ಮಂಗಳೂರು

ಮಂಗಳೂರಿನಲ್ಲಿ ಪಿಲಿ ನಲಿಕೆ ಸೀಸನ್-8: ವೈಭವದಲ್ಲಿ ಮಿಂದೆದ್ದ ಬಾಲಿವುಡ್ ಸ್ಯಾಂಡಲ್ ವುಡ್ ತಾರೆಯರು

ಮಂಗಳೂರು: ಮಂಗಳೂರಿನಲ್ಲಿ ಮಿಥುನ್ ರೈ ನೇತೃತ್ವದಲ್ಲಿ, ಬಾಲಿವುಡ್ ಸ್ಯಾಂಡಲ್ ವುಡ್ ತಾರಾ ವೈಭವದಲ್ಲಿ ಈ ಬಾರಿ ಪಿಲಿ ನಲಿಕೆ ಸೀಸನ್ -8 ಮಂಗಳೂರಿನ ಉರ್ವ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ.

ಈ ಬಾರಿ ಪಿಲಿ ನಲಿಕೆಗೆ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಹಾಗೂ ಕ್ರಿಕೆಟ್ ಲೋಕದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್, ಚಿತ್ರ ನಟ ರಾಜ್ ಬಿ ಶೆಟ್ಟಿ, ಬಿಗ್ ಬಾಸ್ ಸ್ಪರ್ಧಿಗಳಾದ ಅರವಿಂದ್ ಕೆಪಿ, ದಿವ್ಯ ಉರುಡುಗ ಭಾಗಿಯಾಗಿ ಈ ಕರಾವಳಿ ಸೊಗಡಿನ ಹುಲಿ ಕುಣಿತವನ್ನ ಕಣ್ತುಂಬಿಕೊಂಡಿದ್ದಾರೆ.

ಇನ್ನು ವೇದಿಕೆ ಏರಿ ತಾಸೆ ಏಟಿಗೆ ರಾಜ್ ಬಿ ಶೆಟ್ಟಿಯಿಂದ ಸಖತ್ ಸ್ಟೆಪ್ಸ್ ಹಾಕಿದ್ದರು. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಪಿಲಿ ನಲಿಕೆ ಹುಲಿ ವೇಷ ಸ್ಪರ್ಧೆ ನಡೆಯುತ್ತದೆ. ಈ ಬಾರಿಯ 8ನೇ ಅವೃತ್ತಿಗೆ ಸಾಕ್ಷಿಯಾದ ಸ್ಟಾರ್ ನಟ ನಟಿಯರ ದಂಡು ಆಗಮಿಸಿದೆ. ಕರಾವಳಿ ಸೊಗಡಿನ ಜಾನಪದ ಕಲೆಗೆ ಹರ್ಭಜನ್ ಸಿಂಗ್ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಅತ್ತ ಇತ್ತ ಕಣ್ಣು ಮೀಟುಕಿಸದೆ ಹುಲಿ ಕುಣಿತವನ್ನು ಸಿಂಗ್ ಕಣ್ತುಂಬಿಕೊಂಡಿದ್ದಾರೆ. ವೇದಿಕೆ ಏರಿ ಕರಾವಳಿ ಜನತೆಗೆ ತಲೆ ಭಾಗಿ ಸ್ಪಿನ್ ಮಾಂತ್ರಿಕ ನಮಸ್ಕರಿಸಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಕಂಡು ಜನ ಫುಲ್ ಖುಷ್ ಆಗಿದ್ದಾರೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಮುಂಬೈ ನಲ್ಲಿ ಸುನೀಲ್ ಶೆಟ್ಟಿ ನೇತೃತ್ವದಲ್ಲಿ ಪಿಲಿ ನಲಿಕೆ ನಡೆಸುವ ಯೋಜನೆಯಾಲಿದ್ದಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಾನ್ಯತೆ ದೊರಕುವಂತೆ ಮಾಡಲು ಪಣತೊಟ್ಟಿದ್ದಾರೆ.

Ashika S

Recent Posts

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

15 mins ago

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

40 mins ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

2 hours ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

2 hours ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

3 hours ago