ಮಂಗಳೂರು

ಉಜಿರೆ: ಎನ್ ಎಸ್ ಎಸ್ ಎಂದರೆ ನಿಸ್ವಾರ್ಥ ಸೇವಾ ಯೋಜನೆ ಎಂದ ಅನಿಲ್ ಕುಮಾರ್

ಉಜಿರೆ: ವಿದ್ಯಾರ್ಥಿಗಳು ಜೀವನದಲ್ಲಿ ಬಂದ ಅವಕಾಶಗಳನ್ನು ಚಿಕ್ಕದು ದೊಡ್ಡದೆಂದು ನೋಡದೆ ಬಂದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.ಎನ್ ಎಸ್ ಎಸ್ ಎಂದರೆ ನಿಸ್ವಾರ್ಥ ಸೇವಾ ಯೋಜನೆ, ಅದರಿಂದ ಸಿಗುವ ವ್ಯಕ್ತಿತ್ವ ವಿಕಸನ ಕೌಶಲ್ಯಗಳು ನಮ್ಮ ಮುಂದಿನ ಜೀವನದಲ್ಲಿ ಉಪಯೋಗಕ್ಕೆ ಬರುತ್ತವೆ. ಇಂಥ ಪ್ರಯೋಜನಕಾರಿ ಎನ್ ಎಸ್ ಎಸ್ ನ ಸ್ಥಾಪಕರಾದ ಡಾ. ವಿ ಕೆ ಆರ್ ವಿ ರಾವ್ ಅವರನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕೆಂದು ಎನ್ಎಸ್ಎಸ್ ಸಲಹಾ ಸಮಿತಿಯ ಸದಸ್ಯರಾದ ಸಂಪೂರ್ಣ ಟೆಕ್ಸ್ ಟೈಲ್ಸ್ ನ ಮಾಲೀಕರಾದ ಅನಿಲ್ ಕುಮಾರ್ ಹೇಳಿದರು.

ಉಜಿರೆ ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2022-23 ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ, ಸ್ವಯಂಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು .

ನಂತರ ನಡೆದ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್.ಡಿ.ಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಮತಿ ಆಶಾ ಕಿರಣ್ ರವರು ರಾಷ್ಟ್ರೀಯ ಸೇವಾ ಯೋಜನೆಯ ಇತಿಹಾಸ, ಉಪಯೋಗ, ಉದ್ದೇಶ, ಲಾಭಗಳು, ಎನ್ಎಸ್ಎಸ್ ಸ್ವಯಂಸೇವಕರ ಜವಾಬ್ದಾರಿ, ಎನ್. ಎಸ್. ಎಸ್ ನ ಅವಕಾಶಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಪಿ.ಎನ್ .ಉದಯಚಂದ್ರ ಯೋಜನೆಯ ಭಿತ್ತಿಪತ್ರವನ್ನು ಅನಾವರಣಗೊಳಿಸಿ , ವಿದ್ಯಾರ್ಥಿಗಳಿಗೆ ತರಗತಿಯ ನಾಲ್ಕು ಗೋಡೆಗಳೇ ಪ್ರಪಂಚವಾಗಿರಬಾರದು. ಅವಕಾಶಗಳು ಮಳೆ ಹನಿಯ ಹಾಗೆ ನಿರಂತರವಾಗಿ ಬರುತಿರುತ್ತವೆ, ಅವುಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದರು. ಬಿಡುವಿನಲ್ಲಿ ಓದುವ ಹವ್ಯಾಸ ಮತ್ತು ವಿಷಯ ನಮ್ಮ ಅಧ್ಯಯನಕ್ಕೆ ಪೂರಕವಾಗಿರಬೇಕೆಂದು ಹೇಳಿದರು.

ಎನ್.ಎಸ್ .ಎಸ್ ನ ಪ್ರಸ್ತುತ ಸಾಲಿನ ನಾಯಕಿಯಾದ ಕುಮಾರಿ ಸ್ಪಂದನಾ ಕಳೆದ ವರ್ಷದ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ನಂತರ ಹಿರಿಯ ನಾಯಕರಾದ ಕೃಷ್ಣರಾಜ ಮತ್ತು ವಸುಮತಿ ಈಗಿನ ನಾಯಕರಿಗೆ ಅಧಿಕಾರ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಡಾ.ಲಕ್ಷ್ಮೀನಾರಾಯಣ.ಕೆ.ಎಸ್ ಹಾಗೂ ದೀಪಾ ಆರ್. ಪಿ ಉಪಸ್ಥಿತರಿದ್ದರು.  ಸ್ವಯಸೇವಕರಾದ ಅಭಿಷೇಕ್, ವಿಘ್ನೇಶ್, ಅಂಜನಾ ಕೆ ರಾವ್ ಪ್ರಾರ್ಥಿಸಿದರು. ಡಾ. ಲಕ್ಷ್ಮೀನಾರಾಯಣ ಕೆ ಎಸ್ ರವರು ಸ್ವಾಗತಿಸಿ, ಶ್ರೀಮತಿ ದೀಪಾ ಆರ್ ಪಿ ಮೇಡಂ ವಂದಿಸಿ, ಸ್ವಯಂಸೇವಕಿ ರಿಯಾ ಲವಿಟಾ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Sushma K

Recent Posts

ಬಸ್ ಹತ್ತುವಾಗ ಆಯಾತಪ್ಪಿ ಬಿದ್ದ ಮಹಿಳೆ : ಚಕ್ರಕ್ಕೆ ಸಿಲುಕಿ ಸಾವು

ಬಸ್ ಹತ್ತುವಾಗ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನಪ್ಪಿರುವ ಘಟನೆ . ಶಿವಮೊಗ್ಗದ ಸಾಗರ ತಾಲೂಕಿನ ಅಂಬಾರಗೋಡ್ಲು-ಹೊಳೆಬಾಗಿಲು ಬಳಿ ನಡೆದಿದೆ. ಧಾರವಾಡ…

9 mins ago

ಉಳುಮೆ ವೇಳೆ ಟ್ರ‍್ಯಾಕ್ಟರ್ ಗೆ ಸಿಲುಕಿ 8 ವರ್ಷದ ಬಾಲಕ ಸಾವು

ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ‍್ಯಾಕ್ಟರ್‌ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ.

15 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್‌

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಹಾರಿದ ಘಟನೆ ಬೆಂಗಳೂರು ಗ್ರಾಮಾಂತರ…

30 mins ago

ಪಾಪನಕೆರೆ ಒತ್ತುವರಿ ಆರೋಪ : ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಭೀಮನಗರದ ರೈತರು ಯುವ ಮುಖಂಡ ಕೃಷ್ಣಕುಮಾರ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

47 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

1 hour ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

1 hour ago