ಮಂಗಳೂರು: ಯುಕೋ ಬ್ಯಾಂಕ್ನ ಖಾತೆದಾರರಿಗೆ 820. ಕೋಟಿ ಜಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸೇರಿ ದೇಶದ ಹಲವಡೆ ಸಿಬಿಐ ದಾಳಿ ನಡೆಸಿದೆ. ಮಂಗಳೂರು, ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ನಗರಗಳ 13 ಕಡೆ ದಾಳಿ ಮಾಡಿದೆ.
ನವೆಂಬರ್ ತಿಂಗಳಲ್ಲಿ ಐಎಂಪಿಎಸ್ ಮೂಲಕ ಯುಕೋ ಬ್ಯಾಂಕ್ನ 41 ಸಾವಿರ ಖಾತೆದಾರರಿಗೆ 820 ಕೋಟಿ ರೂ.ಗಳ ಹಣ ಜಮೆ ಆಗಿತ್ತು. ಬ್ಯಾಂಕ್ನೊಂದಿಗೆ ಕಾರ್ಯನಿರ್ವಹಿಸುವ ಇಬ್ಬರು ಇಂಜಿನಿಯರ್ಗಳು ಹಾಗೂ ಇತರರ ವಿರುದ್ಧ ಯುಕೋ ಬ್ಯಾಂಕ್ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ಸಿಬಿಐ ತನಿಖೆ ನಡೆಸಿದೆ.
ನ.10 ಮತ್ತು 13ರ ಮಧ್ಯೆ 8.53 ಲಕ್ಷಕ್ಕೂ ಹೆಚ್ಚು ಐಎಂಪಿಎಸ್ ವಹಿವಾಟು ಆಗಿದೆ. ಯುಕೋ ಬ್ಯಾಂಕ್ನ ಹಲವಾರು ಗ್ರಾಹಕರು ಈ ವಹಿವಾಟಿನ ಲಾಭ ಪಡೆದು ಮೊತ್ತವನ್ನು ವಿಥ್ಡ್ರಾ ಮಾಡಿಕೊಂಡಿದ್ದಾರೆ. ಹೀಗಾಗಿ ಮಂಗಳೂರು ಸೇರಿ ದೇಶದ ಹಲವು ಯುಕೋ ಬ್ಯಾಂಕ್ ಶಾಖೆಗಳಿಗೆ ದಾಳಿ ಮಾಡಿದೆ.
ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ದಾಖಲೆಗಳು ವಶ ಪಡೆದುಕೊಂಡಿದ್ದಾರೆ.