ಮತದಾನದ 48 ಗಂಟೆ ಮುಂಚೆ ‘ಜಾಹೀರಾತು ಪ್ರಕಟಿಸಲು ಅನುಮತಿ ಕಡ್ಡಾಯ – ಗುರುದತ್ತ ಹೆಗಡೆ

ಧಾರವಾಡ: ಮತದಾನಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಸಂಬಂಧಪಟ್ಟ ಅಭ್ಯರ್ಥಿ ಅಥವಾ ಪಕ್ಷವು ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಪ್ರಮಾಣಪತ್ರ ಪಡೆದುಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಮತದಾನಕ್ಕೆ ನಿಗದಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಕೆಲವು ವಿಶೇಷ ನಿಯಮಾವಳಿಗಳು ಜಾರಿಯಲ್ಲಿರುತ್ತವೆ. 48 ಗಂಟೆಗಳ ಮುಂಚಿನ ಅವಧಿಯಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಮಾಣೀಕರಣ ಸಮಿತಿ ಮುಂದೆ ಸಲ್ಲಿಸಲಾಗುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

Sneha Gowda

Recent Posts

ಸುಡು ಬಿಸಿಲು: ದಾಹ ನೀಗಿಸಲು ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು

ಜಿಲ್ಲೆಯ ಮಲೇ ಮಹದೇಶ್ವರ ಬೆಟ್ಟದ ಹಾಡಿಯೊಂದರ ಸಮೀಪ ಆನೆಗಳ ಹಿಂಡೊಂದು ಜಾನುವಾರುಗಳಿಗೆ ಕಟ್ಟಿಸಿರುವ ನೀರಿನ ತೊಟ್ಟಿಯಲ್ಲಿ ದಾಹ ತೀರಿಸಿಕೊಂಡು ಕಾಡಿಗೆ…

3 mins ago

ರೈಲು ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ರೈಲ್ವೆ ಇಲಾಖೆ ನಿರ್ಧಾರ

ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡುವ ಪ್ರಯಾಣಿಕರ ಯೋಗಕ್ಷೇಮವನ್ನು ಹೆಚ್ಚಿಸುವ ಅನ್ವೇಷಣೆಯಲ್ಲಿ, ಭಾರತೀಯ ರೈಲ್ವೆ ಇಲಾಖೆ 2023ರ ಆಗಸ್ಟ್ ತಿಂಗಳಲ್ಲಿ ಪ್ರಧಾನ…

6 mins ago

ಚಾಮರಾಜನಗರ: ಜನ ಜಾನುವಾರುಗಳಿಗೆ ನೀರು, ಮೇವು ವಿತರಣೆ

ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳ  ಮೇವಿಗೆ ಯಾವುದೇ ಕೊರತೆಯಾಗದಂತೆ ಜಿಲ್ಲಾಡಳಿತ ವತಿಯಿಂದ…

25 mins ago

ವರುಣನ ಅಬ್ಬರಕ್ಕೆ ತುಂಬಿ ಹರಿದ ಕೆರೆ ಕಟ್ಟೆಗಳು

ವರುಣನ ಅಬ್ಬರಕ್ಕೆ ಕೆರೆಕಟ್ಟೆಗಳು ಭರ್ತಿಯಾಗಿದ್ದು, ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಸುತ್ತೂರು, ತಾಯೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳಲ್ಲಿ…

26 mins ago

ಕೆಲ ಬಿಜೆಪಿ ಕಾರ್ಯಕರ್ತರಿಂದ ಚುನಾವಣಾ ಆಯೋಗದ ನಿಯಮ ಉಲ್ಲಂಘನೆ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು, ಚುನಾವಣಾ ಆಯೋಗದ ನಿಯಮಗಳನ್ನ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ತಸ್ವೀ‌ರ್ ಎಂಬುವ ವ್ಯಕ್ತಿ…

39 mins ago

ಫೋಟೋ ತೆಗೆಯಲು ಬಂದ ಅಭಿಮಾನಿಗೆ ಥಳಿಸಿದ ಶಕಿಬ್ ಅಲ್ ಹಸನ್‌

ಬಾಂಗ್ಲಾದೇಶದ ಕ್ರಿಕೆಟ್​ ತಂಡದ ಹಿರಿಯ ಆಲ್​ರೌಂಡರ್​ ಶಕಿಬ್ ಅಲ್ ಹಸನ್‌ ಸೆಲ್ಫಿ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಥಳಿಸಲು ಮುಂದಾಗಿರುವ…

56 mins ago