Categories: ಮಂಗಳೂರು

ಅವೈಜ್ಞಾನಿಕ ರೀತಿಯ ವೃತ್ತ : ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನಿಂದ ಪ್ರತಿಭಟನೆ

ಮೂಡುಬಿದಿರೆ: ಮೂಡುಬಿದಿರೆ-ಬಂಟ್ವಾಳ, ಮೂಡುಬಿದಿರೆ-ಧರ್ಮಸ್ಥಳಕ್ಕೆ ಬೇರ್ಪಡುವ ರಸ್ತೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ವೃತ್ತವು ನಿರ್ಮಾಣಗೊಳ್ಳುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆಯ ಅಭಿವೃದ್ಧಿಯ ಹರಿಕಾರ, ಸಮಾಜ ಮಂದಿರ, ಮಹಾವೀರ ಕಾಲೇಜು, ಜಿ.ವಿ.ಪೈ ಆಸ್ಪತ್ರೆಯ ಸ್ಥಾಪಕರಾಗಿರುವ ಎಸ್.ಎನ್‌ಮೂಡುಬಿದಿರೆ ಅವರ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಬೇಕೆಂದು ಪುರಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ ಆಡಳಿತ ಪಕ್ಷದವರು ಬೇರೆ ಹೆಸರನ್ನು ಇಡುತ್ತಿದ್ದಾರೆಂದು ಆರೋಪಿಸಿದ ಅವರು ಇದೀಗ ತಾನೇ ಅಭಿವೃದ್ಧಿಯ ಹರಿಕಾರನೆಂದು ಬೊಗಳೆ ಬಿಡುವ ಶಾಸಕ ಎಲ್ಲಾ ಕಾಮಗಾರಿಗಳಲ್ಲೂ ಭ್ರಷ್ಟಾಚಾರವನ್ನು ಮಾಡುತ್ತಿದ್ದಾರೆ. ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುತ್ತಿರುವ ವೃತ್ತವನ್ನು ಸರಿಪಡಿಸದಿದ್ದರೆ ಪಿಡಬ್ಲುö್ಯ ಇಲಾಖೆಯ ಎದುರು ಧರಣಿ ನಡೆಸಲಾಗುವುದು ಎಂದರು.

ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಮಾತನಾಡಿ, ಕಳೆದ ಒಂದು ವಾರದಿಂದ ವೃತ್ತದ ಕಾಮಗಾರಿ ಆರಂಭಗೊಂಡಿದ್ದು ಅವೈಜ್ಞಾನಿಕ ರೀತಿಯಲ್ಲಿ ವೃತ್ತ ನಿರ್ಮಾಣವಾಗುತ್ತಿದೆ.ಧರ್ಮಸ್ಥಳ , ಬಂಟ್ವಾಳಕ್ಕೆ ಹೋಗುವ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿ ಏನಾದರೂ ಅನಾಹುತ ನಡೆದರೆ ಅದಕ್ಕೆ ಪುರಸಭೆಯ ಬಿಜೆಪಿಯ ಆಡಳಿತವೇ ಕಾರಣ. ಎರಡು ದಿನಗಳಲ್ಲಿ ಇದನ್ನು ತೆಗೆದು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸದಿದ್ದರೆ ತಾವು ಬಿಡಲಾರೆವು ಎಂದು ಎಚ್ಚರಿಸಿದ ಅವರು ಎಸ್.ಎನ್.ಮೂಡುಬಿದಿರೆಯ ಹೆಸರನ್ನು ವೃತ್ತಕ್ಕೆ ಇಡಬೇಕೆಂದು ನಾವು ಸೂಚಿಸಿದ್ದೆವು ಆದರೆ ಬಿಜೆಪಿಯವರ ಹುನ್ನಾರದಿಂದ ಹೆಸರನ್ನು ಬದಲಾಯಿಸಲಾಗಿದೆ ಎಂದರು.

ಪುರಸಭಾ ಸದಸ್ಯರಾದ ಕೊರಗಪ್ಪ, ಪಿ.ಕೆ.ಥೋಮಸ್, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ಹಿಮಾಯುತ್ತುಲ್ಲಾ, ಪುರಂದರ ದೇವಾಡಿಗ, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಮತ್ತಿತರರು ಭಾಗವಹಿಸಿದ್ದರು.

Gayathri SG

Recent Posts

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

3 seconds ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

18 mins ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

45 mins ago

ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸಿದ ವೀಡಿಯೊ ವೈರಲ್

ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…

1 hour ago

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

1 hour ago

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…

1 hour ago