ಮಂಗಳೂರು

ಉಳ್ಳಾಲ: ಬೆಂಗಳೂರಿಂದ ನರಿಂಗಾನ ಗ್ರಾಮಕ್ಕೆ ಡ್ರಗ್ಸ್ ಸಾಗಾಟ, ನಾಲ್ವರ ಬಂಧನ

ಉಳ್ಳಾಲ: ಡಿ.18 ಬೆಂಗಳೂರಿಂದ ಮಂಗಳೂರಿನ ನರಿಂಗಾನ ಗ್ರಾಮದ ತೌಡುಗೋಳಿಗೆ ಕಾರಲ್ಲಿ ಸಾಗಿಸಲಾಗುತ್ತಿದ್ದ 2 ಲಕ್ಷ ಮೌಲ್ಯದ ಎಮ್ ಡಿಎಮ್ ಎ ಮತ್ತು ಗಾಂಜವನ್ನ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ಬೆಂಗಳೂರಿಂದ ನರಿಂಗಾನ ಗ್ರಾಮದ ತೌಡುಗೋಳಿಗೆ ಗಾಂಜಾ ಮತ್ತು ಎಮ್ ಡಿಎಮ್ ಎ ಮಾದಕ‌ ವಸ್ತುವನ್ನ ತರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪಿಎಸ್ಸೈ ಶರಣಪ್ಪ ತಂಡವು ನಿನ್ನೆ ರಾತ್ರಿ ಬೊಳಿಯಾರ್ ನಲ್ಲಿ ದಾಳಿ ನಡೆಸಿ ನಿಷೇದಿತ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮಾರುತಿ ಅಲ್ಟೊ ಕಾರ್ ಸಮೇತ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ನರಿಂಗಾನ ಗ್ರಾಮದ ನಿವಾಸಿಗಳಾದ ಮೊಯ್ದಿನ್ ಹಫೀಜ್ (36) ಮಹಮ್ಮದ್ ಸಿರಾಜ್ (43 ) ಅಡ್ಯಾರ್ ಕಟ್ಟೆ,ವಳಚ್ಚಿಲ್ ನಿವಾಸಿ ಇಕ್ಬಾಲ್ (30) ಕೋಡಿಕಲ್ ,ಅಶೋಕ ನಗರ ನಿವಾಸಿ ಮಹಮದ್ ಅಝೀಜ್ (33) ಬಂಧಿತ ಆರೋಪಿಗಳು.
ಬಂಧಿತರಿಂದ 2,10,000 ಮೌಲ್ಯದ ನಿಷೇದಿತ 4 ಕೆ.ಜಿ ಗಾಂಜಾ,40ಗ್ರಾಂ.ಎಮ್ ಡಿಎಮ್ ಎ ಮತ್ತು 2 ಲಕ್ಷ ಮೌಲ್ಯದ ಆಲ್ಟೊ ಕಾರನ್ನ ವಶ ಪಡಿಸಲಾಗಿದೆ.

ಕೊಣಾಜೆ ಠಾಣಾ ಪಿ.ಎಸ್ಸೈ ಶರಣಪ್ಪ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್, ಪುರುಷೋತ್ತಮ್, ಶೈಲೇಂದ್ರ, ದೀಪಕ್, ಸುರೇಶ್ ,ಹೇಮಂತ್,ಗೌಸ್ ಪಾಲ್ಗೊಂಡಿದ್ದರು.

Ashika S

Recent Posts

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

24 mins ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

49 mins ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

2 hours ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

2 hours ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

3 hours ago