ಉಡುಪಿ: ಪ್ರಚೋದನಕಾರಿ ಭಾಷಣ ಮಾಡಿದ ಬಜರಂಗದಳ ಮುಖಂಡರ ವಿರುದ್ಧ ಕೇಸು ದಾಖಲಾಗಿದೆ. ಕಾರ್ಕಳದಲ್ಲಿ ನಡೆದ ಪಂಜಿನ ಮೆರವಣಿಗೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪುನೀತ್ ಅತ್ತಾವರ ಬ್ಯಾರಿ ಯಾವ ಕೈಯಿಂದ ಗೋಮಾತೆಯನ್ನು ಕಡಿಯುತ್ತಾನೋ, ಅವನ ದೇಹದಿಂದ ಅದೇ ಕೈಯನ್ನು ಬೇರ್ಪಡಿಸುವ ಸಂಕಲ್ಪ ತೊಡಬೇಕೆಂಬ ಹೇಳಿಕೆ ನೀಡಿದ್ದರು. ಈ ವಿರುದ್ಧ ಪ್ರಕರಣ ದಾಖಲಾಗಿದೆ.
ಅದೇರೀತಿ ಕಾರ್ಕಳ ನಗರ ಬಜರಂಗದಳ ನಗರ ಸಂಚಾಲಕ ಸಂಪತ್ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಕಾರ್ಕಳ ನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.