News Karnataka Kannada
Monday, April 29 2024
ಮಂಗಳೂರು

ಸೌಜನ್ಯ ಪರ ನ್ಯಾಯಕ್ಕಾಗಿ ಉಜಿರೆಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡ ತ್ರಿಶುಲ್ ಸೇನೆ

Trishul Sena takes out padayatra from Ujire to Bengaluru to seek justice for Soujanya
Photo Credit : News Kannada

ಧರ್ಮಸ್ಥಳ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗು ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದೆ. ರಾಜ್ಯವ್ಯಾಪಿ ಹೋರಾಟದ ಕಿಚ್ಚು ಹೆಚ್ಚಾಗುತ್ತಿದೆ. ಇದೀಗ ಉಜಿರೆ ಯಿಂದ ಬೆಂಗಳೂರಿಗೆ ಸೌಜನ್ಯ ಪರ ನ್ಯಾಯಕ್ಕಾಗಿ ತ್ರಿಶುಲ್ ಸೇನೆ 305ಕಿ.ಮೀ ಪಾದಯಾತ್ರೆ ಕೈಗೊಂಡಿದೆ.

ಬೆಳ್ತಂಗಡಿ ಪಾಂಗಳದ ಸೌಜನ್ಯ ಮನೆಯಿಂದ ಪಾದಯಾತ್ರೆ ಪ್ರಾರಂಭಗೊಂಡಿದೆ. ಸೌಜನ್ಯ ಪೋಷಕರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ನಿರಂತರವಾಗಿ 3ದಿನ ಪಾದಯಾತ್ರೆ ಕೈಗೊಂಡಿರುವ ತ್ರಿಶುಲ್ ಸೇನೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಿಸಲು ತ್ರಿಶುಲ್ ಸೇನೆಯಿಂದ ಸರಕಾರಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದಾರೆ.

ಇನ್ನು ಇದೇ ಆಗಸ್ಟ್ 27ರಂದು ದ.ಕ ಹಾಗು ಉಡುಪಿ ಬಿಜೆಪಿ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಲಿದೆ. ಆಗಸ್ಟ್ 28ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ಚಲೋ ನಡೆಯಲಿದೆ. ವಿವಿಧ ಜನ ಪ್ರತಿನಿಧಿಗಳು ಹಾಗು ಸಂಘಟನೆಗಳಿಂದ ಸರಕಾರಕ್ಕೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಆಗ್ರಹಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು