ಉಡುಪಿ: ಮಲ್ಪೆ ಕೊಡವೂರು ಬಳಿ ಇಸ್ಪೀಟು ಜೂಜು ಅಡ್ಡೆಗೆ ದಾಳಿ ನಡೆಸಿದ ಪೊಲೀಸರು, 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಆರೋಪಿಗಳನ್ನು ನಾಗೇಶ್, ರಾಜೇಶ್, ಮಧುಸೂಧನ್, ಸತೀಶ್ ಕುಂದರ್, ರಾಧಾಕೃಷ್ಣ ನಾಯರ್, ಶಂಕರ್ ಕೋಟ್ಯಾನ್, ಸಂಗಯ್ಯ, ಶಂಕರಪ್ಪ ರೇವಣ್ಣ ಬ್ಯಾಡಗಿ, ಬಸವರಾಜ್ ಬಸಪ್ಪ ಹೂಡೆದ್, ಮಹಮ್ಮದ್ ಹನೀಫ್, ಜಾಕ್ರಿಯಾ, ಸಂತೋಷ್ ಶೆಟ್ಟಿ, ಯಶವಂತ ಮೊಗವೀರ, ರಾಜೇಶ್ ಸಫಲಿಗ, ಭಾಸ್ಕರ, ಹನುಮಂತ, ಜಗನ್ನಾಥ, ಸಿರಾಜ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 1,72,080 ರೂ. ನಗದು, 18 ಮೊಬೈಲ್ ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.