Categories: ಮಂಗಳೂರು

ಸುಳ್ಯ: ಚಿನ್ನಾಭರಣ ದರೋಡೆ ಪ್ರಕರಣ, ಆರೋಪಿಗಳ ಬಂಧನ

ಸುಳ್ಯ: ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್ ರವರ ಮನೆಗೆ ಮೇ. 3 ರಂದು ರಾತ್ರಿ ಕಳ್ಳರು ನುಗ್ಗಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬೆಂಗಳೂರು ಗೋವಿಂದರಾಜನಗರ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ ಚಿನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ, ಸಂಶಯಗೊಂಡ ಚಿನ್ನದಂಗಡಿಯವರು ಪೋಲೀಸರಿಗೆ ಮಾಹಿತಿ ನೀಡಿದರೆನ್ನಲಾಗಿದೆ. ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಮೈಸೂರಿನ ಇಬ್ಬರು ವ್ಯಕ್ತಿಗಳ ಹೆಸರು ಹೇಳಿದ. ಪೋಲೀಸರು ಆ ಇಬ್ಬರನ್ನು ಪತ್ತೆಹಚ್ಚಿ ಹಿಡಿದು ವಿಚಾರಿಸಿದಾಗ ಸುಳ್ಯದಲ್ಲಿ ಕಳವು ನಡೆಸಿರುವುದನ್ನು ಒಪ್ಪಿಕೊಂಡರೆಂದು ತಿಳಿದು ಬಂದಿದೆ.

ಕದ್ದ ಚಿನ್ನಾಭರಣಗಳಲ್ಲಿ ಕೆಲವನ್ನು ಅವರು ಮಾರಾಟ ಮಾಡಿದ್ದು ಪೋಲೀಸರು ಅದನ್ನು ವಶವಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.

ಘಟನೆಯ ವಿವರ:  ಅರಂಬೂರಿನಲ್ಲಿರುವ ಎಸ್.ಸಂಶುದ್ದೀನ್ ರವರ ಮನೆಗೆ ಮೇ 3ರಂದು ರಾತ್ರಿ ಕಳ್ಳರು‌ ನುಗ್ಗಿ‌ ಸುಮಾರು ರೂ‌. 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಒಂದು ರಿವಾಲ್ವರ್ ಕಳವುಗೈದಿದ್ದರು.‌

ಸಂಶುದ್ದೀನ್ ಅವರು ತಮ್ಮ ಕುಟುಂಬದೊಂದಿಗೆ ಮಂಗಳೂರಿಗೆ ಹೋಗಿದ್ದಾಗ ಈ ಕೃತ್ಯ ನಡೆದಿತ್ತು. ಅವರು ಸುಳ್ಯ ಪೋಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.

ಅವರ ಮನೆಯಿಂದ ಬೆಲೆಬಾಳುವ 14 ಬ್ರಾಂಡೆಡ್ ವಾಚ್, 20 ಚಿನ್ನದ ಉಂಗುರ, 3 ಪೆಂಡೆಂಡ್, ಡೈಮಂಡ್ ಬ್ರಾಸ್ಲೈಟ್ 2, ಡೈಮಂಡ್ ಸರ 1, ರೂ‌ 55,000 ನಗದು‌ ಹಾಗೂ ಒಂದು ರಿವಾಲ್ವರ್ ಸೇರಿ ಒಟ್ಟು ರೂ. 20 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳ್ಳರು ಕದ್ದಿದ್ದರು. ಇದೀಗ ಕಳ್ಳರು ಪೋಲೀಸರ ಅತಿಥಿಯಾಗಿದ್ದಾರೆ.

Ashika S

Recent Posts

ಡ್ರೆಸ್ಸಿಂಗ್ ರೂಮ್​ನಲ್ಲಿ ಕಣ್ಣೀರಿಟ್ಟ ರೋಹಿತ್ ಶರ್ಮಾ; ಯಾಕೆ ಗೊತ್ತ ?

ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಸೋಮವಾರ ನಡೆದ 55ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ…

3 mins ago

ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮೋದಿ ಮನವಿ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಎಂದರೆ ಮಂಗಳವಾರ ನಡೆಯುತ್ತಿದೆ. ದೇಶದ 93 ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು…

19 mins ago

ಪ್ರಜ್ವಲ್ ರೇವಣ್ಣನ ಗೆ ಕಠಿಣಾತಿ ಕಠಿಣ ಶಿಕ್ಷೆ ನೀಡಬೇಕು; ಪ್ರಧಾನಿ ಮೋದಿ

ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆ ತಂದು ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೊದಲ ಬಾರಿಗೆ…

23 mins ago

2ನೇ ಹಂತದ ಲೋಕಸಭೆ ಚುನಾವಣೆ: ಮತ ಚಲಾಯಿಸಿದ ಬಿಎಸ್​ ವೈ

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಬಿಎಸ್​…

36 mins ago

2ನೇ ಹಂತದ ಲೋಕಸಭೆ ಚುನಾವಣೆ; ಕೊಪ್ಪಳದಲ್ಲಿ ಮತದಾನ ಬಹಿಷ್ಕಾರ

ಲೋಕಸಭೆ ಚುನಾವಣೆಗೆ ರಾಜ್ಯದ ಎರಡನೇ ಹಂತದ ಮತದಾನ ಇಂದು (ಮೇ 7) ಆರಂಭವಾಗಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ…

45 mins ago

30 ಕೋಟಿ ರೂ. ನಗದು ಪತ್ತೆ: ಸಚಿವ ಆಲಂಗೀರ್​ ಆಪ್ತ ಸಂಜೀವ್​ ಲಾಲ್ ಬಂಧನ

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾರ್ಖಂಡ್​ನ ಸಚಿವ ಆಲಂಗೀರ್ ಆಲಮ್​ ಆಪ್ತ ಸಂಜೀವ್​ ಲಾಲ್ ಅವರನ್ನು ಬಂಧಿಸಿದ್ದಾರೆ. ಜಾರ್ಖಂಡ್ ಸಚಿವ ಅಲಂಗೀರ್…

1 hour ago