News Karnataka Kannada
Monday, April 29 2024
ಮಂಗಳೂರು

ವೇಣೂರು: ನಿರೀಕ್ಷೆ ಮೀರಿ ಕ್ಷೇತ್ರದಲ್ಲಿ ಯೋಜನೆಗಳ ಅನುಷ್ಠಾನ- ಶಾಸಕ ಹರೀಶ್ ಪೂಂಜ

Venur: Implementation of projects in the constituency beyond expectations: MLA Harish Poonja
Photo Credit : By Author

ವೇಣೂರು, ಜ. ೧೮: ಕಳೆದ ನಾಲ್ಕೂವರೆ ವರ್ಷಗಳಲ್ಲಿ ರೂ. ೧೪.೬೨ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದ ಮರೋಡಿ-ಪೆರಾಡಿ ಗ್ರಾಮದ ವಿಕಾಸ ಹಬ್ಬ ಹಾಗೂ ರೂ. ೩.೬೨ ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮವು ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ಮರೋಡಿ ಗ್ರಾ.ಪಂ. ವಠಾರದಲ್ಲಿ ಜರಗಿತು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಅವಿಭಜಿತ ಜಿಲ್ಲೆಗಳಲ್ಲಿ ಅನುಷ್ಠಾನವಾಗದ ಹಲವು ಯೋಜನೆಗಳು ಬೆಳ್ತಂಗಡಿ ಕ್ಷೇತ್ರದಲ್ಲಿ ನಡೆದಿದೆ. ರೂ. ೨೪೦ ಕೋಟಿ ಅನುದಾನದ ಮೊಗೆರಡ್ಕದ ಏತ ನೀರಾವಳಿ ಯೋಜನೆ, ೧೧೦ ಕೆ.ವಿ. ಸಾಮಾರ್ಥ್ಯದ ಕುತ್ಲೂರಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ, ಪಶ್ಚಿಮವಾಹಿನಿ ಯೋಜನೆ ಮೂಲಕ ರೂ. ೭೫ ಕೋಟಿ ಅನುದಾನದಲ್ಲಿ ೨೪ ವೆಂಟೇಡ್ ಟ್ಯಾಂ ನಿರ್ಮಾಣ, ರೂ. ೨೫ ಕೋಟಿ ಅನುದಾನದಲ್ಲಿ ಅರಸಿನಮಕ್ಕಿಯಲ್ಲಿ ದೇಶದ ಮಾದರಿ ಶಾಲೆ ನಿರ್ಮಾಣ, ರೂ. ೧೦ ಕೋಟಿ ವೆಚ್ಚದಲ್ಲಿ ಐಬಿ ನಿರ್ಮಾಣ, ರಾಜ್ಯದ ಉನ್ನತ ಶಿಕ್ಷಣದ ಮೊದಲ ಡಿಪ್ಲೊಮಾ ಕಾಲೇಜು ರೂ. ೫ ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿದೆ. ರೂ. ೨ ಕೋಟಿಯಲ್ಲಿ ಸಾರ್ವಜನಿಕ ಗ್ರಂಥಾಲಯ, ತಾಲೂಕು ಕೇಂದ್ರದ ೮ ಎಕ್ರೆ ವ್ಯಾಪ್ತಿಯಲ್ಲಿ ರೂ. ೭ ಕೋಟಿ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಆಗಲಿದೆ. ನಿನ್ನಿಕಲ್ಲುವಿನಲ್ಲಿ ೧೦೮ ಎಕ್ರೆ ಜಾಗದಲ್ಲಿ ಇಂಡಸ್ಟ್ರೀರಿಯಲ್ ಏರಿಯಾ ನಿರ್ಮಾಣಕೆ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಉನ್ನತ ಶಿಕ್ಷಣದ ಮೊದಲ ಡಿಪ್ಲೊಮಾ ಕಾಲೇಜು ರೂ. ೫ ಕೋಟಿ ವೆಚ್ಚದಲ್ಲಿ ಅನುಮೋದನೆ ದೊರೆತ್ತಿದೆ. ಬೆಳ್ತಂಗಡಿ ಹೃದಯಭಾಗದಲ್ಲಿ ರೂ. ೧೨ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಫೆ.ಯಲ್ಲಿ ಚಾಲನೆ ದೊರೆಯಲಿದೆ. ತಾಲೂಕಿನ ಸಮಗ್ರ ಅಭಿವೃದ್ದಿಯಲ್ಲಿ ಜಯಂತ್ ಕೋಟ್ಯಾನ್‌ರವರು ಸಹೋದರನಂತೆ ಬಲ ತುಂಬಿದ್ದರಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರು ಮಾತನಾಡಿ, ಸರಿಸುಮಾರು ೨೧ ವರ್ಷದ ಬಳಿಕ ಮರೋಡಿ ಗ್ರಾಮದಲ್ಲಿ ವಿಕಾಸದ ಹಬ್ಬಕ್ಕೆ ಅವಕಾಶ ದೊರೆತ್ತಿದೆ. ನಿರಂತರ ಜನರೊಂದಿಗೆ ಬೆರೆತು ೨೦೦೫ರ ಚುನಾವಣೆಯಲ್ಲಿ ಗೆದ್ದು ಪ್ರಥಮ ಬಿಜೆಪಿ ಬೆಂಬಲಿತ ಅಧ್ಯಕ್ಷತೆಯಾಗಿ ಆಯ್ಕೆಯಾಗಿದ್ದೆ. ೨೪ ವರ್ಷಗಳ ರಾಜಕೀಯ ಜೀವನದಲ್ಲಿ ಇಂದು ಅತೀವ್ರ ಸಂತಸವಾಗಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ರಾಜೇಂದ್ರ ಪಿ. ಜೈನ್ ಪೆರಾಡಿಬೀಡು ಕಾರ್ಯಕ್ರಮ ಉದ್ಘಾಟಿಸಿದರು. ಮರೋಡಿ ಗ್ರಾ.ಪಂ. ಅಧ್ಯಕ್ಷೆ ಪದ್ಮಶ್ರೀ ಜೈನ್, ಹೇಮರಾಜ್ ಕೆ. ಬೆಳ್ಳಿಬೀಡು, ಮರೋಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಶಿರ್ತಾಡಿ ಪ್ರಭಾ ಕ್ಲೀನಿಕ್‌ನ ಡಾ| ಆಶೀರ್ವಾದ್, ಮೂಡಬಿದಿರೆ ಸ್ಕ್ಯಾಡ್ಸ್ ಇದರ ಮಾಜಿ ನಿರ್ದೇಶಕ ಮಹಾವೀರ ಆರಿಗ, ನಿವೃತ್ತ ಮುಖ್ಯಶಿಕ್ಷಕ ಟಿ.ಕೆ ವೆಂಕಟ್ರಾವ್, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಫಕೀರಬ್ಬ ಎಂ., ಬಿಜೆಪಿ ಗ್ರಾಮಸಮಿತಿ ಮಾಜಿ ಅಧ್ಯಕ್ಷ ಗೋಪಾಲ ಶೆಟ್ಟಿ, ನಾರಾವಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ ಅಂಡಿಂಜೆ, ಗಣೇಶ್ ಕರ್ಕೇರಾ ಪೆರಾಡಿ, ಗೋವಿಂದ್ ಭಟ್, ಸುಜಿತ್, ಶುಭರಾಜ್ ಹೆಗ್ಡೆ ಮರೋಡಿ, ಅಶೋಕ್ ಕೋಟ್ಯಾನ್, ಗೋಪಾಲ ಭಟ್ ಉಪಸ್ಥಿತರಿದ್ದರು.

ರತ್ನಾಕರ ಬುಣ್ಣಾನ್ ಸ್ವಾಗತಿಸಿ, ಯಶೋಧರ ಬಂಗೇರ ನಿರೂಪಿಸಿ, ಮರೋಡಿ ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಆಚಾರ್ಯ ವಂದಿಸಿದರು.

ಸಮ್ಮಾನ
ಶಾಸಕ ಹರೀಶ್ ಪೂಂಜ, ಜಯಂತ್ ಕೋಟ್ಯಾನ್, ಪದ್ಮಶ್ರೀ ಜೈನ್, ನಿವೃತ್ತ ಮುಖ್ಯಶಿಕ್ಷಕಿ ಲಿಡ್ವಿನ್ ಡಿಸೋಜ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಶ್ರೀಧರ ಕುಲಾಲ್ ಮರೋಡಿ, ಬಾಲಪ್ರತಿಭೆ ವಿಜ್ಞಾ, ಹಿರಿಯ ಕಾರ್ಯಕರ್ತ ಸುಂದರ ಡ್ರೈವರ್, ಪ್ರಶಾಂತ್ ಮರೋಡಿ ಅವರನ್ನು ಸಮ್ಮಾನಿಸಲಾಯಿತು.

ಶಿಲಾನ್ಯಾಸಗೊಂಡ ಕಾಮಗಾರಿಗಳು
ಮರೋಡಿ ಗ್ರಾಮದ ಹಾರೊದ್ದು-ಬೈಂಕೊಟ್ಟು ರಸ್ತೆ ಕಾಂಕ್ರಿಟ್, ಕಾಯೇರಬೆಟ್ಟು ರಸ್ತೆ ಕಾಂಕ್ರಿಟ್, ಅಂಬಲೊಟ್ಟು-ನಾವ ರಸ್ತೆ ಕಾಂಕ್ರಿಟ್, ಬ್ರಾಂದಾಡಿ-ಅಂಗಡಿಬೆಟ್ಟು ರಸ್ತೆ ಕಾಂಕ್ರಿಟ್, ಕೋಡಿಚ್ಚೂರು-ಉಚ್ಚೂರು ರಸ್ತೆ, ಕಲ್ಪನೆ-ಮುಂಡಾಜೆ-ಗುಡ್ಡನ್‌ಬೆಟ್ಟು ಸಂಪರ್ಕ ರಸ್ತೆ, ಗುಂಡಾವು ಕೆಳಗಿನ ಕಾಲೈಡಿ ರಸ್ತೆ, ಅರುಣೋದಯ-ದೇರಾಜೆ ರಸ್ತೆ, ಪಲಾರಗೋಳಿ-ಕಲ್ಲೊಟ್ಟು ರಸ್ತೆ, ಕಾಯೇರುಬೈಲು ರಸ್ತೆ, ನಡ್ಯಾರಬೈಲು, ಕಲ್ಲೊಟ್ಟು ಕಾಲು ಸಂಕ, ಪೆರಾಡಿ ಗ್ರಾಮದ ದೋಲ್ದೊಟ್ಟು ರಸ್ತೆ ಹಾಗೂ ಬೀರೊಟ್ಟು ಬಳಿ ಕಾಲು ಸಂಕ ರಚನೆಗೆ ಶಿಲಾನ್ಯಾಸ ನೆರವೇರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು