ಮಂಗಳೂರು: ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು, ಪಿಂಟೋ ಲೇನ್ ನಲ್ಲಿ ನಿರ್ಮಿಸಲಾಗಿರುವ ಟೋನಿ ಅಂಡ್ ಗೈ ಎಸ್ಸೆನ್ಸಸ್ ಹೇರ್ ಡ್ರೆಸಿಂಗ್ ಮಳಿಗೆಯನ್ನು ಗುರುವಾರ ಉದ್ಘಾಟಿಸಿದರು.
ಟೋನಿ & ಗೈ ಸಲೂನ್ ಗ್ರಾಹಕರಿಗೆ ಉತ್ತಮ ಸೌಲಭ್ಯವನ್ನು ಒದಗಿಸುವಾಗ, ಆರಾಮದಾಯಕ ವಾತಾವರಣದಲ್ಲಿ ಹೇರ್ ಡ್ರೆಸಿಂಗ್ ಮತ್ತು ಸೌಂದರ್ಯ ಸೇವೆಗಳಲ್ಲಿ ಉತ್ಕೃಷ್ಟತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಟೋನಿ & ಗೈ ಹೇರ್ ಕಟ್, ಗಡ್ಡ, ಬ್ಲೋಡ್ರೈ, ಇಸ್ತ್ರಿ, ಟೋನಿಂಗ್ ಮತ್ತು ಕರ್ಲ್ ಗಳಂತಹ ಸೇವೆಗಳನ್ನು ಒದಗಿಸುತ್ತದೆ. ಕೂದಲಿನ ಚಿಕಿತ್ಸೆ, ವ್ಯಾಕ್ಸಿಂಗ್, ಬ್ಲೀಚ್ ಮತ್ತು ಥ್ರೆಡಿಂಗ್, ಬಾಡಿ ಪಾಲಿಶಿಂಗ್, ಕಂಪೆಕಿ, ಮಸಾಜ್, ಸೀಸೋಲ್, ಮಣಿ / ಪೇಡಿ, ವಧುವಿನ ಅಲಂಕಾರ ಮತ್ತು ಇನ್ನೂ ಅನೇಕ ಸೇವೆಗಳು ಇದರಡಿಯಲ್ಲಿ ಸಿಗಲಿದೆ.
ಇನ್ನು ಈ ಶುಭಾರಂಭದ ವೇಳೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಮಾಜಿ ಮೇಯರ್ ಜಯಾನಂದ್ ಅಂಚನ್, ಜಿಲ್ಲಾ ಜೆಡಿಎಸ್ ಯುವ ಅಧ್ಯಕ್ಷ ಅಕ್ಷಿತ್ ಸುವರ್ಣ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಚಿನ್ ರೈ, ಬಿಜೆಪಿ ಮುಖಂಡ ಪ್ರಕಾಶ್ ಗರೋಡಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಹೋಟೆಲ್ ಮಾಲೀಕ ವರುಣ್ ಹೆಗ್ಡೆ ಫುಡ್ ಲ್ಯಾಂಡ್ ಗಣೇಶ್ ಶೆಟ್ಟಿ ಹಾಗೂ ಟೋನಿ ಆ್ಯಂಡ್ ಗೈ ಎಸೆಸೆನ್ಸಿಲ್ಸ್ ಮಾಲೀಕ ಶರತ್ ಕೆ ಜೆ ಮತ್ತಿತರರು ಉಪಸ್ಥಿತರಿದ್ದರು.