ಉಡುಪಿ: ಹಸುವೊಂದು ಓಡೋಡಿ ಬಂದು ಅಯ್ಯಪ್ಪ ದೇಗುಲಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಘಟನೆ ಉಡುಪಿಯ ಕುಕ್ಕೆಕಟ್ಟೆಯಲ್ಲಿ ನಡೆದಿದೆ.
ಕುಕ್ಕಿಕಟ್ಟೆ- ಮಾರ್ಪಳ್ಳಿ ಅಯ್ಯಪ್ಪ ಭಕ್ತ ವೃಂದದ ಅಯ್ಯಪ್ಪ ದೇವರ ಗುಡಿಗೆ ಹಸುವೊಂದು ಬಂದು ಪ್ರದಕ್ಷಿಣೆ ಹಾಕುವ ದೃಶ್ಯವೂ ದೇಗುಲದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.