Categories: ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರು ಹಿನ್ನಡೆ? ಯಾರು ಮುನ್ನಡೆ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್‌

ದಕ್ಷಿಣ ಕನ್ನಡ: ಚುನಾವಣಾ ಫಲಿತಾಂಶ ಏರಿಳಿತ ಕಂಡು ಬರುತ್ತಿದೆ. ಕ್ಷಣಕ್ಷಣಕ್ಕೂ ರೋಚಕತೆ ಕೆರಳಿಸುತ್ತಿದೆ. ಇದೀಗ ಪುತ್ತೂರು ಕ್ಷೇತ್ರದಲ್ಲಿ ಆರಂಭಿಕ ಮುನ್ನಡೆ ಕಾಯ್ದಕೊಂಡಿದ್ದ ಕಾಂಗ್ರೆಸ್‌ನ ಅಶೋಕ್ ರೈ ಅವರನ್ನು ಹಿಂದಿಕ್ಕಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಕಾಯ್ದಕೊಂಡರು. ಇದೀಗ ಮತ್ತೆ ಅಶೋಕ್ ರೈ ಮುನ್ನಡೆಯಲ್ಲಿದ್ದಾರೆ.

ಇನ್ನು ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಕ್ಷಿತ್ ಶಿವರಾಂ ಅವರನ್ನು ಹಿಂದಿಕ್ಕಿ ಬಿಜೆಪಿಯ ಹರೀಶ್ ಪೂಂಜಾ ಮುನ್ನಡೆಯಲ್ಲಿದ್ದಾರೆ. ಮೂಡಬಿದ್ರೆ ಕ್ಷೇತ್ರದಲ್ಲಿ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಹಿಂದಿಕ್ಕಿ ಕಾಂಗ್ರೆಸ್‌ನ ಮಿಥುನ್ ರೈ ಮುನ್ನಡೆಯಲ್ಲಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ‌ಯ ಭಾಗೀರಥಿ ಮುರುಳ್ಯ ಹಿನ್ನಡೆಯಲ್ಲಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯು.ಟಿ‌.ಖಾದರ್ ಆರಂಭಿಕ ಮುನ್ನಡೆ ಕಾಯ್ದುಕೊಂಡರೆ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಲೀಡ್‌ನಲ್ಲಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಭರತ್ ಶೆಟ್ಟಿ ಆರಂಭಿಕ ಮುನ್ನಡೆಯಲ್ಲಿದ್ದಾರೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ ರಮಾನಾಥ ರೈ ಮುನ್ನಡೆಯಲ್ಲಿದ್ದಾರೆ

Gayathri SG

Recent Posts

ಪರಶುರಾಮ ಮೂರ್ತಿಯ ಕಾಮಗಾರಿ ನಡೆಸಲು ಕಾಂಗ್ರೆಸ್ ಅಡ್ಡಿ: ನವೀನ್‌  ನಾಯಕ್

ಪರಶುರಾಮ ಮೂರ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಕಾಮಗಾರಿ ಆರಂಭಕ್ಕೆ ಜಿಲ್ಲಾಡಳಿತ ತಡೆಯೊಡ್ಡುವ ಮೂಲಕ ಪರೋಕ್ಷವಾಗಿ…

11 mins ago

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಮೃತದೇಹ ಪತ್ತೆ

ಗಂಡು ಹುಲಿಯೊಂದರ ಮೃತದೇಹ  ಬಂಡೀಪುರ ಹುಲಿ ಸಂರಕ್ಷಿತ  ಪ್ರದೇಶದ  ಮೈಸೂರು ಜಿಲ್ಲೆಯ  ಹೆಡಿಯಾಲ ಉಪ-ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ  ಪತ್ತೆಯಾಗಿದ್ದು, ವಯೋಸಹಜವಾಗಿ…

17 mins ago

15 ವರ್ಷದಿಂದ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ: ಪ್ರದೀಪ್ ಈಶ್ವರ್

ಕಳೆದ 15 ವರ್ಷದಿಂದ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ ಎಂದು ಚಿಕ್ಕಬಳ್ಳಾಪುರದ ಶಾಸಕ…

21 mins ago

ವರುಣನ ಆರ್ಭಟಕ್ಕೆ ಬೆಳೆ ನಷ್ಟ : ಬಿರುಗಾಳಿ ಮಳೆಗೆ ನೆಲಕಚ್ಚಿದ 8 ಎಕರೆ ಬಾಳೆ ಬೆಳೆ

ವರುಣ ಕ್ಷೇತ್ರದಲ್ಲಿ ವರುಣನ ಆರ್ಭಟಕ್ಕೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆಗೊನೆ…

34 mins ago

ಯೇನೆಪೋಯ ವಿಶ್ವ ವಿದ್ಯಾನಿಲಯದಲ್ಲಿ ಕೌಶಲ್ಯ ಮೌಲ್ಯಮಾಪನ ಕಾರ್ಯಾಗಾರ

ನರ್ಸಿಂಗ್ ಎಜುಕೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಹಾಗೂ ಯೇನೆಪೋಯ ವಿಶ್ವ ವಿದ್ಯಾನಿಲಯ, ಮಂಗಳೂರು. ಇದರ ಆಶ್ರಯದಲ್ಲಿ ದಿನಾಂಕ ೦೪.೦೫.೨೦೨೪…

37 mins ago

ಬೀದರ್ ಅಭಿವೃದ್ಧಿಗೆ ಕಾಂಗ್ರೆಸ್ ಗೆಲ್ಲಿಸಿ : ಸಾಗರ್ ಖಂಡ್ರೆ ಮನವಿ

'ಬೀದರ್ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯನ್ನು ಸಂಸತ್ತಿಗೆ ಗೆಲ್ಲಿಸಿ…

44 mins ago