ಪುತ್ತೂರು: ಒಮ್ನಿ ಮತ್ತು ಆಲ್ಟೋ ನಡುವೆ ಡಿಕ್ಕಿಯಾಗಿ ವಾಹನದಲ್ಲಿದ್ದವರು ಗಾಯಗೊಂಡ ಘಟನೆ ಪುತ್ತೂರಿನ ನೆಹರು ನಗರದ ಕಲ್ಲೇಗದಲ್ಲಿ ನಡೆದಿದೆ.
ಯಕ್ಷಗಾನ ಕಾರ್ಯಕ್ರಮ ಮುಗಿಸಿ ಕಲಾವಿದರೊಬ್ಬರು ಒಮ್ಮಿ ಕಾರಿನಲ್ಲಿ ಪುತ್ತೂರಿಗೆ ಬರುತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಆಲ್ಟೋ ಕಾರು ಒಮ್ನಿಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಬಸ್ಸಿಗೂ ಗುದ್ದಿದೆ. ಘಟನೆಯಲ್ಲಿ ಒಮ್ನಿಯಲ್ಲಿದ್ದ ಯಕ್ಷಗಾನ ಕಲಾವಿದ ಹಾಗು ಆಲ್ಟೋದಲ್ಲಿ ಪ್ರಯಾಣಿಕರೊಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.