News Karnataka Kannada
Monday, April 29 2024
ಮಂಗಳೂರು

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ‘ದಿ ಬ್ಲಿಸ್ ಬ್ಯಾಗ್, ಪ್ರೊಜೆಕ್ಟ್’ ವಿಶೇಷ ಕಾರ್ಯಕ್ರಮ

'The Bliss Bag, Project' special programme to mark World Women's Day
Photo Credit : News Kannada

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾಮ್ಸ್ ಆಫ್ ಮಂಗಳೂರು ಟ್ರಸ್ಟ್(ರಿ) ಸಂತ ಆಲೋಶಿಯಸ್‌ ಕಾಲೇಜು(ಸ್ವಾಯತ್ತ), ಮಂಗಳೂರು ಮತ್ತು ದಿ ಕಾರ್ ಕಲೆಕ್ಟಿವ್, ಕುಳೂರು ಇವರ ಸಹಯೋಗದಲ್ಲಿ ‘ದಿ ಬ್ಲಿಸ್ ಬ್ಯಾಗ್, ಪ್ರೊಜೆಕ್ಟ್’ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು.

ಮಹಿಳೆಯರ ಸ್ವದ ಬಗೆಗಿನ ಕಾಳಜಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುವ ಈ ಕಾರ್ಯಕ್ರಮದಲ್ಲಿ ಸುಮಾರು 60ಕ್ಕೂ ಹೆಚ್ಚು ಬ್ಯಾಗು ಮತ್ತು ಮಹಿಳೆಯರು ಉಪಯೋಗಿಸುವ ದಿನನಿತ್ಯದ ವಸ್ತುಗಳನ್ನು ದಾನಿಗಳಿಂದ ಸಂಗ್ರಹಿಸಲಾಯಿತು, ವಿಶ್ವ ಮಹಿಳಾ ದಿನಾಚರಣೆಯಂದು ಮಂಗಳೂರಿನ ಬೇರೆ ಬೇರೆ ಪ್ರದೇಶಗಳಲ್ಲಿ ದಿನಗೂಲಿ ಮಾಡುವ ಮಹಿಳೆಯರಿಗೆ ಈ ಬ್ಯಾಗುಗಳನ್ನು ವಿತರಿಸಲಾಯಿತು.

ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ಸ್ಟೇಟ್ ಬ್ಯಾಂಕ್, ಕಾವೂರು, ಉರ್ವ ಮಾರ್ಕೆಟ್, ಕದ್ರಿ ಮತ್ತಿತರ ಪ್ರದೇಶಗಳಲ್ಲಿ ದಿನಗೂಲಿ ಮಾಡುವ ಮಹಿಳೆಯರಿಗೆ ಬ್ಯಾಗುಗಳನ್ನು ಹಂಚಿದರು.

ಬ್ಯಾಗುಗಳ ವಿತರಣೆಯಲ್ಲಿ ಶ್ರೀ ಧನುಷ್, ಮಾನವ ಸಂಪನ್ಮೂಲ ಅಧಿಕಾರಿ, ದಿ ಕಾರ್ ಕಲೆಕ್ಟಿವ್ ಇವರು ಜೊತೆಗೂಡಿದರು. ಈ ಕಾರ್ಯಕ್ರಮವನ್ನು ಡಾ. ವಿದ್ಯಾ ವಿನುತಾ ಡಿಸೋಜ, ಸಂತ ಅಲೋಶಿಯಸ್ ಕಾಲೇಜು, ಡಾ. ನಯನ ಕೃಷ್ಣಾಪುರ, ಮಾಮ್ಸ್ ಆಫ್ ಮಂಗಳೂರು ಮತ್ತು ಶ್ರೀಮತಿ ಆನ್ನೇಸ್ ಫೆರ್ನಾಂಡಿಸ್ ಇವರು ಸಂಯೋಜಿಸಿದರು.

ಮಾಮ್ಸ್ ಆಫ್ ಮಂಗಳೂರು ಫೇಸ್ ಬುಕ್ ಸಮುದಾಯದ ತಮ್ಮ ವಿನೂತನ ಕಾರ್ಯಕ್ರಮಗಳಿಂದ ಗುರುತಿಸಿಕೊಂಡಿದ್ದು, ದಕ್ಷಿಣ ಕನ್ನಡದ ಮಹಿಳೆಯರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗೆಗೆ ವಿಶೇಷ ಕಾಳಜಿಯನ್ನು ಹೊಂದಿರುವ ಸಮುದಾಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು