ಉಡುಪಿ : ಉಡುಪಿ ಜಿಲ್ಲೆಯು ಕೊರೋನಾ ಲಸಿಕೆಯ ಮೊದಲ ಡೋಸ್ನ್ನು ಶೇ.100 ಮಂದಿಗೆ ಯಶಸ್ವಿಯಾಗಿ ವಿತರಿಸಿದ ರಾಜ್ಯದ ಎರಡನೇ ಜಿಲ್ಲೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡ ಅವರು, ಯಶಸ್ವಿಯಾಗಿ ಶೇ.100 ಮಂದಿಗೆ ಕೊರೋನಾ ಲಸಿಕೆ ನೀಡಿದ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.
ಜಿಲ್ಲೆಯಲ್ಲಿ 18 ವರ್ಷ ಮೇಲಿನ ಒಟ್ಟು 9,01,568 ಮಂದಿಗೆ ಮೊದಲ ಡೋಸ್ನ್ನು ವಿತರಿಸುವ ಗುರಿ ಇದ್ದು, ಇಂದು ಸಂಜೆಯವರೆಗೆ ಒಟ್ಟು 9,08,139 ಮಂದಿಗೆ ಮೊದಲ ಡೋಸ್ ಲಸಿಕೆ ವಿತರಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಶೇ.100ರಷ್ಟು ಮಂದಿಗೆ ಮೊದಲ ಡೋಸ್ ವಿತರಿಸಿದ ರಾಜ್ಯದ ಮೊದಲ ಜಿಲ್ಲೆಯಾಗಿದೆ.