ಮಂಗಳೂರು: ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ಮತ್ತು ರೋಟರಿ ಮಂಗಳೂರು ಡೌನ್ ಟೌನ್ ಸಹಯೋಗದಲ್ಲಿ ಮಾನಸಿಕ ಸ್ವಾಸ್ಥ್ಯ ಸಮುದಾಯದ ಕಡೆಗೆ-ಸರಣಿ ೭ರ ಉದ್ಘಾಟನಾ ಸಮಾರಂಭ ಜುಲೈ ೧೩ರಂದು ಟಿವಿ ರಮಣ್ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ.
ಇದು ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಅನಿರ್ವೇದ ಮಾನಸಿಕ ಆರೋಗ್ಯ ಸಂಪನ್ಮೂಲ ಕೇಂದ್ರ ಮತ್ತು ರೋಟರಿ ಮಂಗಳೂರು ಡೌನ್ ಟೌನ್ ಸಹಯೋಗದ ಯೋಜನೆಯಾಗಿದ್ದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಮಾನಸಿಕ ಆರೋಗ್ಯ ಸೇವೆಗಳ ಕುರಿತು ಸಮುದಾಯಗಳಿಗೆ ಮಾರ್ಗದರ್ಶನ ನೀಡುವ ಮೂಲಕ ವಿವಿಧ ಸಮುದಾಯ ಗುಂಪುಗಳನ್ನು ತಲುಪಲುಸಾಧ್ಯವಾಗಿದೆ ಎಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಆಫ್ ಮಂಗಳೂರಿನ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಹೇಳಿದರು.
ಈ ಕುರಿತಂತೆ ಮಾಹಿತಿ ನೀಡಿದ ಅವರು ಪದ್ಮಶ್ರೀ ಡಾ. ಮಾತಾ ಬಿ ಮಂಜಮ್ಮ ಜೋಗತಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಅವರ ಜೀವನ ಕಥೆ ಆಧಾರಿತ ನಾಟಕ ಮಾತಾ ಹಾಗೂ ಮಾನಸಿಕ ಆರೋಗ್ಯ ತಂಡದೊಂದಿಗೆ ತೃತೀಯ ಲಿಂಗಿ ಸಮುದಾಯದ ಸಂವಾದವನ್ನು ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಂ ರಂಗನಾಥ ಭಟ್, ಡಾಶ್ವೇತಾ ಕೆ.ಟಿ ರೊಟೇರಿಯನ್ ಗಣೇಶ್ ಪ್ರಭು ಡಾ ಮಾಲಿನಿ ಹೆಬ್ಬಾರ್ ಉಪಸ್ಥಿತರಿದ್ದರು.