News Karnataka Kannada
Thursday, May 02 2024
ಮಂಗಳೂರು

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ದೊಡ್ಡ ಕನಸು ಕಾಣಬೇಕು: ರಕ್ಷಿತ್ ಶಿವರಾಂ

Students from rural areas should dream big in education: Rakshit Shivaram
Photo Credit : News Kannada

ಬೆಳ್ತಂಗಡಿ: ಅಳದಂಗಡಿ ಅರಮನೆ ಕುಟುಂಬಸ್ಥರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಳೆದ 20 ವರ್ಷಗಳಿಂದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಅಭಿನಂದನೀಯ ಕಾರ್ಯ. ಇಂತಹ ಪುಣ್ಯ ಕ್ಷೇತ್ರ ಕೊಡುಗೆಯನ್ನು ವಿದ್ಯಾರ್ಥಿಗಳು ಸ್ವೀಕರಿಸಿ ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ಮುಂದಾಗ ಬೇಕು ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅದ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.

ಅವರು ಭಾನುವಾರ ಅಳದಂಗಡಿ ಶ್ರಿ ಸೋಮನಾಥೆಶ್ವರಿ ದೇವಸ್ಥಾನದ ಮುಂಬಾಗ ಅಳದಂಗಡಿ ಶ್ರಿ ಸತ್ಯದೇವತಾ ದೇವಸ್ಥಾನ, ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜು ,ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಉಚಿತ ಅರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ಬು ಉದ್ಘಾಟಿಸಿ ಮಂಗಳೂರು, ಉಡುಪಿಯಲ್ಲಿ ಅತಿ ಹೆಚ್ಚು ಆಸ್ಪತ್ರೆಗಳು ಇದ್ದು ಇಂತಹ ಆಸ್ಪತ್ರೆಗಳು ಬೆಳ್ತಂಗಡಿ, ಪುತ್ತುರು, ಸುಳ್ಯಯದಂತಹ ಗ್ರಾಮೀಣ ಪ್ರದೇಶಗಳಿಗೆ ಬರಬೇಕು.

ಇದಕ್ಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಕನಸನ್ಬು ಕಂಡು ವೈದ್ಯರಾಗಿ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ಪ್ರಾರಂಬಿಸುವ ಸಂಕಲ್ಪ ಮಾಡಿ.ಅಲ್ಲದೆ ಅರಮನೆ ಕುಟುಂಬದಲ್ಲಿ ಅತ್ಯುನ್ನತ ವೈದ್ಯರಿದ್ದು ನೀವು ಅಳದಂಗಡಿ ಭಾಗದಲ್ಕಿ ಆಸ್ಪತ್ರೆಯನ್ನು ಪ್ರಾರಂಬಿಸಿ ಎಂದರು.

ಕೆ ಎಂ ಸಿ ಆಸ್ಪತ್ರೆಯ ಪ್ರೊಪೆಸರ್ ,ಎಲುಬು ಮತ್ತು ಕೀಲು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ ಆತ್ಮಾನಂದ ಎಸ್ ಹೆಗ್ಡೆ ಮಾತನಾಡಿ ರಕ್ತದಾನ ಶ್ರೇಷ್ಟ ದಾನವಾಗಿದ್ದು ಇದು ಇನ್ನೊಬ್ಬರ ಜೀವ ಉಳಿಸುವ ಜೊತೆ ಅವರ ಅರೋಗ್ಯ ಕಾಪಾಡುತ್ತದೆ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾದಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಂಸ್ಥೆಯಾಗಿದ್ದು ಇಂತಹ ಸಂಘ ಸಂಸ್ಥೆಗಳಿಂದ ರಕ್ತ ಸಂಗ್ರಹಿಸಿ ಲೇಡಿಗೋಶನ್ ಅಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ರಕ್ತನೀಡುವ ಸಂಸ್ಥೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ ದಿಶಾ ಅಜಿಲ ಅಳದಂಗಡಿ,ಡಾ ಪ್ರೌಸ್ಟಿಲ್ ಅಜಿಲ ಅಳದಂಗಡಿ,ನಾಟಿ ವೈದ್ಯ ಬೇಬಿ ಪೂಜಾರಿ ಪಿಲ್ಯ,ಡಾ ಶಶಿದರ ಡೋಂಗ್ರೆ ಅಳದಂಗಡಿ,ಡಾ ಸುಶ್ಮಾ ಎಸ್ ಡೋಂಗ್ರೆ ಅಳದಂಗಡಿ ಉಪಸ್ಥಿತರಿದ್ದರು.

ಶ್ರಿ ಸತ್ಯದೇವತಾ ದೈವಸ್ಥಾನದ ಅಡಳಿತದಾರರಾದ ಶಿವಪ್ರಸಾದ್ ಅಜಿಲ ಸ್ವಾಗತಿಸಿ ಪ್ರಸಸ್ಥಾವಿಕವಾಗಿ ಮಾತನಾಡಿ ದೈವ ದೇವರ ಪ್ರಾಸಾದ ರೂಪದಲ್ಲಿ ಉಚಿತ ಪುಸ್ತಕವನ್ನು ಕಳೆದ 19 ವರ್ಷದಲ್ಲಿ ನೀಡುತ್ತಿದ್ದು ಇದು ಮಕ್ಕಳಿಗೆ ಪ್ರೇರಣೆಯಾಗಲಿ ಎನ್ನುವ ಉದ್ದೇಶ. ಈ ಕಾರ್ಯಕ್ರಮಕ್ಕೆ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸಂಘಟನೆ ಮತ್ತು ಕ್ಷೇತ್ರದ ಭಕ್ತಾದಿಗಳು ಶಕ್ತಿ ತುಂಬುತ್ತಿದ್ದಾರೆ ಎಂದರು.ಸಂದೀಪ್ ನೀರಲ್ಕೆ ವಂದಿಸಿ ಪ್ರಜ್ನಾ ನಿರೂಪಿಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು