News Karnataka Kannada
Monday, April 29 2024
ಮಂಗಳೂರು

ಪಿಯುಸಿ ಫಲಿತಾಂಶ: ಅನುಷಾ ಮಲ್ಯ, ಇಲ್ಹಾಮ್ ರಫೀಕ್ ವಿಶೇಷ ಸಾಧನೆ

Untitled 2 Recovered Recovered Recovered
Photo Credit :

ಮಂಗಳೂರು: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾರೆ .ಕಾಮರ್ಸ್ ಮತ್ತು ಸೈನ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐವರು ಟಾಪರ್ ಆಗಿದ್ದು ಜಿಲ್ಲೆಗೆ ಹೆಸರು ತಂದಿದ್ದಾರೆ.

ಕಾಮರ್ಸ್ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಮರ್ಥ್ ಜೋಶಿ ಮಂಗಳೂರು ಅಲೋಶಿಯಸ್ ಕಾಲೇಜಿನ ಅನುಷಾ ಮಲ್ಯ ಕೆನರಾ ಪಿಯು ಕಾಲೇಜಿನ ಪ್ರವೀಣ್ ಉಳ್ಳಾಲ್ 600 ರಲ್ಲಿ ಐ 595 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅಲೋಶಿಯಸ್ ಕಾಲೇಜಿನ ಇಲ್ಹಾಮ್ ರಫೀಕ್ ಆಳ್ವಾಸ್ ಕಾಲೇಜಿನ ಶ್ರೀಕೃಷ್ಣ ಪೆಜತ್ತಾಯ 597 ಅಂಕ ಪಡೆದು ಗಮನ ಸೆಳೆದಿದ್ದಾರೆ .

ಅಲೋಶಿಯಸ್ ಕಾಲೇಜಿನಲ್ಲಿ ಅನುಷಾ ಮಲ್ಯ ಮತ್ತು ಇಲ್ಹಾಮ್ ರಫೀಕ್ ಹೆತ್ತವರು ಬಂದು ಮಕ್ಕಳೊಂದಿಗೆ ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡರು.

ನಿರಂತರ ಅಧ್ಯಯನದಿಂದ  ಈ ಸಾಧನೆ ಸಾಧ್ಯವಾಗಿದೆ ,ಆದರೆ ಗರಿಷ್ಠ ಅಂಕ ಪಡೆಯುತ್ತೇನೆಂದು ನಿರೀಕ್ಷೆ ಮಾಡಿರಲಿಲ್ಲ ಸಂತೋಷವಾಗಿದೆ ಮುಂದೆ ಇದೇ ಕಾಲೇಜಿನಲ್ಲಿ ಅಧ್ಯಯನ ಮುಂದುವರೆಸುತ್ತೇನೆ ಹೆತ್ತವರು ಮತ್ತು ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹದಿಂದ ಸಾಧನೆ ಮಾಡುವಂತಾಗಿದೆ ಉನ್ನತ ಅಧ್ಯಯನ ಕೈಗೊಳ್ಳಬೇಕು ಎಂಬ ಬಯಕೆಯಿದೆ .ಇಂತಹದ್ದೇ ಆಗಬೇಕು ಅಂತ ಈಗಲೇ ನಿರ್ಣಯ ಮಾಡಿಲ್ಲ ಎಂದು ಅನುಷಾ ಮಲ್ಯ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇಲ್ಹಾಮ್ ರಫೀಕ್ ಯೆನಪೊಯ ಮೆಡಿಕಲ್ ಕಾಲೇಜಿನಲ್ಲಿ ಸೈಕಾಲಜಿ ಅಧ್ಯಯನ ಮಾಡುವ ಗುರಿ ಇಟ್ಟುಕೊಂಡಿದ್ದಾರೆ ಸೈಕಾಲಜಿ ನನ್ನ ಇಷ್ಟದ ಸಬ್ಜೆಕ್ಟ್ ಅದಕ್ಕಾಗಿಯೇ ಸೈನ್ಸ್ ಕಲಿತಿದ್ದೇನೆ ಮುಂದೆ ಅದೇ ವಿಷಯದಲ್ಲಿ ಬಿಎಸ್ಸಿ ಮಾಡಿ ಎಂಎಸ್ ಮಾಡುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು