Categories: ಮಂಗಳೂರು

ಮಂಗಳೂರಿನಿಂದ ಹೊರಟ ನೌಕೆ ಮುಳುಗಡೆ: ಪವಾಡ ಸದೃಶ್ಯರಾಗಿ ಪಾರಾದ ಸಿಬ್ಬಂದಿ

ಮಂಗಳೂರು: ಮಂಗಳೂರು ಹಳೇ ಬಂದರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ನೌಕೆಯೊಂದು ಲಕ್ಷದ್ವೀಪ ಕರಾವಳಿಯಲ್ಲಿ ಮುಳುಗಿದ ಘಟನೆ ನಡೆದಿದೆ. ಅದರಲ್ಲಿದ್ದ 8 ಜನ ಸಿಬಂದಿ ಸಮುದ್ರದಲ್ಲೇ ಮೂರು ದಿನ ಅನ್ನ ಆಹಾರ, ನೀರಿಲ್ಲದೇ ಪವಾಡ ಸದೃಶ್ಯರಾಗಿ ಬದುಕಿ ಮರು ಜನ್ಮ ಪಡೆದಿದ್ದಾರೆ.

ಮಾರ್ಚ್ 12 ತಮಿಳುನಾಡು ಮೂಲದ MSV ವರದರಾಜು ಎಂಬ ಸರಕು ಸಾಗಣೆಯ ನೌಕೆ ಮಂಗಳೂರು ಹಳೇ ಬಂದರಿಂದ ಸರಕು ತುಂಬಿಸಿ ಲಕ್ಷದ್ವೀಪದತ್ತ ಅಗತಿ ದ್ವೀಪದತ್ತ ಪ್ರಯಾಣ ಬೆಳೆಸಿತ್ತು. ಹಡಗಿನಲ್ಲಿ ಕ್ಯಾಪ್ಟನ್ ಭಾಸ್ಕರನ್, ಸಿಬಂದಿಗಳಾದ ನಾಗಲಿಂಗಂ, ನಲ್ಲಮುತ್ತು, ಮಣಿದೇವನ್ ವೇಲು, ಅಜಿತ್, ವಿಘ್ನೇಶ್ ಕುಮಾರ್, ಕುಪ್ಪುರಾಮನ್, ಮುರುಗನ್ ಸೇರಿ 8 ಜನ ಸಿಬಂದಿಗಳಿದ್ದರು.

13 ರಂದು ಅಂದರೋತ್ ದ್ವೀಪದಲ್ಲಿ ಅರ್ಧದಷ್ಟು ಸರಕು ಖಾಲಿ ಮಾಡಿ ರಾತ್ರೀಯೇ ಅಗತ್ತಿ ದ್ವೀಪದತ್ತ ಪ್ರಯಾಣ ಬೆಳೆಸಿತ್ತು. ಮುಂಜಾನೆ ಸುಮಾರಿಗೆ ದೋಣಿಯ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಮುಳುಗಲಾರಂಭಿದೆ. ಸಿಬ್ಬಂದಿ ದುರಸ್ತಿ ಮಾಡಲು ಸಾಕಷ್ಟು ಪ್ರಯತ್ನಿದರೂ ವಿಫಲವಾಗಿ ದೋಣಿ ಮುಳುಗಡೆಯಾಗಿದೆ.

ಕೊನೆಗೆ ಅದರಲ್ಲಿದ್ದ ಜೀವರಕ್ಷಕ ಸಾಧನಗಳೊಂದಿಗೆ ಪುಟ್ಟ ದೋಣಿಯೊಂದಿಗೆ ಸಮುದ್ರಕ್ಕೆ ಇಳಿದಿದ್ದಾರೆ. ಈ ಸಂದರ್ಭ ಅವರಲ್ಲಿದ್ದ ಸಂಪರ್ಕವೂ ಕಡಿದು ಹೋಗಿತ್ತು. ಕೂಡಲೇ ಅವರು ಮಂಗಳೂರು ಮತ್ತು ಲಕ್ಷದ್ವೀಪದ ಕೋಸ್ಟ್ ಗಾರ್ಡಿಗೆ ಸಹಾಯಕ್ಕೆ ಸಂದೇಶ ಕಳಿಸಿದ್ದರು.

 

ಮಾರ್ಚ್ 15 ರಿಂದ 17 ರ ವರೆಗೆ ಕೋಸ್ಟ್ ಗಾರ್ಡ್ ಅವರನ್ನು ಹುಡುಕು ಪ್ರಯತ್ನ ಮಾಡಿ ವಿಫಲವಾಗಿತ್ತು. ಮಾರ್ಚ್ 18 ರಂದು ಲಕ್ಷದ್ವೀಪದ ಮೀನುಗಾರಿಕಾ ದೋಣಿಯೊಂದಕ್ಕೆ ದೂರದ ಸಮುದ್ರದಲ್ಲಿ ಪುಟ್ಟ ದೋಣಿಯಲ್ಲಿ ಜನ ಸಹಾಯಕ್ಕಾಗಿ ಕೈ ಬೀಸುವುದನ್ನು ಗಮನಿಸಿ ಅಲ್ಲಿಗೆ ತೆರಳಿದ ಮೀನುಗಾರರು ಆ 8 ಮಂದಿಯನ್ನು ರಕ್ಷಣೆ ಮಾಡಿ ಕಲ್ತೆನಿಗೆ ಕರೆದುಕೊಂಡು ಹೋಗಿ ಉಪಚರಿಸಿ ಬಳಿಕ ಕೋಸ್ಟ್‌ ಗಾರ್ಡ್ ಗೆ ಮಾಹಿತಿ ನೀಡಿದ್ದರು, ಅದರಂತೆ ಕೋಸ್ಟ್ ಗಾರ್ಡ್ ಸ್ಪೀಡ್ ಬೋಟಿನಲ್ಲಿ ಕಲ್ತೆನಿಗೆ ತೆರಳಿ 8 ಮಂದಿ ಮೀನುಗಾರರನ್ನು ಕೊಚ್ಚಿಗೆ ತಲುಪಿಸಿದ್ದಾರೆ.

ಅನ್ನ ನೀರು ಇಲ್ಲದೆ ಮೂರು ದಿಗಳ ಕಾಲ ಸಮುದ್ರ ಮಧ್ಯೆ ಸಾವು ಬದುಕಿನ ಹೋರಾಟದಲ್ಲಿದ್ದ 8 ಮೀನುಗಾರರಿಗೆ ಕಲ್ತೆನಿ ಮೀನುಗಾರರು ಸಕಾಲದಲ್ಲಿ ಸಿಗದೆ ಹೋಗಿದ್ದರೆ ಬಹುಷ ಬದುಕಿ ಉಳಿಯುವುದು ಕಷ್ಟವಾಗಿತ್ತು ಎಂದು ಬದುಕಿ ಬಂದ ಸಿಬ್ಬಂದಿ ಪ್ರತಿಕ್ರಿಸಿದ್ದಾರೆ.

Nisarga K

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

3 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

4 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

4 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

5 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

5 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

5 hours ago