರಕಾರ ವಿಫಲವಾಗಿತ್ತು.

ಯಡಿಯೂರಪ್ಪನವರ ಸರಕಾರ ಬಂದ ಮೇಲೆ ಸಮರ್ಪಕವಾದ ರೀತಿಯಲ್ಲಿ ಜನರಿಗೆ ತಲುಪಿಸಲು ಕ್ರಮಗಳನ್ನು ಕೈಗೊಂಡರು.ರೈತರಿಗೆ ಮತ್ತು ಅವರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹೆಚ್ಚಿಸಲು ಬಿಜೆಪಿ ಸರ್ಕಾರ ಈಗಾಗಲೇ ಸಾಕಷ್ಟು ಅನುದಾನ ನೀಡಿದೆ.ಡಬಲ್ ಇಂಜಿನ್ ಸರಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.

ಕುಂದಾಪುರ ವಿಧಾನಸಭೆ ಕ್ಷೇತ್ರದ ಸಾಲಿಗ್ರಾಮದಲ್ಲಿ ಭಾನುವಾರ ನಡೆದ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿದ ಅವರು ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

ನಮ್ಮದು ಹೆಸರಿಗೆ ಮಾತ್ರ ಡಬಲ್ ಇಂಜಿನ್ ಸರಕಾರವಲ್ಲ ಅಭಿವೃದ್ಧಿ ಕೆಲಸಗಳ ಮೂಲಕ ಡಬಲ್ ಇಂಜಿನ್ ಪವರ್‍ಅನ್ನು ಸಾಬಿತು ಮಾಡಿದ್ದೇವೆ.ಕೊರೊನಾ ಸಮಯದಲ್ಲಿ ಸಾಗರೋಪಾದಿಯಾಗಿ ವ್ಯಾಕಿನ್ ಮತ್ತು ರೇಷನ್ ಹಂಚಿಕೆ,ಸ್ಟೀಲ್ ಉತ್ಪಾದಕ ಘಟಕ,ಮೊಬೈಲ್ ಉತ್ಪಾದಕ ಘಟಕ,ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಹೀಗೆ ಹಲವಾರು ಯೋಜನೆಗಳನ್ನು ಡಬಲ್ ಇಂಜಿನ್ ಸರಕಾರ ಜಾರಿಗೆ ತಂದಿದೆ.ತುಮಕೂರಿನಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕ ಸ್ಥಾಪಿತವಾಗಲಿದ್ದು ಮುಂದಿನ ದಿನಗಳಲ್ಲಿ ದಕ್ಷಿಣದ ಅತಿ ದೊಡ್ಡ ಉದ್ಯಮ ಕೇಂದ್ರವಾಗಿ ರೂಪಗೊಳ್ಳಲಿದೆ ಹೆಲಿಕ್ಯಾಪ್ಟರ್ ತಯಾರಿಕೆ,ರಲ್ವೆ ಭೋಗಿಗಳ ಘಟಕ ತುಮಕೂರಿನಲ್ಲಿ ಸ್ಥಾಪನೆ ಯಾಗಲಿದ್ದು ಜನರಿಗೆ ಉದ್ಯೋಗ ಕೂಡ ದೊರಕಲಿದೆ ಎಂದು ಹೇಳಿದರು.

ಸಮಾಜಕ್ಕೆ ಕಂಟಕವಾಗಿದ್ದ ಪಿಎಫ್‍ಐ ಸಂಘಟನೆಯನ್ನು ಬ್ಯಾನ್ ಮಾಡುವುದರ ಮುಖೇನ ಡಬಲ್ ಇಂಜಿನ್ ಸರಕಾರ ಈಗಾಗಲೇ ಕರ್ನಾಟಕದಲ್ಲಿ ಶಕ್ತಿ ತೋರಿಸಿದೆ.

ಸಿದ್ದರಾಮಯ್ಯನವರು ಚುನಾವಣೆ ಪ್ರಚಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಇದನ್ನು ಕೇಳಿದರೆ ನಗು ಬರುತ್ತಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಮಾತಿನಲ್ಲೇ ಚಾಟಿ ಬಿಸಿದರು. ಕಾಂಗ್ರೆಸ್ ಪಕ್ಷದ ನಾಯಕರುಗಳಾದ ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್ ಜೈಲಿನಲ್ಲಿ ಇಲ್ಲದೆ ಬೇಲ್ ಮೇಲೆ ಹೊರಗೆ ತಿರುಗುತ್ತಿದ್ದಾರೆ ಎಂದು ಟೀಕಿಸಿದರು.

ಕುಂದಾಪುರ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಅಧಿಕ ಮತಗಳಿಂದ ಜಯಗಳಿಸಲು ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಕೇಳಿಕೊಂಡರು. ಸಚಿವ ಕೋಟ ಶ್ರೀನಿವಾಸ್ ಪೂಜಾರಿ,ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ,ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್,ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ,ಪ್ರಭಾರಿ ಉದಯ್ ಕುಮಾರ್ ಶೆಟ್ಟಿ,ಶ್ಯಾಮಲ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

ಸಾಲಿಗ್ರಾಮ ಆಂಜನೇಯ ದೇವಸ್ಥಾನದಿಂದ ರೋಡ್ ಶೋ ನಡೆಯಿತು, ಸಾವಿರಾರರು ಕಾರ್ಯಕರ್ತರು  ಭಾಗವಹಿಸಿದ್ದರು.

Sneha Gowda

Recent Posts

ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿಗೆ ಚಂಡಮಾರುತ ಹಾಗೂ…

19 mins ago

ಇವಿಎಂ ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟ

ಇವಿಎಂ‌ ಸಾಗಿಸುತ್ತಿದ್ದ ಕ್ಯಾಂಟರ್ ವಾಹನದ ಟೈರ್ ಸ್ಫೋಟಗೊಂಡ ಘಟನೆ ಕೋಲಾರದ ವಡಗೂರ್ ಗೇಟ್ ಬಳಿ ನಡೆದಿದೆ. ಮುಳಬಾಗಿಲಿನಿಂದ ಕೋಲಾರದ‌ ಸ್ಟ್ರಾಂಗ್…

35 mins ago

ಮತ್ತೆ ತಾಳ ತಪ್ಪಿದ “ಶ್ರುತಿ” ಹಾಸನ್ ಲೈಫ್

ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್ ತಮ್ಮ ಬಹು ಕಾಲದ ಗೆಳೆಯನಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಗೂಗಲ್​…

48 mins ago

ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

ಇರಾನ್ ಜೊತೆ ವಹಿವಾಟು ಹೊಂದಿರುವ ಆರೋಪದ ಮೇರೆಗೆ ಭಾರತ ಮೂಲದ 3 ಕಂಪನಿಗಳು ಸೇರಿದಂತೆ 12ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅಮೆರಿಕ…

1 hour ago

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಹಿಂದೇಟು: ಹೈಕೋರ್ಟ್ ತರಾಟೆ

ಕಳೆದ ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

1 hour ago

ಕೇಂದ್ರ ದಿಂದ ‘ಕರ್ನಾಟಕ’ಕ್ಕೆ 3,454 ಕೋಟಿ ರೂ. ಬರಪರಿಹಾರ ಘೋಷಣೆ

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದೆ. ಬರ…

2 hours ago